Advertisement

ಭಾವನಾ ತೀರ ಯಾನ

01:14 PM Jul 18, 2019 | sudhir |

ಕೆಲಸದ ಮೇಲೆ ವಿದೇಶದಲ್ಲಿ ನೆಲೆಸುವ ಸಂದರ್ಭ ಬಂದಾಗ ಅಲ್ಲಿ ಗಂಡ ಆಫೀಸಿಗೆ ಹೋಗ್ತಾನೆ, ಹೆಂಡತಿ ಮನೆಯಲ್ಲಿ ಏನು ಮಾಡಬೇಕು? ನಮ್ಮದೂ ಒಂದು ಪ್ರೊಫೆಷನ್‌ ಅಂತ ಇದ್ದಿದ್ದರೆ ಚೆನ್ನಾಗಿತ್ತು ಅಲ್ವೇ? ಅಂತ ಎಷ್ಟೋ ಜನ ಅಂದು ಕೊಳ್ಳುತ್ತಾರೆ. ಆದರೆ, ಹೀಗೆ ಫ್ರಾನ್ಸಿಗೆ ಹೋದ ಭಾವನಾ ಸುಮ್ಮನೆ ಕೂರಲಿಲ್ಲ. ಮೆಲ್ಲಗೆ ದನಿ ತೆಗೆದು ಹಾಡಿದರು. ಕಟ್ಟಾ ಸಂಸ್ಕೃತಿವಾದಿಗಳಾದ ಫ್ರಾನ್ಸಿನ ಮಂದಿಯ ನಾಲಿಗೆಗೆ ಕರ್ನಾಟಕ ಸಂಗೀತದ ಕಲಾಯಿ ಮಾಡಿದರು.. ಅದರ ವಿಶಿಷ್ಠ ಅನುಭವ ಇಲ್ಲಿದೆ.

Advertisement

ಫ್ರಾನ್ಸ್‌ನ ತುಂಬೆಲ್ಲ ಕನ್ಸರ್‌ವೆàಟಿವ್ಸ್‌ ಸೆಂಟರ್‌ ಅಂತಿದೆ. ಏನಪ್ಪಾ ಹೀಗೆಂದರೆ ಅಂದುಕೊಳ್ಳಬೇಡಿ. ಆ ದೇಶದ ಸಂಸ್ಕೃತಿ, ಕಲೆಗಳನ್ನು ಮುಂದಿನ ಜನಾಂಗಕ್ಕೆ ತಲುಪಿಸಲು ಸರ್ಕಾರವೇ ಏರ್ಪಡಿಸಿರುವ ಕೇಂದ್ರಗಳು. ಪ್ರತಿವಾರ ಮಕ್ಕಳು, ದೊಡ್ಡವರು ಎಲ್ಲರೂ ಈ ಕೇಂದ್ರಕ್ಕೆ ಬಂದು ಸ್ಥಳೀಯ ಕಲೆಗಳನ್ನು ಕರಗತಮಾಡಿಕೊಳ್ಳುತ್ತಾರೆ. ಒಂದು ಪಕ್ಷ ಇಲ್ಲೇನಾದರು ಕರ್ನಾಟಕ ಶಾಸ್ತ್ರೀಯ ಸಂಗೀತ ಕಿವಿಗೆ ಬಿದ್ದರೆ ಅದುವೇ ನಮ್ಮ ಬೆಂಗಳೂರಿನ ಭಾವನಾಪ್ರದ್ಯುಮ್ನ ರದ್ದೇ ಆಗಿರುತ್ತದೆ. ಕಟ್ಟಾ ಸಂಸ್ಕೃತಿವಾದಿಗಳಾದ ಫ್ರಾನ್ಸ್‌ ಜನತೆಗೆ ನಮ್ಮ ಸಂಗೀತವನ್ನು ಪರಿಚಯ ಮಾಡಿದ ಕೀರ್ತಿ ಯುವ ಸಂಗೀತಗಾರ್ತಿಯದ್ದು.

