Advertisement

ಭಾರತ ಮೂಲದ ಕಾರ್ತಿಕ್‌ಗೆ ನ್ಯಾ.ಜಿಯೋಗ್ರಫಿ ಪ್ರಶಸ್ತಿ ಗರಿ

09:51 PM Feb 21, 2023 | Team Udayavani |

ವಾಷಿಂಗ್ಟನ್‌ : ಭಾರತೀಯ ಮೂಲದ ಸಾಫ್ಟ್ ವೇರ್‌ ಇಂಜಿನಿಯರ್‌ ಹಾಗೂ ಹವ್ಯಾಸಿ ಛಾಯಾಗ್ರಾಹಕ ಕಾರ್ತಿಕ್‌ ಸುಬ್ರಮಣಿಯಂ, ನ್ಯಾಷನಲ್‌ ಜಿಯೋಗ್ರಫಿಯ “ಪಿಕ್ಚರ್‌ ಆಫ್ ದಿ ಇಯರ್‌’ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Advertisement

5 ಸಾವಿರ ಛಾಯಾಚಿತ್ರಗಳ ಪೈಪೋಟಿ ನಡುವೆ ಕಾರ್ತಿಕ್‌ ಅವರ‌ “ಡಾನ್ಸ್‌ ಆಫ್ ದಿ ಈಗಲ್ಸ್‌’ ಶೀರ್ಷಿಕೆಯ ಛಾಯಾಚಿತ್ರಕ್ಕೆ ಪ್ರಶಸ್ತಿ ಲಭಿಸಿದ್ದು, ಚಿಲ್ಕಟ್‌ ಬಾಲ್ಡ್‌ ಈಗಲ್‌ ಪ್ರಿಸರ್ವ್‌ನಲ್ಲಿ ಆ ಚಿತ್ರ ಸೆರೆ ಹಿಡಿಯಲಾಗಿದೆ.

ನವೆಂಬರ್‌ನಲ್ಲಿ ಹದ್ದುಗಳು ಮೀನುಗಳನ್ನು ಹಿಡಿಯಲೆಂದು ಚಿಲ್ಕಟ್‌ ಬಾಲ್ಡ್‌ಗೆ ನೂರಾರು ಸಂಖ್ಯೆಯಲ್ಲಿ ಆಗಮಿಸುವುದನ್ನು ಗಮನಿಸಿದ್ದ ಕಾರ್ತಿಕ್‌, 2022ರಲ್ಲಿ ಅಂಥದ್ದೇ ಸಂದರ್ಭದಲ್ಲಿ ಛಾಯಾಚಿತ್ರವನ್ನು ಸೆರೆ ಹಿಡಿದಿದ್ದರು. ಪ್ರಶಸ್ತಿ ಲಭಿಸುವುದರ ಜತೆಗೆ ನ್ಯಾ.ಜಿಯೋಗ್ರಫಿ ನಿಯತಕಾಲಿಕೆಯಲ್ಲಿ 2022ರ ಸಾಲಿನ ಅತ್ಯುತ್ತಮ ಛಾಯಾಗ್ರಾಹಕರ ಸಾಲಿನಲ್ಲೂ ಕಾರ್ತಿಕ್‌ ಕಾಣಿಸಿಕೊಳ್ಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next