Advertisement
ಕೋವಿಡ್ ಮಹಾಮಾರಿಯಿಂದ ಪ್ರಸ್ತುತ ವರ್ಷದ ವಾರ್ಷಿಕ ಮಹಾ ಸಭೆಯು ವಿಳಂಬವಾಗಿ ನಡೆಯಿತು. ಗತ ವಾರ್ಷಿಕ ಮಹಾಸಭೆಯ ವರದಿ ಮತ್ತುಲೆಕ್ಕಪತ್ರಗಳನ್ನು ಸಂಸ್ಥೆಯ ಪದಾಧಿಕಾರಿಗಳು ವಾಚಿಸಿ, ಮಂಜೂರು ಮಾಡಲಾಯಿತು.ಇದೇ ಸಂದರ್ಭದಲ್ಲಿ ಕ್ರೀಡಾರಂಗದಲ್ಲಿ ವಿಶೇಷ ಸಾಧನೆಗೈದವರನ್ನು ಕರ್ನಾಟಕನ್ಪೋರ್ಟಿಂಗ್ ಅಸೋಸಿಯೇಶನ್‌ನ ಜೀವ ಮಾನ ಸದಸ್ಯರನ್ನಾಗಿ ಸೇರ್ಪಡೆಗೊಳಿಸುವ ಪ್ರಸ್ತಾವಕ್ಕೆ ಸರ್ವಾನುಮತದಿಂದ ಮಾನ್ಯತೆನೀಡಲಾಯಿತು.
Related Articles
Advertisement
ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಸಹಕರಿಸಿ ಇತ್ತೀಚೆಗೆ ರಾಜ್ಯಪಾಲರಿಂದ ಕೋವಿಡ್ ಯೋಧ ಪುರಸ್ಕಾರ ಪಡೆದ ಸಂಸ್ಥೆಯ ಅಧ್ಯಕ್ಷ ಡಾ| ಪಿ. ವಿ. ಶೆಟ್ಟಿ, ಪೊಯಿಸಾರ್ ಜಿಮ್ಖಾನದ ಉಪಾಧ್ಯಕ್ಷ ಕರುಣಾಕರ್ ಶೆಟ್ಟಿ ಅವರನ್ನು ಕರ್ನಾಟಕ ನ್ಪೋರ್ಟಿಂಗ್ ಅಸೋಸಿಯೇಶನ್ ಉಪಾಧ್ಯಕ್ಷ ರವಿ ಅಂಚನ್, ಜತೆ ಕಾರ್ಯದರ್ಶಿಎಂ. ಪಿ. ಶೆಟ್ಟಿ ಅವರು ಅಭಿನಂದಿಸಿ, ಗೌರವಿಸಿದರು.
ಮುಂಬಯಿ ಕ್ರಿಕೆಟ್ ಅಸೋಸಿಯೇಶನ್ ಚುನಾವಣೆಯಲ್ಲಿ ಅತ್ಯಧಿಕ ಮತಗಳನ್ನುಪಡೆದು ವಿಜಯಿಯಾದ ಗೌರವ್ ಪಯ್ಯಡೆಅವರನ್ನು ಸಂಸ್ಥೆಯ ಕೋಶಾಧಿಕಾರಿ ಜಯಂತ್ ಕುಂದರ್ ಗೌರವಿಸಿದರು. ರಾಜ್ಯಮಟ್ಟದ ಫುಟ್ಬಾಲ್ ಪಂದ್ಯಾಟದಲ್ಲಿ ಉಪ ವಿಜೇತರಾದ ಕರ್ನಾಟಕ ಸ್ಪೋರ್ಟಿಂಗ್ ಅಸೋಸಿಯೇಶನ್ ತಂಡದ ಆಟಗಾರರು, ತರಬೇತುದಾರ ಶ್ಯಾಮ್ ಸಾವಂತ್, ವ್ಯವಸ್ಥಾಪಕ ಸಾಲ್ಪ್ಢೋರ್ ಡಿ’ಸೋಜಾ, ಸಹಾಯಕ ಗಣೇಶ್ ಅವರನ್ನು
ವಿಶೇಷವಾಗಿ ಸಮ್ಮಾನಿಸಲಾಯಿತು. ಕಾರ್ಯದರ್ಶಿ ಜಯ ಎ. ಶೆಟ್ಟಿ ಕಾರ್ಯ ಕ್ರಮ ನಿರ್ವಹಿಸಿ, ವಂದಿಸಿದರು. ಕರ್ನಾಟಕ ಸ್ಪೋರ್ಟಿಂಗ್ ಅಸೋಸಿಯೇಶನ್ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಮಹಾಸಭೆಯ ಯಶಸ್ಸಿಗೆ ಸಹಕರಿಸಿ ದರು. ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಟರ್ಫ್ ಕ್ರೀಡಾಂಗಣ ನಿರ್ಮಾಣಕ್ಕೆ ಮಾನ್ಯತೆ :
ಕೆಎಸ್‌ಎ ಸಂಸ್ಥೆಯ ಲೀಸ್ ನವೀಕರಣದ ಬಗ್ಗೆ ಮಹಾರಾಷ್ಟ್ರ ಸರಕಾರದಿಂದ ಸಕಾರಾತ್ಮಕ ಸೂಚನೆ ದೊರಕಿದ್ದು, ಈ ನಿಟ್ಟಿನಲ್ಲಿ ರಾಜಕೀಯ ಧುರೀಣರಾದ ಎನ್‌ಸಿಪಿ ನೇತಾರ ಶರದ್ ಪವಾರ್, ಕ್ರೀಡಾ ಸಚಿವ ಸುನೀಲ್ ಕೇದಾರ್, ಅದಿತಿ ತಟ್ಕರೆ, ಪರಿಸರ ಸಚಿವ ಮತ್ತು ಮುಂಬಯಿ ಡಿಸ್ಟ್ರಿಕ್ಟ್ ಫುಟ್ಬಾಲ್ ಅಸೋಸಿಯೇಶನ್ ಅಧ್ಯಕ್ಷ ಆದಿತ್ಯ ಠಾಕ್ರೆ ಹಾಗೂ ಸಂಸದ ಗೋಪಾಲ್ ಶೆಟ್ಟಿ ಅವರ ಸಹಾಯವನ್ನು ಸಭೆಯಲ್ಲಿ ಸ್ಮರಿಸಿ ಅವರಿಗೆ ಕೃತಜ್ಞತೆಸಲ್ಲಿಸಲಾಯಿತು. ಕ್ರೀಡಾಂಗಣದಲ್ಲಿ ವಿದ್ಯುದ್ದೀಕರಣ, ಟರ್ಫ್ ಕ್ರೀಡಾಂಗಣ ನಿರ್ಮಾಣಕ್ಕೆ ಸಭೆಯಲ್ಲಿ ಮಾನ್ಯತೆ ನೀಡಲಾಯಿತು.