ಭಾವನಾ ಸಂಗೀತದಲ್ಲಿ ಮಾಸ್ಟರ್‌ ಡಿಗ್ರಿ ಪಡೆದಿದ್ದಾರೆ. ಮದುವೆಯಾಗಿ ಗಂಡನ ಜೊತೆಗೆ ಅಮೆರಿಕಕ್ಕೆ ಹೊರಟಾಗ ಮುಂದೇನು ಅಂತ ಯೋಚನೆ ಮಾಡಲಿಲ್ಲ. ಅಲ್ಲಿ ಇಳಿದ ಮೇಲೆ ಶುರುವಾಯಿತು. ಗಂಡ ಆಫೀಸಿಗೆ, ಹೆಂಡತಿ ಮನೆ ಒಳಗೆ ಅಂತ. ಅಪರಿಚಿತ ದೇಶದಲ್ಲಿ ಏನು ಮಾಡುವುದು? ಆಗ ಒಳಗಿದ್ದ ಸಂಗೀತದ ಆಲಾಪ ಶುರುವಾಯಿತು. ಮುಂದಿನದ್ದೆಲ್ಲಾ ರೋಚಕ.

ವಿವಿಯಲ್ಲಿ ಕೆಲಸ
ಭಾವನಾ ಅಟ್ಲಾಂಟ್‌ದ ಎಮೊರಿ ವಿವಿಯನ್ನು ಎಡತಾಕಿ ಇಂಡಿಯನ್‌ ಮ್ಯೂಸಿಕ್‌ ವಿಭಾಗದಲ್ಲಿ ಕೆಲಸ ಶುರು ಮಾಡಿದರು. ದೇವಸ್ಥಾನ, ಅಲ್ಲಿ ಇಲ್ಲಿ ಹಾಡಿ ಕರ್ನಾಟಕ ಶಾಸಿŒಯ ಸಂಗೀತದ ಪರಿಚಯ ಮಾಡಿಕೊಟ್ಟರು.

ಲಿಬರಲ್‌ ಆರ್ಟ್‌ ಕಾಲೇಜಿನಲ್ಲಿ ಇನ್ನಿತರ ದೇಶದ ಮ್ಯೂಸಿಕ್‌ನ ಜೊತೆಗೆ ನಮ್ಮ ಭಾರತೀಯ ಸಂಗೀತವನ್ನು ಸೇರಿಸಿದರು. ಆಗ ಶುರುವಾಗಿದ್ದೇ ವಿದೇಶಿ ನಾಲಿಗೆಗಳಿಗೆ ನಮ್ಮ ಸಂಗೀತ ಕಲಾಯಿ ಮಾಡುವ ಉಸಾಬರಿ.

Advertisement

ಹೇಳಿ ಕೇಳಿ ಕರ್ನಾಟಕ ಶಾಸ್ತ್ರೀಯ ಸಂಗೀತ ಸಾಹಿತ್ಯ ಪ್ರಧಾನ. ಭಾಷೆ ತಿಳಿಯದೇ ಹಾಡಲು ಸಾಧ್ಯವಿಲ್ಲ. ಈ ಸಮಸ್ಯೆಗೆ ಭಾವನಾ ಐಡಿಯಾ ಮಾಡಿದರು. ರಿದಂಗೆ ಭಾಷೆ ಇಲ್ವಲ್ಲ? ಹಾಗಾಗಿ, ಮೊದಲು ಬೇಸಿಕ್‌ ತಾಳಗಳನ್ನು ಹೇಳಿ ಕೊಟ್ಟರು. ಅದರ ಹಿಂದೆ ಸ್ವರಗಳನ್ನು ಪೋಣಿಸುವುದು ತಿಳಿಸಿಕೊಟ್ಟರು. “ರಾರ ವೇಣು ಗೋಪು ಬಾಲ’ ಹಾಡುಗಳು ಮೆಲ್ಲಗೆ ಅಮೆರಿಕನ್ನರ ಗಂಟಲು ಹೊಕ್ಕಿತು. ಅಷ್ಟರಲ್ಲಿ ಯಜಮಾನರಿಗೆ ವರ್ಗವಾಗಿ ಭಾವನಾ ಫ್ರಾನ್ಸ್‌ಗೆ ಹಾರಬೇಕಾಯಿತು.

