Advertisement

ಕವಿಗನ್ನಡಂ ಗೆಲ್ಗೆ…ಸಾಹಿತ್ಯ ಸಮ್ಮೇಳನಕ್ಕೆ 20 ಕೋಟಿ ರೂ. ಘೋಷಣೆ

12:51 AM Mar 05, 2022 | Team Udayavani |

ನಾಡೋಜ ಚನ್ನವೀರ ಕಣವಿ ಅವರ ಕವಿತೆ ವಾಚಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್‌ನಲ್ಲಿ ನಾಡಿನ ಸಾಂಸ್ಕೃತಿಕ ಲೋಕಕ್ಕೆ ಬಂಪರ್‌ ಕೊಡುಗೆ ನೀಡಿದ್ದಾರೆ. ಸಿಎಂ ತವರು ಜಿಲ್ಲೆ ಹಾವೇರಿಯಲ್ಲಿ ನಡೆಯಲಿರುವ 86ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 20 ಕೋಟಿ ರೂ. ಅನುದಾನ ಘೋಷಿಸಿದ್ದಾರೆ.

Advertisement

ಕರ್ನಾಟಕ ಕಲಾಗ್ರಾಮವನ್ನು ಪೂರ್ಣ ಪ್ರಮಾಣದಲ್ಲಿ ಸಾಂಸ್ಕೃತಿಕವಾಗಿ ಸಜ್ಜುಗೊಳಿಸಿ ನಿರಂತರವಾಗಿ ಸಾಂಸ್ಕೃತಿಕ ಚಟುವಟಿಕೆ ನಡೆಸಲು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗುವುದು. ಯಕ್ಷಗಾನ ಕಲೆಯ ಸಮಗ್ರ ಆಯಾಮಗಳ ಕುರಿತು ರಾಜ್ಯಮಟ್ಟದ ಯಕ್ಷಗಾನ ಸಮ್ಮೇಳನ ಆಯೋಜಿಸಲಾಗುವುದು. ಕೈವಾರ ತಾತಯ್ಯ ಜಯಂತಿ ಯನ್ನು ರಾಜ್ಯ ಸರಕಾರದ ವತಿಯಿಂದ ಪ್ರತಿ ವರ್ಷ ಮಾ.27ರಂದು ಆಚರಿಸಲಾಗುವುದು.

ನಶಿಸುತ್ತಿರುವ ತಳ ಸಮುದಾಯದಲ್ಲಿರುವ ವಿಶಿಷ್ಟ ಕಲೆಗಳನ್ನು ಉಳಿಸಿ ಮುನ್ನಲೆಗೆ ತರಲು ರಾಜ್ಯದ ಪ್ರತಿ ವಿಭಾಗ ಮಟ್ಟದಲ್ಲಿ ಒಂದರಂತೆ ಒಟ್ಟು 4 ಸಾಂಸ್ಕೃತಿಕ ಶಿಬಿರ ಕಾರ್ಯಕ್ರಮ ಆಯೋಜಿಸಲಾಗುವುದು.

ಸಾಹಿತಿಗಳ ಹೆಸರಿನಲ್ಲಿ ವಿಶೇಷ ಯೋಜನೆ: ಇತ್ತೀಚೆಗೆ ನಿಧನರಾದ ಕವಿ ಡಾ| ಸಿದ್ಧಲಿಂಗಯ್ಯ ಹಿರಿಯ ಸಂಶೋಧಕ ಡಾ| ಎಂ.ಚಿದಾನಂದಮೂರ್ತಿ, ಡಾ| ಚಂದ್ರಶೇಖರ ಪಾಟೀಲ್‌, ಚನ್ನವೀರ ಕಣವಿ ಅವರ ಅಮೂಲ್ಯ ಸಾಹಿತ್ಯ­ಗಳನ್ನು ಉಳಿಸಲು ವಿಶೇಷ ಯೋಜನೆ ರೂಪಿಸಲಾಗುವುದು. ಜತೆಗೆ ಡಾ| ಮಹಾ­ದೇವ ಬಣಕಾರರ ಸಾಂಸ್ಕೃತಿಕ ಭವನವನ್ನು ಹಾವೇರಿ ಜಿಲ್ಲೆಯಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು. ಮಂಗಳೂರು ವಿಶ್ವವಿದ್ಯಾ­ಲಯದಲ್ಲಿ ಅರೆಭಾಷೆ ಸಂಶೋಧನಾ ಕೇಂದ್ರ ಸ್ಥಾಪಿಸಲಾಗುವುದು.

