ಇಸ್ಲಾಮಾಬಾದ್: ಪಾಕಿಸ್ತಾನದ ಕರ್ತಾಪುರದಲ್ಲಿರುವ ದರ್ಬಾರ್ ಸಾಹಿಬ್ ಗುರುದ್ವಾರವನ್ನು ಸೆಪ್ಟೆಂಬರ್‌ನಲ್ಲಿ ತೆರೆಯಲಿದ್ದು, ಸಂಪೂರ್ಣ ಲಸಿಕೆ ಪಡೆದಿರುವ ಭಾರತೀಯ ಸಿಖ್ ಜನಾಂಗದವರಿಗೆ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ.
ಸಿಖ್ ಧರ್ಮ ಸಂಸ್ಥಾಪಕ ಗುರುನಾನಕ್ ದೇವ್ ಅವರ ಪುಣ್ಯ ಸ್ಮರಣೆ ಸೆ.22ರಂದು ಇರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸೆ. 20ರಿಂದ 3 ದಿನಗಳ ಕಾಲ ಗುರುದ್ವಾರದಲ್ಲಿ ಪೂಜಾ ಕೈಂಕರ್ಯಗಳು ನಡೆಯಲಿವೆ.
ಇದನ್ನೂ ಓದಿ:ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಏಷ್ಯಾ ಪ್ರವಾಸ ಆರಂಭ
ಸದ್ಯ ಕೊರೊನಾ ಹಿನ್ನೆಲೆ ಭಾರತೀಯರು ವಿಶೇಷ ಅನುಮತಿ ಇದ್ದರೆ ಮಾತ್ರ ಪಾಕ್‌ಗೆ ಬರಬಹುದೆಂಬ ನಿಯಮವಿದೆ. ಆದರೆ ಇದು ಸಿಖ್ ಧಾರ್ಮಿಕ ಕಾರ್ಯಕ್ರಮವಾದ ಹಿನ್ನೆಲೆಯಲ್ಲಿ ಲಸಿಕೆಯ ಎರಡೂ ಡೋಸ್ ಪಡೆದವರಿಗೆ ಪಾಕ್‌ಗೆ ಬರಲು ಅವಕಾಶ ನೀಡಲಾಗುವುದು.
ಭಕ್ತಾದಿಗಗಳು ಆರ್‌ಟಿಪಿಸಿಆರ್ ವರದಿ ತೋರಿಸುವುದು ಕಡ್ಡಾಯ ಎಂದು ರಾಷ್ಟ್ರೀಯ ಕಮಾಂಡ್ ಮತ್ತು ಕಾರ್ಯಾಚರಣೆ ಕೇಂದ್ರ (ಎನ್‌ಸಿಒ ಸಿ) ತಿಳಿಸಿದೆ.