ಬಳ್ಳಾರಿ: ಕಲಾಕ್ಷೇತ್ರ ಬಹು ವಿಸ್ತಾರವಾಗಿದ್ದು, ಕಲೆಯ ಮುಂದೆ ಎಲ್ಲರೂ ಚಿಕ್ಕವರು ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ನಿಷ್ಠಿರುದ್ರಪ್ಪ ಅಭಿಪ್ರಾಯ ಪಟ್ಟರು.
ಇಲ್ಲಿನ ವಿದ್ಯಾನಗರದ ಅಭಯ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿಹುಲಿಕುಂಟೆರಾಯ ತೊಗಲುಗೊಂಬೆ ಕಲಾ ತಂಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ವತಿಯಿಂದ ವಿಶೇಷ ಘಟಕಯೋಜನೆಯಡಿ ಈಚೆಗೆ ಆಯೋಜಿಸಲಾಗಿದ್ದಕಾರ್ತಿಕ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮಉದ್ಘಾಟಿಸಿ ಅವರು ಮಾತನಾಡಿದರು.
ವಿಶೇಷ ಆಹ್ವಾನಿತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ಕೆ.ರಂಗಣ್ಣವರ ಮಾತನಾಡಿ, ಸಾಂಸ್ಕೃತಿಕ ಲೋಕ ಅದ್ಭುತವಾದದ್ದು. ಅದಕ್ಕೆ ತನ್ನದೇ ಆದ ಮಹತ್ವವಿದೆ. ಓದು-ಬರಹ ಬಾರದ ಅನಕ್ಷರಸ್ಥರು, ವಿಶೇಷಚೇತನರು ಇತಿಹಾಸದಪುಟಗಳಲ್ಲಿ ಹೆಸರನ್ನು ದಾಖಲಿಸಿದ್ದರೆ. ಅದು ಸಾಂಸ್ಕೃತಿಕ ಕ್ಷೇತ್ರದಲ್ಲಿ ಮಾತ್ರ. ವ್ಯಕ್ತಿಯ ವ್ಯಕ್ತಿತ್ವಅನಾವರಣಗೊಳಿಸುವುದು ಸಾಂಸ್ಕೃತಿಕ ಕ್ಷೇತ್ರದಿಂದ ಮಾತ್ರ ಸಾಧ್ಯ. ಈ ಕ್ಷೇತ್ರಕ್ಕೆ ಯಾವುದೇಜಾತಿ, ಧರ್ಮದ ಸಂಕೋಲೆಗಳು ಇಲ್ಲ. ಜನರಿಗೆ ಪೌರಾಣಿಕ ಐತಿಹಾಸಿಕ ಪ್ರಜ್ಞೆ ಮೂಡಿಸಿದಕೀರ್ತಿ ತೊಗಲುಗೊಂಬೆ ಕಲಾ ಪ್ರಕಾರಕ್ಕೆ ಸಲ್ಲುತ್ತದೆ. ಈ ತೊಗಲುಗೊಂಬೆ ಕಲಾ ಪ್ರಕಾರ ಮುಂದೆ ನಾಟಕಗಳಿಗೆ ಚಲನಚಿತ್ರಗಳಿಗೆ ಪ್ರೇರಣೆ ಆಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಾನಪದ ಸಂಶೋಧಕಿ ಡಾ| ಎ.ಎನ್. ಸಿದ್ದೇಶ್ವರಿ ಮಾತನಾಡಿ, ಕನ್ನಡ ಮತ್ತು ತೆಲುಗು ಭಾಷೆಗಳು ಅಣ್ಣ ತಮ್ಮಂದಿರುಇದ್ದಂತೆ. ಈ ಎರಡೂ ಭಾಷೆಗಳಲ್ಲಿ ಬರುವ ಎಲ್ಲಾ ಕಲಾ ಪ್ರಕಾರಗಳು ಅನೇಕ ರೂಪಾಂತರ ಹೊಂದಿ, ಎರಡು ಭಾಷೆಯಲ್ಲಿ ಚಾಲ್ತಿಯಲ್ಲಿರುವುದನ್ನು ನಾವು ಕಾಣಬಹುದು ಎಂದರು.
ಮುಖ್ಯ ಅತಿಥಿ ಇತಿಹಾಸ ಪ್ರಾಧ್ಯಾಪಕಆಲಂಬಾಷ ಮಾತನಾಡಿ, ಇಂದಿನ ಮಕ್ಕಳಲ್ಲಿಪಾಲಕ – ಪೋಷಕರು ಸಾಂಸ್ಕೃತಿಕ ಸಂಸ್ಕಾರಬೆಳೆಸುವುದು ಅತ್ಯಂತ ಜರೂರಾಗಿದೆ ಎಂದರು. ಅಭಯ ಆಂಜನೇಯಸ್ವಾಮಿ ಸೇವಾ ಟ್ರಸ್ಟ್‌ನ ಅಧ್ಯಕ್ಷ ಎ.ಸಿ. ವೆಂಕಟಸ್ವಾಮಿ, ಲೆಕ್ಕ ಪರಿಶೋಧಕಿಅನುಪಮ, ರಂಗಭೂಮಿ ಕಲಾವಿದ ರಾಮೇಶ್ವರಎಚ್.ಎಂ., ಶಿಕ್ಷಕ ಕೆ.ಕಾಂತರಾಜು ಇದ್ದರು.
ಸಿಂ ಗೇರಿಯ ಜಿ.ಮಂಜುನಾಥ್ ತಂಡದವರಿಂದ ಶ್ರೀ ಕೃಷ್ಣದೇವರಾಯ ತೊಗಲುಗೊಂಬೆ ರೂಪಕ ಪ್ರದರ್ಶನ ಪ್ರಸ್ತುತ ಪಡಿಸಲಾಯಿತು. ಬಳ್ಳಾರಿಯ ಕೆ.ಆರ್.ನವ್ಯ ಮತ್ತು ಸಂಗಡಿಗರು ವಚವಗಾಯನ ಮಾಡಿದರು. ಹುಲಿಕುಂಟೆರಾಯ ತೊಗಲುಗೊಂಬೆ ಕಲಾ ತಂಡದ ಅಧ್ಯಕ್ಷ ಕೆ.ಹೊನ್ನೂರುಸ್ವಾಮಿ ಪ್ರಾಸ್ತಾವಿಕಮಾತನಾಡಿದರು. ಶಿಕ್ಷಕ ಬಸವರಾಜ ಅಮಾತಿ ನಿರೂಪಿಸಿ ಸ್ವಾಗತಿಸಿದರು