Advertisement
ಗಮನಾರ್ಹ ಅಂಶವೇನೆಂದರೆ ಕರ್ನಾಟಕ, ಆಂಧ್ರಪ್ರದೇಶಗಳಿಗೆ ವಲಸೆ ಬರುವವರ ಸಂಖ್ಯೆ ಹೆಚ್ಚಿದ್ದು, ಎರಡೂ ರಾಜ್ಯಗಳು ಪ್ರಮುಖವೆನಿಸಿಕೊಂಡಿವೆ. ಈ ನಿಟ್ಟಿನಲ್ಲಿ ಭಾರತದ ರಾಜ್ಯಗಳ ನಡುವೆಯೂ ವಲಸೆ ಹೆಚ್ಚುತ್ತಿದೆ ಎನ್ನುತ್ತಿರುವ ವರ್ಲ್ಡ್ ಎಕನಾಮಿಕ್ ಫೋರಂನ ವರದಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಭಾರತದಲ್ಲಿನ ಆಂತರಿಕ ವಲಸೆ ಪ್ರಕ್ರಿಯೆ ವಾರ್ಷಿಕವಾಗಿ 4.5 ಪ್ರತಿಶತದಷ್ಟು ಬೆಳೆಯುತ್ತಾ ಸಾಗುತ್ತಿದೆ.
Related Articles
Advertisement
ರಾಜಕೀಯ ಚರ್ಚೆಗಳಲ್ಲೂ, ನೀತಿ ನಿರೂಪಣೆಯಲ್ಲೂ ಈ ವಿಷಯವನ್ನು ಕಡೆಗಣಿಸಲಾಗುತ್ತಿದೆ. ವಿಶ್ವಸಂಸ್ಥೆಯೂ ಇದೇ ಮಾತನ್ನು ಪುನರುಚ್ಚರಿಸುತ್ತಿದೆ. ರಾಜಕೀಯ ನೀತಿಗಳಲ್ಲಿ ಆಂತರಿಕ ವಲಸಿಗರ ವಿಚಾರವನ್ನು ಕಡೆಗಣಿಸುತ್ತಿರುವುದರಿಂದ ರಾಜ್ಯಗಳ ಜನರ ನಡುವೆ ಬಿಕ್ಕಟ್ಟು ಹೆಚ್ಚುತ್ತಿದೆ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ವಿಶ್ವಸಂಸ್ಥೆಯ ಅಧಿಕಾರಿಯೊಬ್ಬರು.
ಪುಣೆ ನಂಬರ್ 1ಸದ್ಯ ಏಷ್ಯಾದಲ್ಲಿ ಹೆಚ್ಚು ವಲಸೆ ಎದುರಿಸುತ್ತಿರುವ ನಗರ ಮಹಾರಾಷ್ಟ್ರದ ಪುಣೆ ಮತ್ತು ಗುಜರಾತ್‌ನ ಸೂರತ್. ಸಹಜವಾಗಿಯೇ ಉದ್ಯೋಗಾವಕಾಶಗಳ ಸೃಷ್ಟಿಯಲ್ಲಿ ವೇಗವಾಗಿ ಸಾಗುತ್ತಿರುವ ಆಂಧ್ರ ಪ್ರದೇಶ ಮತ್ತು ಕರ್ನಾಟಕಕ್ಕೂ ವಲಸಿಗರ ಸಂಖ್ಯೆ ಹೆಚ್ಚುತ್ತಿದೆ. ವ್ಯಕ್ತಿಯೊಬ್ಬನ ಆರ್ಥಿಕ ಪರಿಸ್ಥಿತಿಗೂ ವಲಸೆಗೂ ಅವಿನಾಭಾವ ಸಂಬಂಧವಿದೆ ಎನ್ನುವು ದನ್ನು ಸಾರುತ್ತಿದೆ ಈ ವರದಿ. ಉದಾಹರಣೆಗೆ ಬಿಹಾರದ ತಲಾ ಆದಾಯ ಸೋಮಾಲಿಯಾಕ್ಕೆ ಅಜಮಾಸು ಸಮನಾಗಿದೆ(520 ಡಾಲರ್) ಅಲ್ಲದೇ, ಇನ್ನು ಒಬ್ಬ ಮಹಿಳೆಯ ಮಕ್ಕಳ ಜನನ ಪ್ರಮಾಣ 3.4ರಷ್ಟಿದೆ. ಇನ್ನೊಂದೆಡೆ ದಕ್ಷಿಣ ರಾಜ್ಯ ಕೇರಳದ ತಲಾ ಆದಾಯ ಬಿಹಾರಕ್ಕಿಂತ ನಾಲ್ಕು ಪಟ್ಟು ಹೆಚ್ಚು. ಮಕ್ಕಳ ಜನನ ಪ್ರಮಾಣ ಒಬ್ಬ ಮಹಿಳೆಗೆ 1.6 ರಷ್ಟಿದೆ ಎನ್ನುತ್ತದೆ ಈ ವರದಿ.