Advertisement
ಈಗಿರುವ ಮೀಸಲಾತಿ ಪ್ರಮಾಣದ ಪ್ರಕಾರ ರಾಜ್ಯದ ಹಿಂದುಳಿದ ವರ್ಗದ ಪಟ್ಟಿಯಲ್ಲಿ 100ಕ್ಕೂ ಹೆಚ್ಚು ಸಮುದಾಯಗಳಿದ್ದು, ಈ ಪ್ರವರ್ಗದಲ್ಲಿರುವ ಸಮುದಾಯಗಳಿಗೆ ಶೇ.15 ಮೀಸಲಾತಿ ದೊರೆಯುತ್ತಿದೆ. ಇತ್ತೀಚೆಗೆ ನಡೆದ ಸಂಸತ್ ಅಧಿವೇಶನದಲ್ಲಿ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಸಂವಿಧಾನ ತಿದ್ದುಪಡಿಗೆ ಒಪ್ಪಿಗೆ ನೀಡಲಾಗಿದ್ದು, ರಾಜ್ಯಗಳಿಗೆ ಒಬಿಸಿ ಸಮು ದಾಯಗಳನ್ನು ಗುರುತಿಸಿ ಪಟ್ಟಿಯಲ್ಲಿ ಸೇರಿಸುವ ಅಧಿಕಾರ ನೀಡಿದೆ.
Related Articles
Advertisement
ಒಂದು ವೇಳೆ, ಯಾವುದೇ ಪ್ರವರ್ಗ ದಿಂದ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಲು ಮುಂದಾದರೆ, ಆ ಪ್ರವರ್ಗದ ಮೀಸಲಾತಿ ಪ್ರಮಾಣ ವನ್ನು ಸಮುದಾಯದ ಜನಸಂಖ್ಯೆ ಆಧಾರದಲ್ಲಿ ಹಿಂದುಳಿದ ವರ್ಗಗಳ ಪಟ್ಟಿಗೆ ವರ್ಗಾಯಿಸಬೇಕೆಂಬ ಬೇಡಿಕೆ ಮುಂದಿಟ್ಟರೆ ರಾಜ್ಯ ಸರಕಾರ ನಿರ್ದಿಷ್ಟ ಪ್ರವರ್ಗದಲ್ಲಿರುವ ಸಮುದಾಯಗಳ ಆಕ್ರೋಶಕ್ಕೆ ತುತ್ತಾಗಬೇಕಾದೀತು.
ಒಳ ಮೀಸಲಾತಿಗೆ ಬೇಡಿಕೆ : ಹಿಂದುಳಿದ ವರ್ಗಗಳಲ್ಲಿ ನೂರಕ್ಕೂ ಹೆಚ್ಚು ಸಮುದಾಯಗಳು ಇರುವುದರಿಂದ ಶೇ.15ರಷ್ಟು ಇರುವ ಮೀಸಲಾತಿಯಲ್ಲಿ ಸಮುದಾಯಗಳಿಗೂ ಸಮಾನವಾಗಿ ದೊರೆಯುತ್ತಿಲ್ಲ ಎಂಬ ದೂರಿದೆ. ರಾಜಕೀಯ ಹಾಗೂ ಸಾಮಾಜಿಕವಾಗಿ ಪ್ರಬಲವಾಗಿರುವ ಸಮುದಾಯಗಳು ಹಿಂದುಳಿದ ವರ್ಗಗಳಿಗೆ ಮೀಸಲಿರುವ ಬಹುತೇಕ ಮೀಸಲಾತಿಯ ಲಾಭ ಪಡೆದುಕೊಳ್ಳುತ್ತಿವೆ ಎನ್ನಲಾಗುತ್ತಿದ್ದು, ಅದಕ್ಕಾಗಿ ಹಿಂದುಳಿದ ವರ್ಗಗಳಲ್ಲಿ ಅತಿ ಹಿಂದುಳಿದ ವರ್ಗಗಳ ಪಟ್ಟಿಯನ್ನು ಪ್ರತ್ಯೇಕ ಮಾಡಿ ಅವುಗಳಿಗೆ ಒಳ ಮೀಸಲಾತಿ ನೀಡಬೇಕೆಂಬ ಕೂಗು ಕೇಳಿ ಬರುತ್ತಿದೆ.
ಒಳ ಮೀಸಲಾತಿ ಹಂಚಿಕೆ ಗೊಂದಲ : ಆದರೆ, ಒಳ ಮೀಸಲಾತಿ ಪ್ರಮಾಣವನ್ನು ನಿಗದಿಪಡಿಸುವುದು ಕಷ್ಟವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. 100ಕ್ಕೂ ಹೆಚ್ಚು ಸಮುದಾಯಗಳಲ್ಲಿ ಅತಿ ಹಿಂದುಳಿದಿರುವಿಕೆ ತಿಳಿಯಲು ಜಾತಿ ಸಮೀಕ್ಷೆ ಪಟ್ಟಿ ಪ್ರಕಟಿಸಬೇಕು. ಅಲ್ಲದೇ, ಶೇ.15ರಷ್ಟು ಪ್ರಮಾಣವನ್ನು ಹಂಚಿಕೆ ಮಾಡುವುದು ಕಷ್ಟ ಸಾಧ್ಯ. ಹೀಗಾಗಿ ಅತಿ ಹಿಂದುಳಿದ ಸಮುದಾಯಗಳ ಪಟ್ಟಿಯನ್ನು ಪ್ರತ್ಯೇಕ ಮಾಡಿ ಅವರಿಗೆ ಮೀಸಲಾತಿ ನೀಡುವ ವ್ಯವಸ್ಥೆ ಜಾರಿಗೆ ತರಬೇಕೆಂಬ ಅಭಿಪ್ರಾಯ ಕೇಳಿ ಬರುತ್ತಿದೆ.
ಕೇಂದ್ರ ಸರಕಾರ ಒಬಿಸಿ ಪಟ್ಟಿಗೆ ಸೇರಿಸಲು ರಾಜ್ಯಗಳಿಗೆ ಅಧಿಕಾರ ನೀಡಿರುವುದು ಒಳ್ಳೆಯದೆ. ಆದರೆ, ಹಿಂದುಳಿದ ವರ್ಗದ ಪಟ್ಟಿಯಲ್ಲಿ ಸೇರಲು ಅರ್ಹವಿರುವ ಜಾತಿಗಳನ್ನು ಮಾತ್ರ ಸೇರಿಸಬೇಕು. ಜತೆಗೆ ತಮಿಳುನಾಡಿನ ರೀತಿಯಲ್ಲಿ ಹಿಂದುಳಿದವರು ಹಾಗೂ ಅತಿ ಹಿಂದುಳಿದವರನ್ನು ಪ್ರತ್ಯೇಕಿಸಬೇಕು.–ಎನ್.ಶಂಕರಪ್ಪ, ರಾಜ್ಯ ಹಿಂ. ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ
-ಶಂಕರ ಪಾಗೋಜಿ