ಅಲ್ಲೂ ಮತ್ತೆ ಮನೇಲಿ ಕೂರಬೇಕಾ? ಸಮಸ್ಯೆ ಶುರುವಾಯಿತು.
ಫ್ರಾನ್ಸ್‌ನ ಜನ ಕರ್ಮಠ ಸಂಸ್ಕೃತಿವಾದಿಗಳು. ಬೇರೆಯವರ ಕಲೆಯನ್ನು ಕಣ್ಣೆತ್ತಿ ಕೂಡ ನೋಡಲೊಲ್ಲರು. ಇಂಥ ಅಪರಿಚಿತ ಜಗತ್ತಿನಲ್ಲಿ ಭಾವನಾ ಅಕ್ಷರಶಃ ದ್ವೀಪ. ಇಂಥ ಕಡೆ ಸಂಗೀತದ ದೀಪ ಬೆಳಗುವುದಾದರೂ ಹೇಗೆ? ಕಗ್ಗಂಟಾಯಿತು. ” ಆರಂಭದಲ್ಲಿ ನನ್ನ ಪ್ರಯತ್ನಗಳೆಲ್ಲ ವಿಫ‌ಲವಾದವು.

ಕರ್ನಾಟ ಸಂಗೀತ ಹಾಡ್ತೀನಿ ಅಂದರೆ ಕ್ಯಾರೇ ಅನ್ನುತ್ತಿರಲಿಲ್ಲ. ಆಗ ಇಂಡಿಯನ್‌ ಕರ್ನಾಟಕ ಮ್ಯೂಸಿಕ್‌ ಇನ್‌ ಪ್ಯಾರೀಸ್‌ ಅಂತ ಫೇಸ್‌ಬುಕ್‌ ಪೇಜ್‌ ಶುರು ಮಾಡಿದೆ. ಸ್ವರ ಗೊತ್ತಿಲ್ಲದೇ ಇದ್ದ ಫ್ರಾನ್ಸಿಗರು ಲಯ ಹಿಡಿದರು; ಅರ್ಥವಾಗ್ತಾ ಹೋಯಿತು. ಫ್ರೆಂಚ್‌ ವಿವಿಯಲ್ಲಿ ಎರಡು ದಿನ ಕಾರ್ಯಗಾರಕ್ಕೆ ಕರೆದರು. ಅಲ್ಲಿ “ವೀಕೆಂಡ್‌ ವಿತ್‌ ಇಂಡಿಯಾ’ ಅಂತ ಹೆಸರಿಟ್ಟು ವೀಣೆ, ಭರತ ನಾಟ್ಯ, ಹಾಡುಗಾರಿಕೆ ಮೂರು ಸೇರಿಸಿ ಪ್ರಸ್ತುತ ಪಡಿಸಿದೆವು. ಹೀಗೆ ಫ್ರಾನ್ಸಿನ ಮಂದಿ ನಮ್ಮ ಸಂಸ್ಕೃತಿಗೆ ಮಣೆ ಹಾಕಿದ್ದು ಇದೇ ಮೊತ್ತ ಮೊದಲು’ ಭಾವನಾ ಹೆಮ್ಮೆಯಿಂದ ವಿವರಿಸುತ್ತಾರೆ.

