Advertisement
ಅಕಾಡೆಮಿಯ ಅಧ್ಯಕ್ಷ ದಯಾನಂದ ಜಿ. ಕತ್ತಲಸಾರ್ ಪತ್ರಿಕಾಗೋಷ್ಠಿಯಲ್ಲಿ ಪ್ರಶಸ್ತಿ ಪುರಸ್ಕೃತರ ವಿವರ ಪ್ರಕಟಿಸಿದರು. ವಿಶೇಷ ಬಾಲ ಪ್ರತಿಭಾ ಪುರಸ್ಕಾರ, ಯುವ ಸಾಧಕ ಪುರಸ್ಕಾರ, ಮಾಧ್ಯಮ ಪುರಸ್ಕಾರ, ಸಂಘಟನ ಪುರಸ್ಕಾರಕ್ಕೆ ರಾಜ್ಯ, ಹೊರ ರಾಜ್ಯ ಮತ್ತು ಹೊರ ರಾಷ್ಟ್ರದಲ್ಲಿ ವಿಶೇಷವಾಗಿ ಗುರುತಿಸಿ ಆಯ್ಕೆ ಮಾಡಲಾಗಿದೆ ಎಂದರು.
Related Articles
Advertisement
ಬಾಲ ಪ್ರತಿಭಾ ಪುರಸ್ಕಾರಕ್ಕೆ ನಿರೀಕ್ಷಾ ಕೋಟ್ಯಾನ್ ಕೋಡಿಕೆರೆ, ಜೀವಿಕಾ ಶೆಟ್ಟಿ ಮುಂಬಯಿ, ಸಾನ್ವಿ ಯುಎಸ್‌ಎ, ಯುವ ಸಾಧಕ ಪುರಸ್ಕಾರಕ್ಕೆ ಹರಿಪ್ರಸಾದ್ ನಂದಳಿಕೆ, ಚಿನ್ಮಯಿ ಮೋಹನ್ ಸಾಲಿಯಾನ್ ಮುಂಬಯಿ, ರಮಾನಂದ ಶೆಟ್ಟಿ ಒಮನ್, ಮಾಧ್ಯಮ ಪುರಸ್ಕಾರಕ್ಕೆ ಶಶಿ ಬಂಡಿಮಾರ್, ರೋನ್ಸ್ ಬಂಟ್ವಾಳ ಮುಂಬಯಿ ಆಯ್ಕೆಯಾಗಿದ್ದಾರೆ. ಸಂಘಟನ ಪುರಸ್ಕಾರಕ್ಕೆ ಜೈ ತುಳುನಾಡು, ತುಳು ಕೂಟ ಫೌಂಡೇಶನ್ ನಾಲಸೋಪಾರ ಮುಂಬಯಿ, ತುಳುಕೂಟ ಕತಾರ್ ಆಯ್ಕೆಯಾಗಿವೆ.
ಗೌರವ ಪ್ರಶಸ್ತಿ 50,000 ರೂ. ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆ, ಪುಸ್ತಕ ಬಹುಮಾನ 25,000 ರೂ. ನಗದು, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಯನ್ನು ಒಳಗೊಂಡಿರುತ್ತದೆ. ವಿಶೇಷ ಪುರಸ್ಕಾರ 10,000 ರೂ. ನಗದು, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ಒಳಗೊಂಡಿರುತ್ತದೆ ಎಂದು ಕತ್ತಲಸಾರ್ ತಿಳಿಸಿದರು.
ಅಕಾಡೆಮಿ ಸದಸ್ಯರಾದ ಲೀಲಾಕ್ಷ ಕರ್ಕೇರ, ಕಾಂತಿ ಶೆಟ್ಟಿ ಬೆಂಗಳೂರು, ನಾಗೇಶ್ ಕುಲಾಲ್ ಕುಳಾಯಿ, ರಿಜಿಸ್ಟ್ರಾರ್ ಕವಿತಾ ಪತ್ರಿಕಾಗೋಷ್ಠಿಯಲ್ಲಿದ್ದರು.
