Advertisement

ಇನ್ನೂ ಆರಂಭವಾಗದ ಕರ್ತಾರ್ಪುರ ಆನ್‌ಲೈನ್‌ ನೋಂದಣಿ

10:00 AM Oct 22, 2019 | Team Udayavani |

ನವದೆಹಲಿ/ಇಸ್ಲಾಮಾಬಾದ್‌: ಬಹು ನಿರೀಕ್ಷಿತ ಕರ್ತಾರ್ಪುರ ಕಾರಿಡಾರ್‌ ಉದ್ಘಾಟನೆಗೆ ದಿನಗಣನೆ ಆರಂಭವಾಗಿದ್ದರೂ, ಭಾನುವಾರ ಶುರುವಾಗಬೇಕಾಗಿದ್ದ ಆನ್‌ಲೈನ್‌ ನೋಂದಣಿ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ. ಕೆಲವು ವಿಚಾರಗಳಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಭಿನ್ನಾಭಿಪ್ರಾಯವಿದ್ದು, ಆ ಕುರಿತು ಒಮ್ಮತಕ್ಕೆ ಬರುವಲ್ಲಿ ಎರಡೂ ದೇಶಗಳು ವಿಫ‌ಲವಾಗಿವೆ. ಹೀಗಾಗಿ, ಆನ್‌ಲೈನ್‌ ರಿಜಿಸ್ಟ್ರೇಷನ್‌ ನನೆಗುದಿಗೆ ಬಿದ್ದಿದೆ.
ಪಾಕಿಸ್ತಾನವು ಕರ್ತಾರ್ಪುರದ ಗುರುದ್ವಾರ ದರ್ಬಾರ್‌ ಸಾಹಿಬ್‌ಗ ಭೇಟಿ ನೀಡುವ ಯಾತ್ರಿಗಳಿಗೆ 1400 ರೂ. ಶುಲ್ಕ ನಿಗದಿಪಡಿಸಿದ್ದು, ಅದಕ್ಕೆ ಭಾರತ ಪ್ರಬಲ ಆಕ್ಷೇಪ ವ್ಯಕ್ತಪಡಿಸಿದೆ. ಶುಲ್ಕದಲ್ಲಿ ಇಳಿಕೆ, ಯಾತ್ರೆಯ ಪ್ರತಿದಿನದ ಅವಧಿ, ಯಾತ್ರಿಗಳ ಸಂಖ್ಯೆಗೆ ಮಿತಿ ಮತ್ತಿ ತರ ವಿಚಾರಗಳಿಗೆ ಸಂಬಂಧಿಸಿ ಭಾರñ ‌ವು ಅಸಮಾಧಾನ ವ್ಯಕ್ತಪಡಿಸಿರುವ ಕಾರಣ, ಶನಿವಾರ ಎರಡೂ ದೇಶಗಳು ಮಾಡಿ ಕೊಳ್ಳಬೇಕಾಗಿದ್ದ ಒಪ್ಪಂದವು ನಡೆದೇ ಇಲ್ಲ. ಹೀಗಾಗಿ, ಆನ್‌ಲೈನ್‌ ನೋಂದ ಣಿಗೂ ತಡೆ ಬಿದ್ದಿದೆ.

Advertisement

ಸಿಂಗ್‌ ಭಾಗಿಯಾಗಲ್ಲ: ನ.9ರಂದು ಕಾರಿಡಾರ್‌ ಉದ್ಘಾಟನೆ ನಡೆಯಲಿದ್ದು, ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರು ಪಾಕಿಸ್ತಾನದ ಅಧಿಕೃತ ಉದ್ಘಾಟನಾ ಕಾರ್ಯಕ್ರಮಕ್ಕೆ ಹಾಜರಾಗದೇ ಇರಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ, ಪಂಜಾಬ್‌ ಸಿಎಂ ನೇತೃತ್ವದಲ್ಲಿ ತೆರಳುವ ನಿಯೋಗದೊಂದಿಗೆ ಐತಿಹಾಸಿಕ ಗುರುದ್ವಾರಕ್ಕೆ ಭೇಟಿ ನೀಡಲಿದ್ದಾರೆ ಎಂದು ಹೇಳಲಾಗಿದೆ. ನಾನು ಮುಖ್ಯ ಅತಿಥಿಯಾಗಿ ಕಾರ್ಯಕ್ರಮಕ್ಕೆ ಬರುವುದಿಲ್ಲ, ಸಾಮಾನ್ಯ ನಾಗರಿಕನಾಗಿ ಗುರುದ್ವಾರಕ್ಕೆ ಭೇಟಿ ನೀಡುವುದಾಗಿ ಮಾಜಿ ಪ್ರಧಾನಿ ತಿಳಿಸಿರುವುದಾಗಿ ಶನಿವಾರವೇ ಪಾಕ್‌ ವಿದೇಶಾಂಗ ಸಚಿವರು ಮಾಹಿತಿ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next