ತೆಕ್ಕಟ್ಟೆ : ರಷ್ಯಾ ಯುಕ್ರೇನ್ ಯುದ್ಧದಲ್ಲಿ ಮೃತಪಟ್ಟ ನವೀನ್ ಗಾಗಿ ಇಡೀ ದೇಶವೇ ಕಂಬನಿ ಮಿಡಿದಿದೆ. ಆದರೆ ಪಕ್ಕದ ತೆಲಂಗಾಣ ರಾಜ್ಯದಲ್ಲಿ ಮೃತಪಟ್ಟ ಕರ್ನಾಟಕದ ವಿದ್ಯಾರ್ಥಿಗಾಗಿ ಸರಕಾರ ಕನಿಷ್ಠ ಸಾಂತ್ವಾನ ಹೇಳದಿರುವುದು ಮಾನವೀಯತೆಗೆ ಸವಾಲಾಗಿದೆ. ಆದರೆ ಹೊರರಾಜ್ಯದವರು ಎನ್ನುವ ಕಾರಣಕ್ಕೆ ಮೃತಪಟ್ಟ ಮಗುವಿಗೆ ಅಂತಿಮ ಗೌರವವನ್ನು ಸಲ್ಲಿಸದೆ ತೆಲಂಗಾಣ ಸರಕಾರ ಅಮಾನವೀಯವಾಗಿ ನಡೆದುಕೊಂಡಿದೆ.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೆದೂರು ಗ್ರಾಮ ಪಂಚಾಯತ್ ಮಲ್ಯಾಡಿ ಗ್ರಾಮದ ನಿವಾಸಿಗಳಾದ ದಿನಕರ ಶೆಟ್ಟಿ ಮತ್ತು ಶೀಲಾ ಶೆಟ್ಟಿ ದಂಪತಿಗಳು ಸುಮಾರು 21 ವರ್ಷಗಳ ಹಿಂದೆ ತೆಲಂಗಾಣದ ಕಮ್ಮಾಮ್ ನಲ್ಲಿ ನೆಲೆಸಿದ್ದರು. ಆದರೆ ವಿದಿಯ ಅಟ್ಟಹಾಸಕ್ಕೆ ಪುತ್ರ ದಿಗಂತ್ ಶೆಟ್ಟಿ ಜನವರಿ 18, 2022 ರಂದು ತೆಲಂಗಾಣದ ಕಮ್ಮಾಮ್ ನಲ್ಲಿ ನಡೆದ ಅವಘಡವೊಂದರಲ್ಲಿ ಮೃತಪಟ್ಟಿದ್ದಾನೆ. ಆದರೆ ಇದುವರೆಗೂ ತೆಲಂಗಾಣ ಸರಕಾರವಾಗಲಿ ಯಾವುದೇ ಸರಕಾರಿ ಅ—ಕಾರಿಗಳಾಗಲಿ ಯಾರು ಕೂಡ ಸಹಾಯ ಹಸ್ತ ಚಾಚುವುದು ಬಿಡಿ ಕನಿಷ್ಠ ಕಂಬನಿ ಒರೆಸುವ ಕಾರ್ಯ ಕೂಡ ಮಾಡದಿರುವುದು ವಿಪರ್ಯಾಸ.
ತೆಲಂಗಾಣದ ಕಮ್ಮಾಮ್ ನಲ್ಲಿ ನೆಲೆಯಾಗಿರುವ ಇವರು ಉಡುಪಿ ಮೂಲದ ಹೋಟೇಲ್ ಉದ್ಯಮಿ ನೇರಂಬಳ್ಳಿ ರಾಘವೇಂದ್ರ ರಾವ್ ಅವರ ಹೋಟೇಲ್ ನಲ್ಲಿ ಕ್ಯಾಶಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ದಂಪತಿಗಳ ಪುತ್ರ ದಿಗಂತ್ ಶೆಟ್ಟಿ ಕಮ್ಮಾಮ್ ನಲ್ಲಿರುವ ಸ್ಥಳೀಯ ಖಾಸಗಿ ಶಾಲೆಯಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಕೋವಿಡ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಶಾಲೆಗೆ ರಜೆ ನೀಡಿದ ಕಾರಣ ಮನೆಯ ಪಕ್ಕದ ಜಾಗದಲ್ಲಿ ಆಟವಾಡಲು ತೆರಳಿದಾಗ, ಆಟ ಮೈದಾನದ ಪಕ್ಕದ ಕಂಪೌಂಡ್ ಗೋಡೆಯ ಮೇಲೆ ಬೃಹತ್ ಮರ ಉರುಳಿ ಬಿದ್ದ ಪರಿಣಾಮ ವಿದ್ಯಾರ್ಥಿ ದಿಗಂತ್ ಮೃತಪಟ್ಟಿದ್ದಾನೆ. ಘಟನೆಯಲ್ಲಿ ಒಟ್ಟು ಮೂವರು ಮಕ್ಕಳ ಮೇಲೆ ಮರ ಉರುಳಿ ಬಿದ್ದಿದ್ದು, ಇಬ್ಬರು ಮಕ್ಕಳು ಮೃತಪಟ್ಟಿದ್ದು, ಅದರಲ್ಲಿ ಕರ್ನಾಟಕದ ದಿಗಂತ್ ಕೂಡ ಒಬ್ಬ.
ಇದನ್ನೂ ಓದಿ : ಮುಸ್ಲಿಂ ವ್ಯಾಪಾರಸ್ಥರಿಗೆ ನಿರ್ಬಂಧ : ಮಾಹಿತಿ ತರಿಸಿ ಅವಲೋಕಿಸುವೆ ; ಅಬ್ದುಲ್ ಅಜೀಮ್
ಒಟ್ಟಾರೆಯಾಗಿ ಯಾರೋ ಮಾಡಿದ ತಪ್ಪಿಗೆ ಭವಿಷ್ಯದಲ್ಲಿ ಏನೋ ಕನಸು ಹೊತ್ತ ಮುಗ್ಧ ಬಾಲಕನೋರ್ವ ಮೃತಪಟ್ಟಿದ್ದಾನೆ. ಮಗನ ಅಲಿಕೆಯ ನೋವು ಸಹಿಸಲಾಗಿದೆ ಕೊರಗುತ್ತಿರುವ ದಂಪತಿಗಳಿಗೆ ಇದುವರೆಗೆ ಕನಿಷ್ಠ ಸೌಜನ್ಯಕ್ಕಾದರೂ ಕೂಡಾ ಸಹಾಯ ಸಾಂತ್ವಾನವನ್ನು ಹೇಳದ ತೆಲಂಗಾಣ ಸರಕಾರದ ನಡೆಗೆ ಹಿರಿಯ ಲೆಕ್ಕಪರಿಶೋಧಕ ಮಲ್ಯಾಡಿ ರಾಜೀವ ಶೆಟ್ಟಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.