ಜಾನಪದ ಕ್ಷೇತ್ರದ ಸಾಧಕ ಸಂಜೀವ ಬಂಗೇರ :
ದೈವಗಳ ನೇಮಕಟ್ಟುವ ಕಾಯಕದಲ್ಲಿ ತೊಡಗಿಸಿಕೊಂಡಿರುವ ಜತೆಗೆ ಪಾಡªನ ಗಾಯಕರಾಗಿದ್ದಾರೆ. ತುಳುನಾಡಿನ ಪ್ರಸಿದ್ಧ ಕ್ಷೇತ್ರಗಳಾದ ಪಾವೂರು, ಬೆಳ್ಮ ದಬ್ಬೆಲಿ, ಕುದುಕೋಳಿ, ಕುರ್ನಾಡು ಗುರುಪುರ, ಮಂಜೇಶ್ವರ, ವರೇಕಳ, ಕೋಟ್ರಗುತ್ತು, ಪಟ್ಟೋರಿಗಳಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಉದ್ಯಾವರ ಅರಸು ಮಂಜಿಷ್ಣಾರ್ ಮಾಡದ ಅರಸುದೈವಗಳ ಪಾಡ್ದನ, (ಮೂಡದಾಯ) ವೈದ್ಯನಾಥ ದೈವದ, ಜುಮಾದಿ, ಜಾರಂದಾಯ, ಪಂಜುರ್ಲಿ, ಉಗೆದಲ್ತಾಯ, ಬಂಟ ಹೀಗೆ ಅನೇಕ ರಾಜದೈವಗಳ ನೇಮಕಟ್ಟುವ ಸೇವೆ ಮಾಡಿದ್ದಾರೆ.
ಕೃಷ್ಣಪ್ಪ ಉಪ್ಪೂರು
ಉಪನ್ಯಾಸಕರಾಗಿ ಇವರು ಚಲನ ಚಿತ್ರಗಳಲ್ಲಿ ವೃತ್ತಿಪರರಾಗಿ ಹಾಗೂ ನಾಟಕಗಳಲ್ಲಿ ಹವ್ಯಾಸಿ ಕಲಾವಿದನಾಗಿ ಕಲಾ ಸೇವೆ ಮಾಡಿದ್ದಾರೆ. ಇವರ ವಿಶೇಷ ಸಾಮಾಜಿಕ ಪರಿಣಾಮ ಬೀರಿದ “ಮಾರಿಬಲೆ’ ತುಳು ಚಿತ್ರಕ್ಕೆ 1997-98ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಲಭಿಸಿದೆ. ಕರ್ನಾಟಕ ಚಲನಚಿತ್ರ ಕೈಗಾರಿಕಾ ಅಭಿವೃದ್ಧಿ ನಿಗಮದ ನೋಂದಾಯಿತ ನಿರ್ದೇಶಕರಾಗಿದ್ದು ಹಲವಾರು ತುಳು ಸಿನೆಮಾ,ನಾಟಕಗಳಿಗೆ ಮಾರ್ಗದರ್ಶನ ನೀಡಿದ್ದಾರೆ.
ಉಲ್ಲಾಸ ಕೃಷ್ಣ ಪೈ ಪುತ್ತೂರು :
ಗೌರವ ಸಂದರ್ಶಕ ಶಿಕ್ಷಕರಾಗಿರುವ ಇವರು 3 ದಶಕಗಳಿಂದ ಉಚಿತವಾಗಿ ಸೇವೆ ಸಲ್ಲಿಸುತ್ತಿದ್ದಾರೆ. 6 ಭಾಷೆಗಳಲ್ಲಿ ಮಕ್ಕಳ ಸಾಹಿತ್ಯ ರಚಿಸಿದ್ದಾರೆ. 25ಕ್ಕೂ ಅಧಿಕ ಭಾಷೆಗಳಲ್ಲಿ ಶಿಶುಪ್ರಾಸ, ಅಭಿನಯ ಗೀತೆಗಳನ್ನು ಕಲಿಸಿಕೊಡುತ್ತಿದ್ದಾರೆ. 20ಕ್ಕೂ ಮಿಕ್ಕಿ ತುಳು ವಿಕಾಸಮಾಲೆಯ ಕೃತಿಗಳನ್ನು, ಇತರ ಭಾಷೆಗಳಲ್ಲಿ ನೂರಾರು ಕೃತಿಗಳನ್ನು ರಚಿಸಿದ್ದಾರೆ. ಕಡ್ಲೆಪುಂಡಿ, ಪುಳಿಂಕೊಟೆ ಬಾಂಬೆ ಮಿಠಾಯಿ, ಸಾಂತಾಣಿ, ಚಿತ್ರಾಕ್ಷರ ಶಬ್ದಬಂಧ, ಅಕ್ರೋಟು, ಚಿಲಿಪಿಲಿ ಗುರ್ಬಿ ಪಕ್ಕಿ, ಕಿಟ್ಟಣ್ಣ ಕುರ್ಲರಿ, ಮೋಕೆದ ಜೋಸ್ತಿ, ಕಮಲನ ಕಿಲಕಿಲ ಇವರ ತುಳು ವಿಕಾಸ ಮಾಲೆಯ ಕೃತಿಗಳು.