Advertisement
ಮಾಜಿ ಸಚಿವ ಪಿ. ಚಿದಂಬರಂ ಪುತ್ರ ಕಾರ್ತಿ ಅವರನ್ನು ಸಿಬಿಐ ಅಧಿಕಾರಿಗಳು ಬುಧವಾರ ಬಂಧಿಸಿ ವಿಶೇಷ ಕೋರ್ಟ್‌ಗೆ ಹಾಜರುಪಡಿಸಿದ್ದರು. ಒಂದು ದಿನದ ಮಟ್ಟಿಗೆ ಕೋರ್ಟ್ ಸಿಬಿಐ ವಶಕ್ಕೆ ನೀಡಿತ್ತು. ಗುರುವಾರ ಪೂರ್ತಿಗೊಂಡ ಹಿನ್ನೆಲೆಯಲ್ಲಿ ಮತ್ತೆ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ವಿಚಾರಣೆ ವೇಳೆ ಸಿಬಿಐ ಪರ ವಾದಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ತುಷಾರ್ ಮೆಹ್ತಾ “ಈ ಪ್ರಕರಣದಲ್ಲಿ ಯಾವುದೇ ರೀತಿ ರಾಜಕೀಯ ಸೇರಿಲ್ಲ. ಸಂವಿಧಾನದ 21ನೇ ವಿಧಿಯಂತೆಯೇ ತನಿಖೆ ನಡೆಯುತ್ತಿದೆ’ ಎಂದರು. ಬಂಧನ ರಾಜಕೀಯ ಪ್ರತೀಕಾರ ಎಂಬ ಕಾಂಗ್ರೆಸ್ ನಾಯಕರ ಟೀಕೆಗೆ ಎಎಸ್‌ಜಿ ಕೋರ್ಟ್‌ನಲ್ಲಿ ಈ ಸಮರ್ಥನೆ ನೀಡಿದರು.
Related Articles
ಪುತ್ರನ ಬಂಧನದ ಹಿನ್ನೆಲೆಯಲ್ಲಿ ಈ ವರೆಗೆ ಮಾಜಿ ಸಚಿವ ಚಿದಂಬರಂ ಮಾಧ್ಯಮದವರ ಜತೆಗೆ ಮಾತನಾಡದೆ ಮೌನ ವಹಿಸಿದ್ದರು. ಕೋರ್ಟ್ ಆವರಣದಲ್ಲೂ ಅವರು ಪ್ರತಿಕ್ರಿಯೆ ನೀಡಲಿಲ್ಲ. ವಿಶೇಷ ಕೋರ್ಟ್ ಆದೇಶ ಪ್ರಕಟಿಸಿದಾಗ ಕಾರ್ತಿ ಚಿದಂಬರಂ ಅವರು “ನನ್ನ ವಿರುದ್ಧದ ಆರೋಪಗಳು ಸುಳ್ಳಾಗುವ ದಿನಗಳು ಬರುತ್ತವೆ’ ಎಂದು ಕೂಗಿ ಹೇಳಿದರು ಎಂದು “ಎನ್‌ಡಿಟಿವಿ’ ವರದಿ ಮಾಡಿದೆ. ಈ ನಡುವೆ ಸಫªರ್‌ಜಂಗ್ ಆಸ್ಪತ್ರೆಯ ವೈದ್ಯಾಧಿಕಾರಿಗಳು ಕಾರ್ತಿ ಅವರನ್ನು ಬುಧವಾರ ರಾತ್ರಿ ಹೃದ್ರೋಗ ತಪಾಸಣ ವಿಭಾಗಕ್ಕೆ ಕಳುಹಿಸಿದ್ದರು. ಗುರುವಾರ ಬೆಳಗ್ಗೆಯೇ ಅವರನ್ನು ಮತ್ತೆ ಸಿಬಿಐ ಕೇಂದ್ರ ಕಚೇರಿಗೆ ಕರೆತರಲಾಗಿತ್ತು.
Advertisement