Advertisement

Karnataka: ರಾಜ್ಯದ 172 ಎಪಿಎಂಸಿಗಳ ಉನ್ನತೀಕರಣ: ಸಚಿವ ಶಿವಾನಂದ ಪಾಟೀಲ್‌

09:21 PM Jul 29, 2024 | Team Udayavani |

ಮದ್ದೂರು: ಮೈ ಷುಗರ್‌ ಪುನಶ್ಚೇತನ ಜೊತೆಗೆ ನೂತನ ಕಾರ್ಖಾನೆ ಸ್ಥಾಪಿನೆಗೆ ಸರ್ಕಾರ ಬದ್ಧವಾಗಿದ್ದು ರಾಜ್ಯದ 172 ಎಪಿಎಂಸಿಗಳನ್ನು ಉನ್ನತೀಕರಿಸಿ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದೆಂದು ಸಕ್ಕರೆ ಮತ್ತು ಜವಳಿ ಸಚಿವ ಶಿವಾನಂದ ಎಸ್‌.ಪಾಟೀಲ್‌ ತಿಳಿಸಿದರು.

Advertisement

ಪಟ್ಟಣದ ಎಪಿಎಂಸಿ ಮಾರುಕಟ್ಟೆಗೆ ಸೋಮವಾರ ಸಂಜೆ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿ, ದೇಶದ ಮೂರು ರಾಜ್ಯಗಳಲ್ಲಿ ಈ ಹಿಂದೆ ಕೇಂದ್ರ ಸರ್ಕಾರ ಹಿಂಪಡೆದಿದ್ದ ಎಪಿಎಂಸಿ ಕಾಯ್ದೆಯನ್ನು ಮರುಸ್ಥಾಪಿಸಿ ಮುಚ್ಚುವ ಹಂತದಲ್ಲಿದ್ದ ಸಂಸ್ಥೆಗೆ ಮರುಜೀವ ನೀಡಲಾಗಿದೆ. 180 ಕೋಟಿ ರೂ. ಕುಸಿದಿದ್ದ ಎಪಿಎಂಸಿ ವಾರ್ಷಿಕ ಆದಾಯವನ್ನು ಕಳೆದ 3 ತಿಂಗಳಲ್ಲಿ 87 ಕೋಟಿ ರೂ.ಗೆ ಹೆಚ್ಚಿಸಲಾಗಿದೆ. ಪ್ರಸಕ್ತ ವರ್ಷ 180 ರಿಂದ 350 ಕೋಟಿ ರೂ. ಆದಾಯ ನಿರೀಕ್ಷೆ ಹೊಂದಲಾಗಿದೆ. ಮದ್ದೂರು ಎಪಿಎಂಸಿ ಅಭಿವೃದ್ಧಿ ಮತ್ತು ಸಿಬ್ಬಂದಿ ಕೊರತೆ ನೀಗಿಸಲು ಒಂದು ವಾರದೊಳಗೆ ಕ್ರಮವಹಿಸುವುದಾಗಿ ಭರವಸೆ ನೀಡಿದರು.

ನಾಲ್ವಡಿ ಕೃಷ್ಣರಾಜ ಒಡೆಯರ್‌ ಸ್ಥಾಪಿಸಿದ ಮೈ ಷುಗರ್‌ ನೂತನ ಕಾರ್ಖಾನೆ ಮತ್ತು ಡಿಸ್ಟಿಲರಿ ಘಟಕ ಚಾಲನೆ ಸಹ ವಿದ್ಯುತ್‌ ಘಟಕ, ಮರು ಆರಂಭಕ್ಕೆ ಒತ್ತು ನೀಡಲು ಸರ್ಕಾರ ಅಗತ್ಯ ಅನುದಾನ ಬಿಡುಗಡೆಗೆ ಈಗಾಗಲೇ ನಿರ್ಧಾರಿಸಿದೆ. ಕೇಂದ್ರ ಸರ್ಕಾರ ನಿಗದಿ ಮಾಡಿರುವ ಎಫ್ಆರ್‌ಪಿ ದರ 3,150 ರೂ.ಗಳನ್ನು ವಿತರಿಸಲು ಮುಂದಾಗಿದ್ದು, ಕಾರ್ಖಾನೆ ವ್ಯಾಪ್ತಿಯಲ್ಲಿ ಕಬ್ಬು ನುರಿಸಲು ಮತ್ತು ಕೊರತೆ ಬರದಂತೆ ಕ್ರಮ ವಹಿಸಲಾಗುವುದೆಂದರು.

ಶಾಸಕ ಕೆ.ಎಂ.ಉದಯ್‌, ಎಪಿಎಂಸಿ ಜಿಲ್ಲಾ ಉಪ ನಿರ್ದೇಶಕಿ ರೇವತಿ ಬಾಯಿ, ಕಾರ್ಯದರ್ಶಿ ಆರ್‌.ಲತಾಕುಮಾರಿ, ಸಹ ಕಾರ್ಯದರ್ಶಿ ಶಿವಕುಮಾರ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next