Advertisement

ಕರ್ನಾಟಕದ ನಿರೀಕ್ಷೆ ದೊಡ್ಡದಿದೆ, ಈಡೇರಿಸಿ…

12:24 AM Feb 16, 2023 | Team Udayavani |

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಶುಕ್ರವಾರ ರಾಜ್ಯ ಬಜೆಟ್‌ ಮಂಡನೆ ಮಾಡಲಿದ್ದಾರೆ. ಇದು ಈ ಸರ್ಕಾರದ ಕಡೆಯ ಬಜೆಟ್‌. ಒಂದು ಅರ್ಥದಲ್ಲಿ ಲೇಖಾನುದಾನವಷ್ಟೇ. ಚುನಾವಣಾ ಬಜೆಟ್‌ ಆಗಿರುವುದರಿಂದ ಭರಪೂರ ಯೋಜನೆಗಳು ಪ್ರಕಟವಾಗುವ ನಿರೀಕ್ಷೆ ಇದೆ. ಆದರೂ, ರಾಜ್ಯದಲ್ಲಿ ಪ್ರದೇಶವಾರು ಲೆಕ್ಕಾಚಾರದಲ್ಲಿ ಯಾವ ಭಾಗಕ್ಕೆ, ಏನು ಬೇಡಿಕೆ ಇದೆ ಎಂಬುದರ ಮೇಲೊಂದು ನೋಟ ಇಲ್ಲಿದೆ…

Advertisement

ಮಲೆನಾಡು
ಅಡಕೆ ಎಲೆ ಚುಕ್ಕಿರೋಗಕ್ಕೆ ಪರಿಹಾರ.

ಮಂಗನ ಕಾಯಿಲೆಗೆ ಲಸಿಕೆ ಕಂಡು ಹಿಡಿಯಲು ಪ್ರೋತ್ಸಾಹಧನ ಮತ್ತು ಸಂಶೋಧನೆಗೆ ಬಿಎಸ್‌ಎಲ್‌-3 ಲ್ಯಾಬ್‌

ಭದ್ರಾವತಿ ಎಂಪಿಎಂ ಕಾರ್ಖಾನೆ ಪುನಶ್ಚೇತನ, ಡಿಪ್ಲೋಮಾ ಕಾಲೇಜು ಮೇಲ್ದರ್ಜೆಗೇರಿಸಿಬೇಕಿದೆ.

ಉದ್ಯೋಗ ಹೆಚ್ಚಳಕ್ಕೆ ಟೆಕ್ಸ್‌ಟೈಲ್‌ ಪಾರ್ಕ್‌ ಸ್ಥಾಪನೆ ಅಗತ್ಯ

Advertisement

ದತ್ತಪೀಠ ಅಭಿವೃದ್ಧಿ ಪ್ರಾಧಿಕಾರ

ಕಾಫಿ ಬೆಳೆಗಾರರ ಸಾಲಮನ್ನಾ, ಪರಿಹಾರ ಧನ ನೀಡಬೇಕಿದೆ.

ಮಿನಿ ಹೆಲಿಪೋರ್ಟ್‌ ಮತ್ತು ಏರ್‌ಸ್ಟ್ರಿಪ್‌ ನಿರ್ಮಾಣಕ್ಕೆ ಅನುದಾನ ನೀಡಬೇಕು.

ಕರಾವಳಿ
ಕರಾವಳಿಯ ಕೃಷಿಕರ ಹಲವು ದಶಕಗಳ ಬೇಡಿಕೆ ಕುಮ್ಕಿ ಹಕ್ಕು

ಅಡಿಕೆ ಬೆಳೆಗಾರರಿಗೆ ವಿವಿಧ ನೆರವು

ಮಂಗಳೂರಿನಲ್ಲಿ ಐಟಿ ಪಾರ್ಕ್‌ ಮೀನುಗಾರಿಕಾ ಬೋಟ್‌ಗಳಿಗೆ ನೀಡುವ ಸಬ್ಸಿಡಿ ಡೀಸೆಲ್‌ ಹೆಚ್ಚಳ

ಪ್ರವಾಸೋದ್ಯಮ ತಾಣಗಳ ಅಭಿವೃದ್ಧಿಗೆ ಯೋಜನೆ

ಉಡುಪಿ ಜಿಲ್ಲೆಯಲ್ಲಿ ಪೊಲೀಸ್‌ ತರಬೇತಿ ಅಕಾಡೆಮಿ

ಉಡುಪಿ ಜಿಲ್ಲೆಯಲ್ಲಿನ ಕೈಗಾರಿಕಾ ಪ್ರದೇಶಾಭಿವೃದ್ಧಿಗೆ ಯೋಜನೆ

ಬೈಂದೂರು ವಿಮಾನ ನಿಲ್ದಾಣ, ಬ್ರಹ್ಮಾವರದಲ್ಲಿ ಕೃಷಿ ಕಾಲೇಜು ಸ್ಥಾಪನೆ

ಬ್ರಹ್ಮಾವರ ಸಕ್ಕರೆ ಕಾರ್ಖಾನೆಗೆ ಮರುಜೀವ

ಕಿತ್ತೂರು ಕರ್ನಾಟಕ
ಎಲ್ಲ ಏಳು ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಮೂಲಭೂತ ಸೌಲಭ್ಯ. ಬಿಯಾಂಡ್‌ ಬೆಂಗಳೂರು ಪರಿಣಾಮಕಾರಿ ಅನುಷ್ಠಾನ ಬೇಡಿಕೆ.

ಹಾವೇರಿ ಜಿಲ್ಲೆಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್‌, ಹಾವೇರಿ ವಿಶ್ವವಿದ್ಯಾಲಯ ಆರಂಭಕ್ಕೆ ಕ್ರಮ.

ವಿಜಯಪುರದಲ್ಲಿ ವೈನ್‌ ಪಾರ್ಕ್‌ಗೆ ಹೆಚ್ಚಿನ ಹಣಕಾಸು ನಿರೀಕ್ಷೆ.

ಗದಗ ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಕ್ರಮ.

ಧಾರವಾಡದಲ್ಲಿ ಎಫ್‌ಎಂಸಿಜಿ ಬಲವರ್ಧನೆಗೆ ಇನ್ನಷ್ಟು ತೀವ್ರತೆ.

ಯುಕೆಪಿ 3ನೇ ಹಂತ ಚಾಲನೆ ಬೇಡಿಕೆ, ಕಳಸಾ ಬಂಡೂರಿ ಅನುಷ್ಠಾನ

 

Advertisement

Udayavani is now on Telegram. Click here to join our channel and stay updated with the latest news.

Next