ಫ್ರೆಂಚರಿಗೆ ಕನ್ನಡ
ಕರ್ನಾಟಕ ಸಂಗೀತವನ್ನು ವಿದೇಶಿಗರ ನಾಲಿಗೆ ಮೇಲೆ ನಿಲ್ಲಿಸುವುದು ಕಷ್ಟದ ವಿಷಯವೇ. ಅವರಿಗೆ ಕನ್ನಡ, ಸಂಸ್ಕೃತ ಭಾಷೆಯ ಪರಿಚಯ ಇಲ್ಲದಿರುವುದರಿಂದ ರಾಗ, ಸ್ವರಗಳ ಅನುಸರಿಸಿಯೇ ಸಂಗೀತ ಕಲಿಯುತ್ತಾರೆ. ಆದರೆ, ಕರ್ನಾಟಕ ಸಂಗೀತದಲ್ಲಿ ರಾಗದಷ್ಟೇ ಸಾಹಿತ್ಯ ಮುಖ್ಯ. ಭಾವನಾ ಇದಕ್ಕೂ ಮತ್ತೂಂದು ಟೆಕ್ನಿಕ್‌ ಹುಡುಕಿದರು. ಏನೆಂದರೆ, ಮೊದಲು ಒತ್ತಕ್ಷರಗಳನ್ನು, ಅದರ ಉಚ್ಚಾರ ಹೇಳಿ ಕೊಟ್ಟು, ಆಮೇಲೆ ವಂÂಜನಗಳ ಪಾಠ ಮಾಡುವುದು. “ಫ್ರೆಂಚ್‌, ಜರ್ಮನ್‌, ಆಸ್ಟೇಲಿಯನ್‌, ತೈವಾನ್‌ನವರಿಗೆ ಕನ್ನಡ ನಾಲಿಗೆ ತಿರುಗೋಲ್ಲ. ಅವರು ಅದನ್ನು ಇಂಗ್ಲೀಷನ್‌ನಲ್ಲಿ ಬರೆದು, ರೆಕಾರ್ಡ್‌ ಮಾಡಿಕೊಂಡು, ಯಾವ ಪದವನ್ನು ಹೇಗೆ ಉಚ್ಚರಿಸಬೇಕು, ಯಾವ ಪದವನ್ನು ಹೇಗೆ ಬಿಡಿಸಬೇಕು ಅನ್ನೋದನ್ನು ಶ್ರದ್ಧೆಯಿಂದ ಪ್ರಾಕ್ಟೀಸ್‌ ಮಾಡುತ್ತಾರೆ. ಹೀಗೆ ಒಂದಷ್ಟು ಮಾಹಿತಿಯನ್ನು ಸಂಗೀತದ ಬೇಸಿಕ್‌ನಲ್ಲೇ ಹೇಳಿಕೊಡುತ್ತೇನೆ. ವಿಶೇಷ ಎಂದರೆ, ಫ್ರಾನ್ಸಿನವರಿಗೆ ಬೇರೆ ಭಾಷೆಯ ಬಗ್ಗೆ ಗೌರವ, ಭಕ್ತಿ ಇದೆ ‘ ಎಂದು ವಿವರಿಸುತ್ತಾರೆ ಭಾವನಾ.

