Advertisement

ಪ್ರಶಸ್ತಿ ಉಳಿಸಿಕೊಂಡ ಪ್ಲಿಸ್ಕೋವಾ

10:01 AM Jan 14, 2020 | Team Udayavani |

ಬ್ರಿಸ್ಬೇನ್‌: ಜೆಕ್‌ ಆಟಗಾರ್ತಿ ಕ್ಯಾರೋಲಿನಾ ಪ್ಲಿಸ್ಕೋವಾ “ಬ್ರಿಸ್ಬೇನ್‌ ಇಂಟರ್‌ನ್ಯಾಶನಲ್‌’ ಟೆನಿಸ್‌ ಪ್ರಶಸ್ತಿಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ರವಿವಾರ ನಡೆದ ಜಿದ್ದಾಜಿದ್ದಿ ಫೈನಲ್‌ನಲ್ಲಿ ಅವರು ಅಮೆರಿಕದ ಮ್ಯಾಡಿಸನ್‌ ಕೀಸ್‌ ವಿರುದ್ಧ 6-4, 4-6, 7-5 ಅಂತರದ ಗೆಲುವು ಒಲಿಸಿಕೊಂಡರು.

Advertisement

ಇದು ಪ್ಲಿಸ್ಕೋವಾಗೆ ಒಲಿದ 3ನೇ ಬ್ರಿಸ್ಬೇನ್‌ ಪ್ರಶಸ್ತಿ. ಇದರೊಂದಿಗೆ ಇಲ್ಲಿ ಅತೀ ಹೆಚ್ಚು ಸಲ ಚಾಂಪಿಯನ್‌ ಎನಿಸಿಕೊಂಡ ಹೆಗ್ಗಳಿಕೆಗೆ ಪಾತ್ರರಾದರು. ಅವರಿಲ್ಲಿ 2017ರಲ್ಲಿ ಮೊದಲ ಸಲ ಚಾಂಪಿಯನ್‌ ಆಗಿದ್ದರು.

ಬಲಿಷ್ಠ ಸರ್ವ್‌ಗಳ ಆಟ
ಒಂದು ದಿನದ ಹಿಂದಷ್ಟೇ ನವೋಮಿ ಒಸಾಕಾ ವಿರುದ್ಧ 3 ಗಂಟೆಗಳ ಹೋರಾಟ ನಡೆಸಿ ಸೆಮಿಫೈನಲ್‌ ಗೆದ್ದ ಪ್ಲಿಸ್ಕೋವಾಗೆ ಫೈನಲ್‌ನಲ್ಲೂ ಇಷ್ಟೇ ಕಠಿನ ಸವಾಲು ಎದುರಾಗಿತ್ತು. ಮೊದಲ ಸೆಟ್‌ನಲ್ಲಿ ಪ್ಲಿಸ್ಕೋವಾ ಮೇಲುಗೈ ಸಾಧಿಸಿದರು. ಬಳಿಕ ಕೀಸ್‌ ತಿರುಗಿ ಬಿದ್ದರು.

ನಿರ್ಣಾಯಕ ಸೆಟ್‌ ತೀವ್ರ ಪೈಪೋಟಿಯಿಂದ ಕೂಡಿತ್ತು. ಆದರೆ ಪ್ಲಿಸ್ಕೋವಾ ಅಮೋಘ ಸರ್ವ್‌ಗಳ ಮೂಲಕ ಪಂದ್ಯದ ಮೇಲೆ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾದರು.

ಇದು ಪ್ಲಿಸ್ಕೋವಾ-ಕೀಸ್‌ ನಡುವೆ ನಡೆದ ಮೊದಲ ಮುಖಾಮುಖೀ ಎಂಬುದು ವಿಶೇಷ.

Advertisement
Advertisement

Udayavani is now on Telegram. Click here to join our channel and stay updated with the latest news.

Next