Advertisement

ಕ್ರೀಡಾ ಪ್ರಶಸ್ತಿ ಪ್ರಕಟ: ಕರುಣ್, ಅಶ್ವಲ್ ರೈಗೆ ಏಕಲವ್ಯ; ಗೋಪಾಲ ನಾಯ್ಕರಿಗೆ ಕ್ರೀಡಾರತ್ನ

02:41 PM Apr 04, 2022 | Team Udayavani |

ಬೆಂಗಳೂರು: ಕರ್ನಾಟಕ ಸರ್ಕಾರದ ಕ್ರೀಡಾ ಇಲಾಖೆ ವತಿಯಿಂದ ನೀಡುವ 2020-21 ನೇ ಸಾಲಿನ ಏಕಲವ್ಯ ಪ್ರಶಸ್ತಿ, ಜೀವಮಾನ ಸಾಧನೆ, ಕ್ರೀಡಾರತ್ನ ಹಾಗೂ ಕ್ರೀಡಾ ಪೋಷಕ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ಘೋಷಿಸಿದ್ದಾರೆ.

Advertisement

ಇಂದು ವಿಕಾಸಸೌಧದಲ್ಲಿ ಸುದ್ದಿಗೋಷ್ಟಿ ನಡೆಸಿದ ಸಚಿವರು, ಕ್ರೀಡಾ ಕ್ಷೇತ್ರದಲ್ಲಿ ವಿವಿಧ ಸಾಧನೆ ಮಾಡಿದ ಕ್ರೀಡಾಪಟುಗಳು ಹಾಗೂ ತರಬೇತುದಾರರಿಗೆ ಕೊಡಲ್ಪಡುವ ಕ್ರೀಡಾಪಶಸ್ತಿ ಪುರಸ್ಕೃತರ ಪಟ್ಟಿಯನ್ನು ಬಿಡುಗಡೆಗೊಳಿಸಿದರು.

ಏಕಲವ್ಯ ಪ್ರಶಸ್ತಿಗೆ 15, ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿಗೆ 14, ಕರ್ನಾಟಕ ಕ್ರೀಡಾಪೋಷಕ ಪ್ರಶಸ್ತಿಗೆ 10 ಹಾಗೂ ಜೀವಮಾನ ಸಾಧನೆ ಪ್ರಶಸ್ತಿಗೆ ಇಬ್ಬರನ್ನು ಆಯ್ಕೆ ಮಾಡಲಾಗಿದೆ. 2020-21 ನೇ ಸಾಲಿನಲ್ಲಿ ಏಕಲವ್ಯ ಪ್ರಶಸ್ತಿಗೆ 151, ಕರ್ನಾಟಕ ಕ್ರೀಡಾರತ್ನ 53, ಕ್ರೀಡಾ ಪೋಷಕ 25 ಹಾಗೂ ಜೀವಮಾನ ಸಾಧನೆ ಪ್ರಶಸ್ತಿಗೆ 28 ಅರ್ಜಿಗಳು ಸ್ವೀಕೃತವಾಗಿದ್ದವು. ಇದರಲ್ಲಿ ಪ್ರಶಸ್ತಿ ಆಯ್ಕೆಗೆ ನೇಮಿಸಲಾಗಿದ್ದ ತಜ್ಞರ ಸಮಿತಿ ಪರಿಶೀಲನೆ ನಡೆಸಿ ಅರ್ಹರನ್ನು ಆಯ್ಕೆ ಮಾಡಿದೆ. ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ, ದಿನಾಂಕವನ್ನು ನಿಗದಿಮಾಡಿ ಶೀಘ್ರದಲ್ಲೇ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಚಿವ ಡಾ.ನಾರಾಯಣಗೌಡ ಅವರು ಹೇಳಿದರು.

