Advertisement

ಕೆಎಸ್‌ಎ: ಕ್ರೀಡಾ ಸಚಿವ ವಿನೋದ್‌ ತಾಬ್ಡೆ ಅವರಿಗೆ ಗೌರವಾರ್ಪಣೆ

04:22 PM Sep 19, 2017 | Team Udayavani |

ಮುಂಬಯಿ: ಮಹಾರಾಷ್ಟ್ರ ಮಿಷನ್‌ 1 ಮಿಲಿಯನ್‌ ಅಭಿಯಾನಕ್ಕೆ ಸೆ. 15ರಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರು ಚಾಲನೆ ನೀಡಿದ್ದು, ಇದೇ ಸಂದರ್ಭದಲ್ಲಿ ಕ್ರೀಡಾ ಸಚಿವ ವಿನೋದ್‌ ತಾಬ್ಡೆ  ಅವರು ಚರ್ಚ್‌ಗೇಟ್‌ ಪರಿಸರದ ಕರ್ನಾಟಕ ಸ್ಫೋರ್ಟಿಂಗ್‌ ಅಸೋಸಿಯೇಶನ್‌ಗೆ ಭೇಟಿ ನೀಡಿ ಸಂಸ್ಥೆಯ ಸಿದ್ದಿ-ಸಾಧನೆಗಳನ್ನು ಕಂಡು ಹರ್ಷ ವ್ಯಕ್ತಪಡಿಸಿದರು.

Advertisement

ಕರ್ನಾಟಕ ನ್ಪೋರ್ಟಿಂಗ್‌ ಕಳೆದ ಹಲವಾರು ವರ್ಷಗಳಿಂದ ಫುಟ್ಬಾಲ್‌ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ವಿಶೇಷ ಸಾಧನೆಗಳನ್ನು ಸಚಿವ ವಿನೋದ್‌ ತಾಬ್ಡೆ ಅವರು ಮುಕ್ತ ಕಂಠದಿಂದ ಶ್ಲಾಘಿಸಿದರು. ಇದೇ ಸಂದರ್ಭದಲ್ಲಿ ಕರ್ನಾಟಕ ನ್ಪೋರ್ಟಿಂಗ್‌ ಅಸೋಸಿಯೇಶನ್‌ನ ಗೌರವ ಪ್ರಧಾನ ಜತೆ ಕಾರ್ಯದರ್ಶಿ ಜಯ ಎ. ಶೆಟ್ಟಿ, ಎಂ. ಪಿ. ಶೆಟ್ಟಿ ಅವರು ತಾಬ್ಡೆ ಅವರನ್ನು ಪುಷ್ಪಗುತ್ಛವನ್ನಿತ್ತು ಗೌರವಿಸಿ ಅಭಿನಂದಿಸಿ  ಮಹಾರಾಷ್ಟ್ರ ಮಿಷನ್‌ 1 ಮಿಲಿಯನ್‌ ಅಭಿಯಾನಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕ್ರೀಡಾ ವಿಭಾಗದ ಕಾರ್ಯದರ್ಶಿ ಪವಾರ್‌, ನಿರ್ದೇಶಕ ಎನ್‌. ಬಿ. ಮೋತೆ ಅವರು ಉಪಸ್ಥಿತರಿದ್ದರು.

ಫಿಫಾ ಅಂಡರ್‌-17 ವಿಶ್ವಕಪ್‌ ದೇಶದಲ್ಲಿ ಹಾಗೂ ಮುಖ್ಯವಾಗಿ ಮಹಾರಾಷ್ಟ್ರದಲ್ಲಿ ಮೊದಲ ಬಾರಿಗೆ ಆಯೋಜಿಸಲಾಗಿದ್ದು, ಇದರ ಬೆಂಬಲಕ್ಕಾಗಿ ತಾಬ್ಡೆ ಅವರು ಮಹಾಮಿಶನ್‌ 1 ಮಿಲಿಯನ್‌ ಅಭಿಯಾನವನ್ನು ಆರಂಭಿಸಲು ನಿರ್ಧರಿಸಿದ್ದು, ಇದರಡಿಯಲ್ಲಿ 10 ಲಕ್ಷ ವಿದ್ಯಾರ್ಥಿಗಳು ಫುಟ್ಬಾಲ್‌ ಆಡಲಿದ್ದಾರೆ. ಫಿಫಾ ಅಂಡರ್‌-17 ವಿಶ್ವಕಪ್‌ ಮುಂದಿನ ತಿಂಗಳಿನಿಂದ ಆರಂಭಗೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next