Advertisement

ವಿಸ್ತರಣೆ ಅಲ್ಲ , ಪುನಾರಚನೆ

12:10 AM Jan 13, 2021 | Team Udayavani |

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಗೆ ಅಧಿಕೃತ ಸಮಯ ನಿಗದಿಯಾಗಿದೆ. ಬುಧವಾರ ಅಪರಾಹ್ನ 3.50ಕ್ಕೆ ರಾಜಭವನದ ಗಾಜಿನ ಮನೆಯಲ್ಲಿ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ.

Advertisement

ಸಂಪುಟ ಸೇರುವವರ ಪಟ್ಟಿ ಬುಧವಾರವೇ ಬಿಡುಗಡೆ ಯಾಗಲಿದೆ. 7ರಿಂದ 8 ಮಂದಿಯನ್ನು ಸಂಪುಟಕ್ಕೆ ಸೇರಿಸಿ ಕೊಳ್ಳುವುದಾಗಿ ಸಿಎಂ ಹೇಳಿದ್ದಾರೆ. ಎಚ್‌. ನಾಗೇಶ್‌, ಶಶಿಕಲಾ ಜೊಲ್ಲೆ ಮತ್ತಿತರ ಕೆಲವರು ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ನಾಗೇಶ್‌ಗೆ ಸೂಚನೆ :

ಸಂಪುಟದಿಂದ ಕೈ ಬಿಡುವ ಸುದ್ದಿಯ ಹಿನ್ನೆಲೆಯಲ್ಲಿ ಅಬಕಾರಿ ಸಚಿವ ಎಚ್‌. ನಾಗೇಶ್‌ ಮಂಗಳವಾರ ಬೆಳಗ್ಗೆ ಸಿಎಂ ಅವರನ್ನು ಭೇಟಿ ಮಾಡಿದ್ದರು. ಈ ಸಂದರ್ಭ ಸಂಪುಟ ವಿಸ್ತರಣೆಗೆ ಮುನ್ನ  ರಾಜೀನಾಮೆ ನೀಡು ವಂತೆ ಸಿಎಂ ಸೂಚಿಸಿದ್ದರು. ನಿಮ್ಮೊಬ್ಬರನ್ನೇ ಅಲ್ಲ, ಇನ್ನೂ ಇಬ್ಬರು ಮೂವರನ್ನು ಕೈ ಬಿಡಬಹುದು ಎಂದಿದ್ದರು ಎನ್ನಲಾಗಿದೆ.

ಇದರಿಂದ ನಾಗೇಶ್‌ ಬೇಸರಗೊಂಡಿದ್ದು, ಅವರ ಬೆಂಬಲಿಗರು ಮಂಗಳವಾರ ಸಂಜೆ ಸಿಎಂ ನಿವಾಸ ಕಾವೇರಿ ಎದುರು ಪ್ರತಿಭಟನೆ ನಡೆಸಿದರು.

Advertisement

ಸಿಎಂ ಕಸರತ್ತು ;

ಶಾಸಕ ಮುನಿರತ್ನ ಬದಲು ಮಹದೇವಪುರ ಶಾಸಕ ಅರವಿಂದ ಲಿಂಬಾವಳಿ ಅವರನ್ನು ಸಂಪುಟಕ್ಕೆ ಸೇರಿಸಿ ಕೊಳ್ಳಲು ವರಿಷ್ಠರು ಸೂಚನೆ ನೀಡಿದ್ದಾರೆ. ಆದರೆ ಸಿಎಂ ಬಿಎಸ್‌ವೈ ತಾನು ಈಗಾಗಲೇ ಮುನಿರತ್ನ ಅವರಿಗೆ ಭರವಸೆ ನೀಡಿರುವುದನ್ನು ವರಿಷ್ಠರಿಗೆ ಮನವರಿಕೆ ಮಾಡುವ ಪ್ರಯತ್ನ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಮುನಿರತ್ನ ಬದಲು ಎಚ್‌. ನಾಗೇಶರನ್ನು ಕೈ ಬಿಟ್ಟು ಅರವಿಂದ ಲಿಂಬಾವಳಿಯವರನ್ನು ಸೇರಿಸಿಕೊಳ್ಳು ವಂತೆ ವರಿಷ್ಠರು ಸೂಚಿಸಿದ್ದಾರೆ. ಸಿಎಂಗೆ ನಾಗೇಶರನ್ನು ಕೈ ಬಿಡುವುದಕ್ಕೂ ಮನಸ್ಸಿಲ್ಲದೆ ಪುನಾರಚನೆ ಸಂದರ್ಭದಲ್ಲಿ ಲಿಂಬಾವಳಿಯವರನ್ನು ಸೇರಿಸಿಕೊಳ್ಳಬಹುದು ಎಂದು ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸಿದ್ದಾರೆ. ಹೀಗಾಗಿ ಅಂತಿಮ ಪಟ್ಟಿ ವಿಳಂಬವಾಗಿದೆ ಎನ್ನಲಾಗುತ್ತಿದೆ.