ಏಕಲವ್ಯ ಪ್ರಶಸ್ತಿ ಪುರಸ್ಕೃತರು

ಜೀವನ್ ಕೆ.ಎಸ್- ಅಥ್ಲೆಟಿಕ್ಸ್

Advertisement

ನಿತಿನ್- ನೆಟ್ ಬಾಲ್

ಅಶ್ವಿನಿ ಭಟ್- ಬ್ಯಾಡ್ಮಿಂಟನ್

ಜಿ. ತರಣ್ ಕಷ್ಣಪ್ರಸಾದ್- ರೋಯಿಂಗ್

ಲೋಪಮುದ್ರಾ ತಿಮ್ಮಯ್ಯ- ಬ್ಯಾಸ್ಕೆಟ್ ಬಾಲ್

ಲಿಖಿತ್ಎಸ್.ಪಿ- ಈಜು

ಕರಣ್ ನಾಯರ್-ಕ್ರಿಕೆಟ್

ಅನರ್ಘ್ಯ ಮಂಜುನಾಥ್- ಟೇಬಲ್ ಟೆನ್ನಿಸ್

ದಾನಮ್ಮ ಚಿಚಖಂಡಿ- ಸೈಕ್ಲಿಂಗ್

ಅಶ್ವಲ್ ರೈ- ವಾಲಿಬಾಲ್

ವಸುಂಧರಾಎಂ.ಎನ್.- ಜುಡೋ

ಪ್ರಧಾನ್ ಸೋಮಣ್ಣ- ಹಾಕಿ

ಪ್ರಶಾಂತ್ ಕುಮಾರ್ ರೈ- ಕಬಡ್ಡಿ

ರಾಧಾ .ವಿ- ಪ್ಯಾರಾ ಅಥ್ಲೆಟಿಕ್ಸ್

ಮುನೀರ್ ಬಾಷಾ- ಖೋ-ಖೋ

ಇದನ್ನೂ ಓದಿ:ಗ್ರ್ಯಾಮಿ ಪ್ರಶಸ್ತಿ ಪಡೆದ ಭಾರತೀಯ ಮೂಲದ ಗಾಯಕಿ ಫಲ್ಗುಣಿ ಶಾ

ಜೀವಮಾನ ಸಾಧನಾ ಪ್ರಶಸ್ತಿ ಪುರಸ್ಕೃತರು

ಗಾವಂಕರ್ ಜಿ.ವಿ.- ಅಥ್ಲೆಟಿಕ್ಸ್

ಕ್ಯಾಪ್ಟನ್ ದಿಲೀಪ್ ಕುಮಾರ್- ಕಯಾಕಿಂಗ್ ಮತ್ತು ಕನೋಯಿಂಗ್

ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ಪುರಸ್ಕೃತರು

ಪೂಜಾ ಗಾಲಿ- ಆಟ್ಯಾ-ಪಾಟ್ಯಾ

ಬಿ.ಎನ್. ಕಿರಣ್ ಕುಮಾರ್- ಬಾಲ್ ಬ್ಯಾಡ್ಮಿಂಟನ್

ಗೋಪಾಲ ನಾಯ್ಕ್- ಕಂಬಳ

ದೀಕ್ಷಾ ಕೆ- ಖೋ-ಖೋ

ಶಿವಯೋಗಿ ಬಸಪ್ಪ ಬಾಗೇವಾಡಿ- ಗುಂಡುಕಲ್ಲು ಎತ್ತುವುದು

ಲಕ್ಷ್ಮೀ ಬಿರೆಡೆಕರ್- ಕುಸ್ತಿ

ಪಿ. ಗೋಪಾಲಕೃಷ್ಣ- ಯೋಗ

ರಾಘವೇಂದ್ರ ಎಸ್. ಹೊಂಡದಕೇರಿ- ಪವರ್ಲಿಫ್ಟಿಂಗ್

ಸಿದ್ದಪ್ಪ ಪಾಂಡಪ್ಪ ಹೊಸಮನಿ- ಸಂಗ್ರಾಣಿ ಕಲ್ಲು ಎತ್ತುವುದು

ಸೂರಜ್ ಎಸ್ ಅಣ್ಣಿಕೇರಿ- ಕುಸ್ತಿ

ಶಶಾಂಕ್ .ಬಿ.ಎಂ- ಪ್ಯಾರಾ ಈಜು

ಡಿ.ನಾಗಾರಾಜು- ಯೋಗ

ಶ್ರೀವರ್ಷಿಣಿ- ಜಿಮ್ನಾಸ್ಟಿಕ್

ಅವಿನಾಶ್ ವಿ ನಾಯ್ಕ- ಜುಡೋ

ಕ್ರೀಡಾ ಪೋಷಕ ಪ್ರಶಸ್ತಿ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಷನಲ್ ಟ್ರಸ್ಟ್,  ಉಜಿರೆ- ದಕ್ಷಿಣಕನ್ನಡ

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವ ವಿದ್ಯಾಲಯ, ಬೆಂಗಳೂರು ನಗರ ಜಿಲ್ಲೆ

ಆರ್. ವಿ. ತಾಂತ್ರಿಕ ಮಹಾವಿದ್ಯಾಲಯ, ಬೆಂಗಳೂರು ನಗರ ಜಿಲ್ಲೆ

ಹೂಡಿ ಸ್ಪೋರ್ಟ್ಸ್ ಕ್ಲಬ್, ಬೆಂಗಳೂರು ನಗರ ಜಿಲ್ಲೆ

ಶ್ರೀ ಬಾಲಮಾರುತಿ ಸಂಸ್ಥೆ, ಧಾರವಾಡ

ಎಮಿನೆಂಟ್ ಶೂಟಿಂಗ್ ಹಬ್, ಬೆಂಗಳೂರು ನಗರ ಜಿಲ್ಲೆ

ಬಾಲಾಂಜನೇಯ ಜಿಮ್ನಾಸಿಯಂ (ರಿ.), ಮಂಗಳೂರು

ಬಸವನಗುಡಿ ಅಕ್ವಾಟಿಕ್ ಸೆಂಟರ್, ಬೆಂಗಳೂರು ನಗರ ಜಿಲ್ಲೆ

ದ್ರಾವಿಡ್ ಪಡುಕೋಣೆ ಅಕಾಡೆಮಿ, ಬೆಂಗಳೂರು ನಗರ ಜಿಲ್ಲೆ

ಪಿಪಲ್ ಎಜುಕೇಷನ್ ಟ್ರಸ್ಟ್, ಮಂಡ್ಯ

Advertisement

Udayavani is now on Telegram. Click here to join our channel and stay updated with the latest news.

Next