ಈ ವರೆಗೆ 400-500 ವಿದೇಶಿ ಪ್ರಜೆಗಳಿಗೆ ಸಂಗೀತ ಹೇಳಿಕೊಟ್ಟಿದ್ದಾರೆ ಭಾವನಾ. ಪ್ರತಿ ವರ್ಷ ತಾವೇ ಕೈಯಿಂದ ದುಡ್ಡು ಹಾಕಿ ತ್ಯಾಗರಾಜರ ಆರಾಧನೆ ಮಾಡುತ್ತಾರೆ. ಈ ಸಲ ವಿಷಯ ತಿಳಿದ ಭಾರತದ ರಾಯಭಾರಿ ಕಚೇರಿ ಭೇಷ್‌ ಅಂದಿದೆಯಂತೆ. ಹಾಗಾಗಿ, ಫ್ರಾನ್ಸಿನ ಹೆಸರಾಂತ ಲಾವಿತ್‌ ಪಾರ್ಕ್‌ನಲ್ಲಿ ನಡೆದ ಯೋಗ ಡೇಗೆ ಭಾವನ ಅವರದೇ ಹಿನ್ನೆಲೆ ಗಾಯನ ಏರ್ಪಡಿಸಿತ್ತು. ಈ ಅಪರೂಪ ಕಾರ್ಯಕ್ರಮದಲ್ಲಿ ನಮ್ಮ ಆದಿತ್ಯ ಹೃದಯ ಶ್ಲೋಕ, ದ್ವಾದಶ ನಾಮ ಶ್ಲೋಕಗಳಿಗೆ ಸಂಗೀತ ಪೋಣಿಸಿ ಹಾಡಿದ್ದು ಮತ್ತೂಂದು ಹೆಮ್ಮೆ.

ಈಗ ಫಾನ್ಸಿನ ಜನ ಸಂಗೀತ ಕೇಳ್ತಾರೆ. ಆದರೆ ಇಂಥ ರಾಗಾನೇ ಬೇಕು ಅನ್ನೋ ಪಟ್ಟು ಇಲ್ಲ. ಅವರಿಗೆ ರಾಗ ಹಿಂದಿನ ಭಾವಗಳು ಅರ್ಥವಾಗುತ್ತವೆ. ಹೀಗಾಗಿ, ಹೆಚ್ಚೆಚ್ಚು ಜನಕ್ಕೆ ಕಲಿಸಲು ಸಾಧ್ಯವಾಯಿತು ಅಂತ ಸಂತಸ ವ್ಯಕ್ತಪಡಿಸುತ್ತಾರೆ ಭಾವನ.

ನೋಡಿ, ಗಂಡ ಆಫೀಸಿಗೆ ಹೋಗಿದ್ದಕ್ಕೆ ಹೆಂಡತಿಗೆ ಫ‌ುಲ್‌ಟೈಂ ಕೆಲಸ ಹೇಗೆ ಸಿಕ್ಕಿತು.

“ಫೆಂಚ್‌ನಲ್ಲಿ ಣ, ಡ, ಆ- ನಂಥ ಸಾಫ್ಟ್ ವರ್ಡ್‌ ಜಾಸ್ತಿ.” ರಾ’ ಪ್ರಯೋಗ ಇಲ್ವೇ ಇಲ್ಲ. ಹಾಗಾಗಿ, ನಮ್ಮ ಪದಗಳನ್ನು ಇಂಗ್ಲೀಷಲ್ಲಿ ಬರೆದು, ರೆಕಾರ್ಡ್‌ ಮಾಡಿಕೊಂಡು ಪ್ರಾಕ್ಟೀಸ್‌ ಮಾಡುತ್ತಾರೆ. ಜಾಸ್‌ ಮತ್ತು ಕರ್ನಾಟಕ ಸಂಗೀತದ ನಡೆಗಳ ನಡುವೆ ಹೋಲಿಕೆ ಇದೆ. ಹೀಗಾಗಿ, ಅಲ್ಲಿನವರು ನಮ್ಮ ತಾಳವನ್ನು ಹೆಚ್ಚು ಇಷ್ಟ ಪಡುತ್ತಾರೆ. ಇದೇ ನೆಪದಲ್ಲಿ, ನಾನು ಅವರಿಗೆ ದೀರ್ಘ‌ಸ್ವರ, ವ್ಯಂಜನ, ಪ್ರಾಸ ಎಲ್ಲವನ್ನೂ ಹೇಳಿ ಕೊಡುತ್ತೇನೆ’

– ಕೆಜಿ

Advertisement

Udayavani is now on Telegram. Click here to join our channel and stay updated with the latest news.

Next