Advertisement
ನಗರದಲ್ಲಿ ರವಿವಾರ ನಡೆದ “ಕಲ್ಯಾಣ ಕರ್ನಾಟಕ ಉತ್ಸವ’ ಕಾರ್ಯಕ್ರಮದಲ್ಲಿ ಅವರು ಕಲಬುರಗಿ ಜಿಲ್ಲಾಡಳಿತ ಮತ್ತು ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜಾರಿಗೊಳಿಸಲಾದ “ಈ ಆರೋಗ್ಯ ಮಿತ್ರ’ ಯೋಜನೆ ಯನ್ನು ಲೋಕಾರ್ಪಣೆ ಮಾಡಿದರು.
Related Articles
ಜನಸಂದಣಿ ಪ್ರದೇಶಗಳಲ್ಲಿ ಲಭ್ಯವಿರುವ ಆರೋಗ್ಯ ಎಟಿಎಂಗಳ ಮೂಲಕ ಸರಳವಾದ ಆರೋಗ್ಯ ಸೇವೆಗಳ ಲಭ್ಯತೆ, ನಿಖರವಾದ ವೈದ್ಯಕೀಯ ಪರೀಕ್ಷೆ ಮತ್ತು ಹೆಚ್ಚಿನ ಆರೋಗ್ಯ ತಪಾಸಣೆಗಾಗಿ ಅರೋಗ್ಯ ಎಟಿಎಂಗಳನ್ನು ಬಳಸುವುದರಿಂದ ಸಮಯ ಮತ್ತು ಹಣ ಉಳಿತಾಯವಾಗಲಿದೆ. ಸಮಗ್ರ ಆರೋಗ್ಯ ಸೇವೆಗಳಿಂದ ತುರ್ತು ಸ್ಪಂದನೆ, ರೋಗಿಗಳಿಗೆ ಆತ್ಮಸ್ಥೈರ್ಯ ತುಂಬುವುದರ ಮೂಲಕ ಉತ್ತಮ ಆರೋಗ್ಯ ಮತ್ತು ಒಟ್ಟಾರೆ ಯೋಗಕ್ಷೇಮ ಲಭ್ಯವಾಗಲಿದೆ. ನಿರಂತರ ಆರೋಗ್ಯ ತಪಾಸಣೆ ಮತ್ತು ಮೇಲ್ವಿಚಾರಣೆ ಮೂಲಕ ರೋಗಗಳನ್ನು ಪತ್ತೆ ಹಚ್ಚಲು ಮತ್ತು ತಡೆಗಟ್ಟಲು ಸಹಕಾರಿಯಾಗಿದ್ದು, ರೋಗಿಯ ದಾಖಲೆಗಳನ್ನು ಗೌಪ್ಯವಾಗಿಡಲಾಗುತ್ತದೆ. ಹತ್ತು ನಿಮಿಷಗಳಲ್ಲಿ 50ಕ್ಕೂ ಹೆಚ್ಚು ಪರೀಕ್ಷೆಗಳನ್ನು ನಡೆಸಬಹುದು. ತ್ವರಿತವಾಗಿ ಆರೋಗ್ಯದ ವರದಿ ನೀಡಲಾಗುತ್ತದೆ. ಆರೋಗ್ಯಕ್ಕೆ ಅಗತ್ಯವಿರುವ ಆಹಾರದ ಮಾಹಿತಿ ನೀಡಲಾಗುತ್ತದೆ.
ಕÇಬುರಗಿ ಜಿಲ್ಲೆಯಲ್ಲಿ ಎಚ್.ಪಿ.ಎಂಟರ್‌ಪ್ರೈಸಸ್ ವತಿಯಿಂದ 25 ಹೆಲ್ತ್ ಎಟಿಎಂಗಳನ್ನು ಸಿಎಸ್‌ಆರ್ ಅನುದಾನದಡಿ ಪಡೆದು ಅಳವಡಿಸಲಾಗುತ್ತಿದೆ. ಸಚಿವ ಪ್ರಿಯಾಂಕ್ ಖರ್ಗೆ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ| ಅಜಯ್ ಸಿಂಗ್ ಸಹಿತ ಪ್ರಮುಖರು ಉಪಸ್ಥಿತರಿದ್ದರು.
Advertisement
ಬರ ನಿರ್ವಹಣೆಗೆ ಹಣಕಾಸಿನ ತೊಂದರೆ ಇಲ್ಲಬರ ನಿರ್ವಹಣೆಗೆ ರಾಜ್ಯದಲ್ಲಿ ಸದ್ಯ ಹಣಕಾಸಿನ ತೊಂದರೆ ಇಲ್ಲ. 20 ಕೋ.ರೂ. ನೀಡಿದ್ದೇವೆ. ಭೀಕರವಾದ ದಿನಗಳು ಇನ್ನೂ ಎದುರಾಗಿಲ್ಲ. ಒಂದೊಮ್ಮೆ ಅಂಥ ಪರಿಸ್ಥಿತಿ ಎದುರಾದರೆ ಯುಧ್ದೋಪಾದಿಯಲ್ಲಿ ತುರ್ತು ಕ್ರಮ ಕೈಗೊಳ್ಳಲು ಸರಕಾರ ಸನ್ನದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರಗಾಲ ಹಿನ್ನೆಲೆಯಲ್ಲಿ ಕೂಲಿ ಕಾರ್ಮಿಕರಿಗೆ ಕೆಲಸ ಸಿಗುತ್ತಿಲ್ಲ. ಇದರಿಂದಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಗುಳೆ ಹೋಗುವ ಸಾಧ್ಯತೆಗಳಿವೆ. ಆದ್ದರಿಂದ ನರೇಗಾ ಕೂಲಿ ದಿನಗಳನ್ನು 150ಕ್ಕೆ ಹೆಚ್ಚಿಸುವ ಪ್ರಸ್ತಾವ ಇದೆ. ಕೇಂದ್ರ ಸರಕಾರ ಇದಕ್ಕೆ ಒಪ್ಪಿದರೆ ಗುಳೆ ತಪ್ಪಿಸಬಹುದು ಎಂದು ಹೇಳಿದರು.