Advertisement

ಸಮತೋಲನದ ಸರ್ಕಸ್‌, ಸಂಪತ್ತು ಕ್ರೋಡೀಕರಣಕ್ಕೆ ಇಂಧನ, ಮದ್ಯದ ಮೇಲೆ ತೆರಿಗೆ ಹೊರೆ 

09:54 AM Mar 07, 2020 | sudhir |

ಬೆಂಗಳೂರು: ಪ್ರಕೃತಿ ಮುನಿಸು ಮತ್ತು ಕೇಂದ್ರ ಅನುದಾನದ ಕೊರತೆ ನಡುವೆ ಆರ್ಥಿಕ ಸಂಕಷ್ಟವನ್ನು ಬಿಚ್ಚಿಟ್ಟು, ಹಳೆಯ ಯೋಜನೆಗಳನ್ನು ಮುಂದುವರಿಸಿ, ಕೆಲವಾರು ಹೊಸ ಘೋಷಣೆಗಳೊಂದಿಗೆ 2020-21ರ ರಾಜ್ಯ ಬಜೆಟ್‌ ಅನ್ನು ವಿತ್ತ ಸಚಿವರೂ ಆಗಿರುವ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮಂಡಿಸಿದ್ದಾರೆ. ಸಿಎಂಗೆ ಇದು ಏಳನೇ ಬಜೆಟ್‌ ಆಗಿದ್ದು, ಆರ್ಥಿಕ ಹಿನ್ನಡೆಯ ಕಾಲಘಟ್ಟದಲ್ಲಿ “ಆರ್ಥಿಕ ಹೊಂದಾಣಿಕೆ’ಯ ಮತ್ತು “ಕಟ್ಟುನಿಟ್ಟಿನ ವೆಚ್ಚ’ದ ಸಮತೋಲಿತ ಬಜೆಟ್‌ ಮಂಡಿಸಿದ್ದಾರೆ.

Advertisement

ಆರ್ಥಿಕ ಕೊರತೆಯನ್ನು ಸರಿದೂಗಿಸಿಕೊಳ್ಳಲು ಸಿಎಂ “ತೆರಿಗೆ ಹೊರೆ’ ಮಾರ್ಗ ಹಿಡಿದಿದ್ದಾರೆ. ಆದರೆ ಇದಕ್ಕೆ ಅವರು ಆರಿಸಿಕೊಂಡದ್ದು ಪೆಟ್ರೋಲ್‌ ಮತ್ತು ಡೀಸೆಲ್‌ ಹಾಗೂ ಅಬಕಾರಿ ಇಲಾಖೆ. ಹೀಗಾಗಿ ರಾಜ್ಯದಲ್ಲಿ ಪೆಟ್ರೋಲ್‌, ಡೀಸೆಲ್‌ ಹಾಗೂ ಮದ್ಯ ಎ. 1ರಿಂದ ದುಬಾರಿ ಆಗಲಿವೆ.

ವಲಯವಾರು ಬಜೆಟ್‌
ವಲಯವಾರು ಬಜೆಟ್‌ ಈ ಬಾರಿಯ ವಿಶೇಷ . ಸಾಮಾನ್ಯವಾಗಿ ಹಿಂದಿನ ವರ್ಷಗಳಲ್ಲಿ ಇಲಾಖೆಗಳ ಲೆಕ್ಕಾಚಾರದಲ್ಲಿ ಮುಂಗಡ ಪತ್ರ ಮಂಡನೆಯಾಗುತ್ತಿತ್ತು. ಆದರೆ ಈ ಬಾರಿ ಬಿಎಸ್‌ವೈ ವಲಯವಾರು ಹಾದಿ ಹಿಡಿದಿದ್ದಾರೆ. ಇದೇ ಮೊದಲ ಬಾರಿಗೆ ಮಕ್ಕಳಿಗಾಗಿ ಬಜೆಟ್‌ ಮಂಡಿಸಿದ್ದಾರೆ. ಮಕ್ಕಳಿಗಾಗಿ 279 ಕಾರ್ಯ ಕ್ರಮಗಳನ್ನು ಘೋಷಿಸಿದ್ದು, 36,340 ಕೋ.ರೂ. ಮೀಸಲಿರಿಸಿದ್ದಾರೆ.

ಮಹಾದಾಯಿಗೆ ಬಂಪರ್‌
ಕಳಸಾ ಬಂಡೂರಿ ಯೋಜನೆ ಅನುಷ್ಠಾನಕ್ಕೆ 500 ಕೋ.ರೂ., ಎತ್ತಿನಹೊಳೆಗೆ 1,500 ಕೋ.ರೂ. ಸೇರಿ ಕೃಷಿ ಪೂರಕ ಚಟುವಟಿಕೆಗಳಿಗೆ 32,259 ಕೋ.ರೂ.,
ಎಸ್‌ಸಿಪಿ-ಟಿಎಸ್‌ಪಿಯಡಿ ಎಸ್‌ಸಿ-ಎಸ್‌ಟಿ ಸಮು ದಾಯದ ಅಭಿವೃದ್ಧಿಗೆ 26,930 ಕೋ.ರೂ., ಬೆಂಗಳೂರು ಅಭಿವೃದ್ಧಿಗೆ 10 ಸಾವಿರ ಕೋ.ರೂ. ಬಜೆಟ್‌ನಲ್ಲಿ ಮೀಸಲಿರಿಸಿದ್ದಾರೆ. ಕರಾ ವಳಿ ಭಾಗಕ್ಕೂ ಹಲವು ಕೊಡುಗೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next