ಶೆಟ್ಟರ್‌ ಹೆಸರು? :

ಕೈ ಬಿಡುವವರ ಪಟ್ಟಿಯಲ್ಲಿ ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ಹೆಸರೂ ಇದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.

ಯಾರ್ಯಾರಿಗೆ ಸಚಿವ ಸ್ಥಾನ? :

ಮುಂಚೂಣಿಯಲ್ಲಿ  :

ಸುಳ್ಯದ ಶಾಸಕ ಎಸ್‌. ಅಂಗಾರ, ಉಮೇಶ್‌ ಕತ್ತಿ, ಮುರುಗೇಶ್‌ ನಿರಾಣಿ, ಎಂ.ಟಿ.ಬಿ. ನಾಗರಾಜ್‌,

ಆರ್‌. ಶಂಕರ್‌.

ಸಾಧ್ಯತೆ ಇರುವವರು :

ಕಾರ್ಕಳ ಶಾಸಕ ಸುನಿಲ್‌ ಕುಮಾರ್‌, ಶಾಸಕ ಮುನಿರತ್ನ, ಅರವಿಂದ ಲಿಂಬಾವಳಿ, ಸಿ.ಪಿ. ಯೋಗೇಶ್ವರ್‌, ಬಿಎಸ್‌ಪಿ ಶಾಸಕ

ಎನ್‌. ಮಹೇಶ್‌.

ಸಿಎಂ ಹೇಳಿಕೆಗಳು :

 

  • ನಾಳೆ 4 ಗಂಟೆಗೆ ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ. ಸಂಪುಟ ವಿಸ್ತರಣೆಯೋ ಪುನಾರಚನೆಯೋ ನಾಳೆಯೇ ಗೊತ್ತಾಗಲಿದೆ. ನಾಳೆಯೇ ಅಧಿ ಕೃತ ಪಟ್ಟಿ ಬಿಡುಗಡೆ ಮಾಡುತ್ತೇನೆ. ಸಂಪುಟ ಸೇರು ವವರಿಗೆ ದೂರವಾಣಿ ಮೂಲಕ ತಿಳಿಸುತ್ತೇನೆ.
  • ನಾಳೆ50ಕ್ಕೆ ಏಳರಿಂದ ಎಂಟು ಜನ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ನಾಳೆ 3.30ಕ್ಕೆ ಸಂಭಾವ್ಯ ರಿಗೆ ರಾಜಭವನಕ್ಕೆ ಬರಲು ಸೂಚನೆ ಕೊಟ್ಟಿದ್ದೇನೆ. ಸಂಜೆ ಅಥವಾ ನಾಳೆ ಬೆಳಗ್ಗೆ ಪಟ್ಟಿ  ಬಿಡುಗಡೆ ಮಾಡುತ್ತೇನೆ.
  • ರಾತ್ರಿಯೊಳಗೆ ಸಂಪುಟ ಸೇರುವವರ ಪಟ್ಟಿ ಬಿಡುಗಡೆ ಮಾಡುತ್ತೇನೆ. ಈಗಾಗಲೇ ಖಚಿತ ಆಗಿರುವವರಿಗೆ ಮಾಹಿತಿ ನೀಡಿದ್ದೇನೆ. ಇನ್ನು ಕೆಲವರದು ಖಚಿತ ಆಗಬೇಕು. ಒಬ್ಬರನ್ನು ಕೈ ಬಿಡಬೇಕು. ಅವರು ಯಾರು ಅಂತ ಸಂಜೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ.
Advertisement

Udayavani is now on Telegram. Click here to join our channel and stay updated with the latest news.

Next