ನೆರೆ ರಾಜ್ಯಗಳಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿ ಅಭಿವೃದ್ಧಿಪಡಿಸಲು, ಕಾಸರಗೋಡಿನಲ್ಲಿ ಕಯ್ನಾರ ಕಿಂಞಣ್ಣ ರೈ ಹೆಸರಿನಲ್ಲಿ, ಅಕ್ಕಲಕೋಟೆಯಲ್ಲಿ ಜಯದೇವಿತಾಯಿ ಲಿಗಾಡೆ ಹೆಸರಿನಲ್ಲಿ ಮತ್ತು ಗೋವಾದಲ್ಲಿ ಕ®°‌ಡ ಭವನ ನಿರ್ಮಿಸಲಾಗುವುದು. ಗಡಿ ಭಾಗಗಳಲ್ಲಿ ಸಂಪರ್ಕ ರಸ್ತೆಗಳು, ಕುಡಿಯುವ ನೀರಿನ ವ್ಯವಸ್ಥೆ, ಬೀದಿ ದೀಪಗಳು ಮುಂತಾದ ಮೂಲಭೂತ ಸೌಕರ್ಯಗಳನ್ನು ಗ್ರಾಮ ಪಂಚಾಯಿತಿಗಳ ಮೂಲಕ ಒದಗಿಸಿ ಅಭಿವೃದ್ಧಿಪಡಿಸಲಾಗುವುದು.

Advertisement

ಸ್ಮಾರಕ ಸಂರಕ್ಷಿಸಲು
ಸ್ಮಾರಕ ದತ್ತು ಯೋಜನೆ
ರಾಜ್ಯದ ಸ್ಮಾರಕ ಸಂರಕ್ಷಣೆ ಹಾಗೂ ಅಭಿವೃದ್ಧಿಗಾಗಿ(ಸ್ಮಾರಕ ದತ್ತು ಯೋಜನೆ) ಮೂಲಕ ದತ್ತು ಪಡೆಯಲು ಅವಕಾಶ ಕಲ್ಪಿಸಲಾಗುವುದು ಎಂದು ಆಯವ್ಯಯದಲ್ಲಿ ಪ್ರಸ್ತಾಪಿಸಲಾಗಿದೆ. ಪಾರಂಪರಿಕ ಪ್ರವಾಸಿ ತಾಣಗಳಾದ ಬೀದರ್‌ ಹಾಗೂ ಕಲಬುರಗಿ ಕೋಟೆಗಳಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಸಹಯೋಗದೊಂದಿಗೆ ಪುನರುಜ್ಜೀವನಗೊಳಿಸಲು ಉದ್ದೇಶಿಸಲಾಗಿದೆ.

ಸ್ವ ಉದ್ಯೋಗಕ್ಕೆ ಗ್ರಾ.ಪಂ.ಗೆ ಒಂದು ಸ್ವಹಾಯ ಗುಂಪು
ರಾಜ್ಯ ಪ್ರತಿ ಗ್ರಾಮ ಪಂಚಾಯಿತಿಗೆ ಒಂದರಂತೆ ಸ್ವಾಮಿ ವಿವೇಕಾನಂದ ಯುವಕರ ಸ್ವಸಹಾಯ ಗುಂಪುಗಳನ್ನು ರಚಿಸಿ, ಸ್ವ-ಉದ್ಯೋಗ ಹಾಗೂ ಆರ್ಥಿಕ ಚಟುವಟಿಕೆ ಕೈಗೊಳ್ಳಲು ಯುವಕರನ್ನು ಪೋ›ತ್ಸಾಹಿಸಲಾಗುವುದು
ಎಂದುಸಿಎ ಂ ಬಸವರಾಜ ಬೊಮ್ಮಾಯಿ ಪ್ರಕಟಿಸಿದ್ದಾರೆ.

