ಚಿಕ್ಕೋಡಿ: ಜೊಲ್ಲೆ ಗ್ರೂಪ್ ಹಾಗೂ ಸಂಸದ ಕ್ರೀಡಾಮಹೊತ್ಸವ ಅಂಗವಾಗಿ ಹಮ್ಮಿಕೊಂಡ ರಾಷ್ಟ್ರ ಮಟ್ಡದ ಬಡಿಗೆ ಬಾರಕೋಲ ರಹಿತ ಎತ್ತಿನ ಮತ್ತು ಕುದುರೆ ಗಾಡಿ ಶರ್ಯತ್ತು ಜನಮನ ಸೆಳೆದವು.
ಚಿಕ್ಕೋಡಿ ತಾಲೂಕಿನ ಯಕ್ಸಂಬಾ- ಮಲಿಕವಾಡ ಶರ್ಯತ್ತು ಮೈದಾನದಲ್ಲಿ ನಡೆದ ಗಾಡಿ ಸ್ಪರ್ಧೆ ಲಕ್ಷಾಂತರ ಕ್ರೀಡಾಪ್ರೇಮಿಗಳನ್ನು ರಂಜಿಸಿದವು. ಸ್ಪರ್ಧೆಯ ಒಟ್ಟು 38 ಲಕ್ಷ ರೂ. ಬಹುಮಾನ ರೈತರು ಪಡೆದುಕೊಂಡರು.
ಸ್ಪರ್ಧೆಯ ಫಲಿತಾಂಶ:
ಪ್ರಥಮ ಸ್ಥಾನ: ಎತ್ತಿನ ಗಾಡಿ ಸಾಮಾನ್ಯ ವಿಭಾಗದಲ್ಲಿ ಕೊಲ್ಲಾಪೂರದ ಧಾನೋಳಿಯ ಭಂಡಾ ಖಿಲಾರೆ ಎತ್ತುಗಳು ಪ್ರಥಮ ಸ್ಥಾನ ಪಡೆದು 11 ಲಕ್ಷ ರೂ ಬಹುಮಾನ ಪಡೆದರು.
ದ್ವಿತೀಯ ಸ್ಥಾನ: ಬಾಳು ಹಜಾರೆ ಶಿರೂರ ದ್ವಿತೀಯ ಗಳಿಸಿ 5 ಲಕ್ಷ ರೂ. ಬಹುಮಾನ ಪಡೆದರು.
ತೃತೀಯ ಸ್ಥಾನ: ಪರೀಟ ಗ್ರಾಮದ ಸಚೀನ ಪಾಟೀಲ ತೃತೀಯ ಸ್ಥಾನ ಗಳಿಸಿ 3 ಲಕ್ಷ ರೂ. ಪಡೆದುಕೊಂಡರು.
ನಾಲ್ಕನೇ ಬಹುಮಾನ ತಾಂಶಿಯ ಉಮೇಶ ಜಾಧವ ಎತ್ತಿನ ಗಾಡಿ ಪಡೆದು 2 ಲಕ್ಷ ರೂ ಬಹುಮಾನ ಪಡೆದರು.
ಕರ್ನಾಟಕ ಕುದುರೆ ಗಾಡಿ ಶರ್ಯತ್ತಿನಲ್ಲಿ ಬಾವನಸವದತ್ತಿಯ ಶಿವಾಜಿ ಸಡಕೆ ಕುದುರೆ ಗಾಡಿ
ಮೊದಲ ಸ್ಥಾನ ಪಡೆದು 1 ಲಕ್ಷ ರೂ. ಬಹುಮಾನ ಪಡೆಯಿತು.
ದ್ವಿತೀಯ ಸ್ಥಾನವನ್ನು ಮಾರುತಿ ಗಸ್ತೆ ಸಂಕೇಶ್ವರ 75 ಸಾವಿರ ರೂ. ಬಹುಮಾನ ಪಡೆದರು.
ಮೂರನೇ ಸ್ಥಾನವನ್ನು ದತ್ತು ಭೀಮಾ ಪಾಟೀಲ ಕೊಣ್ಣೂರ ಕುದುರೆ ಗಾಡಿಯು 50 ಸಾವಿರ ರೂ. ಬಹುಮಾನ ಪಡೆಯಿತು.
ನಾಲ್ಕನೇ ಬಹುಮಾನ ಬಾಬಾಸಾಹೇಬ ಪಾಟೀಲ ನಾಗನೂರ ಕುದುರೆ ಗಾಡಿ 25 ಸಾವಿರ ರೂ. ಪಡೆದುಕೊಂಡರು.
ಕರ್ನಾಟಕ ಎತ್ತಿನ ಗಾಡಿ ಶರ್ಯತ್ತಿನಲ್ಲಿ ಯರಗಟ್ಟಿಯ ಅಜೀತ ದೇಸಾಯಿ ಎತ್ತಿನ ಗಾಡಿ
ಪ್ರಥಮ ಸ್ಥಾನ ಪಡೆದು 5 ಲಕ್ಷ ರೂ. ಪಡೆದರು. ಹಳದಟ್ಟಿಯ ಧರೇಪ್ಪ ಸಂಗಪ್ಪ ಪುಂಡಗೇಜ
ಎರಡನೇ ಸ್ಥಾನ ಪಡೆದು 3 ಲಕ್ಷ ರೂ ಬಹುಮಾನ ಪಡೆದರು.
