ದೋಟಿಹಾಳ : ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ ಹಣವಿಲ್ಲವೆಂದು ನೆಪ ಹೇಳಿ, ಬ್ಯಾಂಕ್ ಬಾಗಿಲಿಗೆ ಸುಮಾರು ಎರಡುವರೆ ಗಂಟೆಗಳ ಕಾಲ ಬೀಗ ಹಾಕಿದ ಘಟನೆ ಸೋಮವಾರ ಗ್ರಾಮದಲ್ಲಿ ನಡೆದಿದೆ.
ಗ್ರಾಮೀಣ ಬ್ಯಾಂಕ್ ಬ್ಯಾಂಕಿನ ಬಾಗಿಲಿಗೆ ನೋ ಕ್ಯಾಶ್ ಎಂದು ನೋಟಿಸ್ ಅಂಟಿಸಿ ಬ್ಯಾಂಕಿನ ಸಿಬ್ಬಂದಿಗಳು ಬೀಗ ಹಾಕಿಕೊಂಡು ಹೋಗಿದ್ದಾರೆ.
ತಮ್ಮ ದೈನಂದಿನ ವ್ಯವಹಾರಕ್ಕಾಗಿ ಬ್ಯಾಂಕಿಗೆ ಆಗಮಿಸಿದ ಗ್ರಾಹಕರ ಪಾಡು ಹೇಳುತೀರಂತಾಗಿದೆ. ಬ್ಯಾಂಕಿನಲ್ಲಿ ಹಣ ಇಲ್ಲದಿದ್ದರೂ ಉಳಿದ ಕೆಲಸ ಕಾರ್ಯಗಳು ಮಾಡಬಹುದು ಆದರೆ ಇಲ್ಲಿಯ ಸಿಬ್ಬಂದಿಗಳು ಬೇಜವಾಬ್ದಾರಿತನದಿಂದ ನೋ ಕ್ಯಾಶ್ ಎಂದು ಬೋರ್ಡ್ ಹಾಕಿ ಬ್ಯಾಂಕಿನ ಬಂದು ಮಾಡಿರೋವದು ಎಷ್ಟರಮಟ್ಟಿಗೆ ಸರಿ ಎಂದು ಗ್ರಾಹಕರು ಪ್ರಶ್ನಿಸಿದರು. ಈ ಬ್ಯಾಂಕಿನಲ್ಲಿ ಮೆನೇಜರ್ ನಿಧನವಂದಿ ಒಂದು ತಿಂಗಳವಾದರೂ ಯಾರು ಇಲ್ಲಿಗೆ ಮೆನೇಜರ್ ಬಂದಿಲ್ಲ. ಹೀಗಾಗಿ ಈ ಬ್ಯಾಂಕಿನ ಸಿಬ್ಬಂದಿಗಳಿಗೆ ಯಾರು ಹೇಳೋರಿಲ್ಲ ಕೇಳೋರಿಲ್ಲಂತಾಗಿದೆ ಗ್ರಾಹಕರು ಆರೋಪಿಸುತ್ತಿದ್ದಾರೆ. ಗ್ರಾಹಕರಿಗೆ ಬ್ಯಾಂಕಿನ ಸಿಬ್ಬಂದಿ ಸಿಬ್ಬಂದಿಗಳಿಗೆ ಇದರ ಬಗ್ಗೆ ವಿಚಾರಿಸಿದರೆ. ಬೇಕಿದ್ದರೆ ಅಕೌಂಟನ್ನಿ ಕ್ಲೋಸ್ ಮಾಡಿಕೊಂಡು ಹೋಗಿ ಎಂದು ಹೇಳುತ್ತಾರೆ ಎಂದು ಗ್ರಾಹಕರು ತಿಳಿಸಿದರು.
ದೋಟಿಹಾಳದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಬಾಗಿಲಿಗೆ ಬೀಗ. ಬ್ಯಾಂಕ್ ಕೆಲಸಕ್ಕೆ ಆಗಮಿಸಿದ ಗ್ರಾಹಕರ ಪರದಾಟ ಮುಂಜಾನೆಯಿಂದಲೇ ಬ್ಯಾಂಕ್ ವ್ಯವಹಾರಕ್ಕಾಗಿ ಆಗಮಿಸಿದ ಗ್ರಾಹಕರು ಹಣವಿರದಿದ್ದರೂ, ಹಣ ಪಾವತಿಸಲು, ಬೇರೆ ಬೇರೆ ವ್ಯವಹಾರ ಮಾಡಲು ಬ್ಯಾಂಕ್ ಬೇಕು. ದೋಟಿಹಾಳಕ್ಕೆ ಸುತ್ತಲಿನ ಗ್ರಾಮಗಳಿಂದ ಬಂದಿರುವ ಗ್ರಾಹಕರು ಸುಮಾರು 60ಕ್ಕೂ ಹೆಚ್ಚು ಜನ ಗ್ರಾಹಕರು ಮುಂಜಾನೆಯಿಂದ ಕಾಯಿಯುತ್ತಿದ್ದಾರೆ. ಆದರೆ ಬ್ಯಾಂಕಿನ ಮುಂದೆ ಬ್ಯಾಂಕಿನ ಯಾವ ಸಿಬ್ಬಂದಿಯೂ ಇಲ್ಲದಿರುವುದು ಕಂಡು ಬಂತು. ಇದು ಕೇವಲ ಒಂದು ದಿನದ ಘಟನೆಯಲ್ಲ ಇಂತಹ ಘಟನೆಗಳು ಹಲವು ದಿನಗಳಿಂದ ನಡೆದುಕೊಂಡು ಬಂದಿದೆ.
ಈ ಬ್ಯಾಂಕಿನಲ್ಲಿ ಕೇವಲ ಇಬ್ಬರೇ ಮಹಿಳಾ ಸಿಬ್ಬಂದಿಗಳು ಇರುವುದರಿಂದ ಇಷ್ಟೆಲ್ಲಾ ಸಮಸ್ಯೆಯಾಗಿದೆ. ಇದರ ಬಗ್ಗೆ ವಿಚಾರಿಸಲು ಮೇಲಧಿಕಾರಿಗಳಿಗೆ ಫೋನ್ ಮಾಡಿದರು ಫೋನ್ ರಿಸೀವ್ ಮಾಡುತ್ತಿಲ್ಲ.
ನಾವು ಬ್ಯಾಂಕಿಗೆ ಕೇವಲ ಹಣ ಪಡೆಯಲು ಬರುವುದಿಲ್ಲ ಹಣ ಜಮಾ ಮಾಡಲು ಹಾಗೂ ಇನ್ನಿತರ ಕೆಲಸಗಳಿಗೆ ಬ್ಯಾಂಕಿಗೆ ಬರುತ್ತೇವೆ ಆದರೆ ಬ್ಯಾಂಕಿನಲ್ಲಿ ಹಣ ಇಲ್ಲದಿದ್ದರೇನು ನಾವು ಹಣ ಪಾವತಿಸಲು ಬಂದಿದ್ದೇವೆ ನಮಗಾದರೂ ಬ್ಯಾಂಕ್ ತೆಗೆದಿರಬೇಕಲ್ಲವೇ ಕ್ಯಾಶ್ ಇಲ್ಲ ಅಂತ ಹೇಳಿ ಬ್ಯಾಂಕ್ ಅನ್ನು ಬಂದು ಮಾಡುವದು ಎಷ್ಟರಮಟ್ಟಿಗೆ ಸರಿ ಎಂದು ಬಿಜಕಲ್ ಗ್ರಾಮದ ಮಂಜುನಾಥ್ ಅವರು ಆರೋಪಿಸಿದರು.
ಇದನ್ನೂ ಓದಿ : ಗುವಾಹಟಿ ಪಂದ್ಯದ ಬಳಿಕ ಡೇವಿಡ್ ಮಿಲ್ಲರ್ ಬಳಿ ಕ್ಷಮೆ ಕೇಳಿದ ಕ್ವಿಂಟನ್ ಡಿಕಾಕ್