ಬಜೆಟ್‌ನಲ್ಲಿ ಕನ್ನಡ ಭಾಷೆ, ಕಲೆ, ಸಾಹಿತ್ಯ, ಸಂಸ್ಕೃತಿ ಕ್ಷೇತ್ರವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಿ ಅನುದಾನ ಘೋಷಿಸುವ ಮೂಲಕ ಸಿಎಂ ಕನ್ನಡದ ಮೇಲಿನ ತಮ್ಮ ಅಪಾರ ಕಾಳಜಿಯನ್ನು ತೋರ್ಪಡಿಸಿದ್ದಾರೆ. ಜತೆಗೆ ಹಾವೇರಿಯಲ್ಲಿ ನಡೆಯಲಿರುವ 86ನೇ ಅಖೀಲಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 20 ಕೋಟಿ ರೂ.ನೀಡಿರುವುದಕ್ಕೆ ಸಿಎಂಗೆ ಧನ್ಯವಾದ ಹೇಳುತ್ತೇನೆ.
-ಡಾ. ಮಹೇಶ ಜೋಶಿ, ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ

ಸಾಂಸ್ಕೃತಿಕ ವಿಕಾಸದ ಜತೆಗೆ ನೈತಿಕ ಉನ್ನತಿಯನ್ನು ಬಯಸುವ ರೀತಿಯಲ್ಲಿ ಈ ಬಜೆಟ್‌ ಇದೆ. ವಿವೇಕಾನಂದ ಹೆಸರಿನಲ್ಲಿ ಸ್ವ ಸಹಾಯ ಗುಂಪು ರಚನೆಯತ್ತ ಸರ್ಕಾರ ಹೆಜ್ಜೆಯಿರಿಸಿದೆ. ಜತೆಗೆ ನಾಡಿನ ಗಡಿಪ್ರದೇಶಗಳ ಅಭಿವೃದ್ಧಿಗೆ ಆದ್ಯತೆ ನೀಡಿದೆ. ಒಟ್ಟಾರೆ ಈ ಬಜೆಟ್‌ ಸರ್ವ ಸ್ವರ್ಶಿ, ಸರ್ವ ವ್ಯಾಪಿ ಮತ್ತು ಸರ್ವತ್ಕೃಷ್ಟ ಎನ್ನುವ ರೀತಿಯಲ್ಲಿ ಕಾಣುತ್ತಿದೆ.
-ಡಾ.ಬಿ.ವಿ.ವಸಂತಕುಮಾರ್‌, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ

ಮುಖ್ಯಾಂಶಗಳು
1. ಯಕ್ಷಗಾನ ಕಲೆಯ ಸಮಗ್ರ ಆಯಾಮ ಗಳ ಕುರಿತು ರಾಜ್ಯಮಟ್ಟದ ಯಕ್ಷಗಾನ ಸಮ್ಮೇಳನ ಆಯೋಜಿಸಲಾಗುವುದು
2.ಕೈವಾರ ತಾತಯ್ಯ ಜಯಂತಿಯನ್ನು ರಾಜ್ಯ ಸರ್ಕಾರದ ವತಿಯಿಂದ ಪ್ರತಿ ವರ್ಷ ಮಾ.27ರಂದು ಆಚರಿಸಲಾಗುವುದು
3. ಕವಿಸಿದ್ದಲಿಂಗಯ್ಯ, ಡಾ.ಎಂ.ಚಿದಾನಂದ ಮೂರ್ತಿ, ಡಾ.ಚಂದ್ರಶೇಖರ ಪಾಟೀಲ್‌, ಚನ್ನವೀರ ಕಣವಿ ಅವರ ಅಮೂಲ್ಯ ಸಾಹಿತ್ಯ ಉಳಿಸಲು ವಿಶೇಷ ಯೋಜನೆ
4.ಮಂಗಳೂರು ವಿವಿಯಲ್ಲಿ ಅರೆಭಾಷೆ ಸಂಶೋಧನಾ ಕೇಂದ್ರ ಸ್ಥಾಪಿನೆ

Advertisement

Udayavani is now on Telegram. Click here to join our channel and stay updated with the latest news.

Next