ಮಲಿಕವಾಡದ ಮಹಾದೇವ ಗಜಬರ ಎತ್ತು
ಮೂರನೇ ಸ್ಥಾನ ಪಡೆದು 2 ಲಕ್ಷ ರೂ. ಬಹುಮಾನ ಪಡೆದರು. ಅಥಣಿ ತಾಲೂಕಿನ ಅಬ್ಬಿಹಾಳ ಹುವಣ್ಣಾ ಮಾನೆ ಎತ್ತಿನ ಗಾಡಿ
ನಾಲ್ಕನೇ ಸ್ಥಾನ ಪಡೆದು 1 ಲಕ್ಷ ರೂ. ಬಹುಮಾನ ಪಡೆದರು.
ಸಾಮಾನ್ಯ ಕುದುರೆ ಗಾಡಿ ಶರ್ಯತ್ತಿ ಫಲಿತಾಂಶ
ಪ್ರಥಮ ಸ್ಥಾನ ಮಹಾರಾಷ್ಡ್ರದ ಸಂಗಮವಾಡಿಯ ಮಂಗಲ ಕುದುರೆ ಗಾಡಿ ಪ್ರಥಮ ಸ್ಥಾನ ಪಡೆದುಕೊಂಡು 1 ಲಕ್ಷ ರೂ. ಬಹುಮಾನ ಪಡೆದರು.
ಎರಡನೇ ಸ್ಥಾನ ಯಡೂರವಾಡಿಯ ರೋಸ್ತುಮ ಕುದುರೆ ಗಾಡಿ 75 ಸಾವಿರ ರೂ. ಬಹುಮಾನ ಪಡೆದರು.
ಮೂರನೇ ಸ್ಥಾನ ಲಗಮಣ್ಣಾ 50 ಸಾವಿರ ರೂ. ಬಹುಮಾನ ಪಡೆದರು.
ನಾಲ್ಕನೇ ಸ್ಥಾನ ಕುರಂದವಾಡದ ರಮೇಶ ಪಾಟೀಲ 25 ಸಾವಿರ ರೂ. ಬಹುಮಾನ ಪಡೆದರು.
ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಲೋಕಸಭೆ ಮತ ಕ್ಷೇತ್ರದ ಪ್ರತಿಯೊಂದು ವಿಧಾನಸಭೆ ಮತ ಕ್ಷೇತ್ರದಲ್ಲಿ ಬೇರೆ ಬೇರೆ ಪ್ರತ್ಯೇಕ ಕಾರ್ಯಕ್ರಮ ಆಯೋಜನೆ ಮಾಡಲಾಗುವುದು. ಗ್ರಾಮೀಣ ರೈತರ ಮನೋಭಾವ ಹೆಚ್ಚಿಸಲು ಗಾಡಿ ಶರ್ಯತ್ತು ಆಯೋಜನೆ ಸಹಕಾರ ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ತಿಳಿಸಿದರು.
ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಸಂಸದರ ಸಾಂಸ್ಕೃತಿಕ ಕ್ರೀಡಾ ಮಹೋತ್ಸವದ ಅಂಗವಾಗಿ ಲೋಕಸಭೆ ಕ್ಷೇತ್ರದಲ್ಲಿ ಕ್ರೀಡಾ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಿ ಯುವಕ-ಯುವತಿಯರಿಗೆ ಅವಕಾಶ ಮಾಡಿಕೊಡಲಾಗಿದೆ ಎಂದರು.
ಜೊಲ್ಲೆ ಗ್ರೂಪ್ ವತಿಯಿಂದ ಅನೇಕ ಸೇವೆ ಮಾಡಲಾಗಿದೆ. ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ರಂಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ರೈತರು ಈ ದೇಶದ ಬೆನ್ನೆಲುಬು. ರೈತರಿಗೆ ಪ್ರೋತ್ಸಾಹ ನೀಡಲು ಗಾಡಿ ಶರ್ಯತ್ತು ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ಮಹಾರಾಷ್ಟ್ರ ಎರಡು ರಾಜ್ಯದ ಕ್ರೀಡಾಪ್ರೇಮಿಗಳಿಗೆ ಈ ಶರ್ಯತ್ತು ಆಯೋಜನೆ ಮಾಡಲಾಗಿದೆ ಎಂದರು.
ಕ್ಯಾರಗುಡ್ಡದ ಅಭಿನವ ಮಂಜುನಾಥ್ ಸ್ವಾಮೀಜಿ, ಜ್ಯೋತಿಪ್ರಸಾದ ಜೊಲ್ಲೆ, ವಿಶ್ವನಾಥ ಕಮತೆ, ಅಪ್ಪಾಸಾಹೇಬ ಜೊಲ್ಲೆ, ಹಾಲಸಿದ್ದನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಎಂ.ಪಿ.ಪಾಟೀಲ, ಉಪಾಧ್ಯಕ್ಷ ಪವನ ಪಾಟೀಲ, ರವಿ ಹಂಜಿ ಮುಂತಾದವರು ಇದ್ದರು.