ಬೆಂಗಳೂರು: ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಮಂಗಳವಾರ 2019ನೇ ಸಾಲಿನ ಗೌರವ ಪ್ರಶಸ್ತಿ ಹಾಗೂ ವಾರ್ಷಿಕ ಶಿಲ್ಪಕಲಾ ಪ್ರಶಸ್ತಿ ಪ್ರಕಟಿಸಿದೆ.
ಉತ್ತರ ಕನ್ನಡ ಜಿಲ್ಲೆಯ ಗಣೇಶ ಸೀತಾರಾಮ ಆಚಾರಿ (ಸಂಪ್ರದಾಯ ಶಿಲ್ಪ), ಮೈಸೂರಿನ ಎಸ್.ಎನ್.ಸೋಮಾಚಾರ್ (ಸಂಪ್ರದಾಯ ಶಿಲ್ಪ), ವಿಜಯರಾವ್ (ಸಮಕಾಲೀನ ಶಿಲ್ಪ) ಧಾರ ವಾಡದ ಚನ್ನವೀರಸ್ವಾಮಿ ಗ.ಹಿಡಿRಮಠ (ಸಂಪ್ರ ದಾಯ), ಹಾಗೂ ಬೆಂಗಳೂರಿನ ಎಸ್.ಜಿ.ನಾಗ ರಾಜ್ (ಕಾಷ್ಠ ಶಿಲ್ಪ) ಗೌರವ ಪ್ರಶಸ್ತಿಗೆ ಆಯ್ಕೆಯಾಗಿ ದ್ದಾರೆ. ಪ್ರಶಸ್ತಿ 50 ಸಾವಿರ ರೂ. ನಗದು, ನೆನಪಿನ ಕಾಣಿಕೆ ಹೊಂದಿದೆ.
ಶಿಲ್ಪಕಲಾ ಪ್ರದರ್ಶನ ಬಹುಮಾನ ವಿಜೇತರು: ಅಮಿತ್ ಎಂ.ನಾಯಕ (ಬೆಂಗಳೂರು)-ಕಲ್ಲು, ಲಕ್ಷ್ಮಣ್‌ರಾವ್ ಜಾಧವ್ (ಮೈಸೂರು)- ಟೆರ್ರಾ ಕೋಟಾ, ಮಧುಸೂಧನ.ಎಸ್(ಚಾಮ ರಾಜ ನಗರ ಜಿಲ್ಲೆ)- ಮಿಶ್ರಮಾಧ್ಯಮ, ಸುನಿಲ್ ಮಿಶ್ರಾ- ಕಂಚು, ಸಂತೋಷಕುಮಾರ್ ಚಿತ್ರಗಾರ (ಕೊಪ್ಪಳ) -ಮರ, ರಾಜೇಂದ್ರ ಪ್ರಸಾದ್ ಬಿ.ಎಸ್.(ಮೈಸೂರು)-ಬೆಳ್ಳಿ.
ರಾಮ್‌ಸನ್ಸ್ ಕಲಾ ಪ್ರತಿಷ್ಠಾನ ಮೈಸೂರು ಬಹುಮಾನಕ್ಕೆ ಆಯ್ಕೆಯಾದ ಶಿಲ್ಪಕೃತಿ: ಮಹಾದೇವಚಾರಿ (ಮೈಸೂರು ಜಿಲ್ಲೆ)-ಕಲ್ಲು.ದಿ.ಗಂಗಾಧರ್ ಎಂ.ಬಡಿಗೇರ್ ಪ್ರಶಸ್ತಿಗೆ ಆಯ್ಕೆ ಯಾದ ಶಿಲ್ಪಕೃತಿ: ಭರತ್.ಎಸ್.(ಶಿವಮೊಗ್ಗ)- ಮರ.
ಅಜ್ಜಿಹಳ್ಳಿ ಶಿಲ್ಪ ಶಾಸ್ತ್ರಿ ನಾಗೇಂದ್ರಾಚಾರ್ಯ ಸ್ಮಾರಕ ಬಹುಮಾನಕ್ಕೆ ಆಯ್ಕೆಯಾದ ಶಿಲ್ಪ: ಈರಣ್ಣ ಕೆ.ವಿಶ್ವಕರ್ಮ (ಕಲಬುರಗಿ)-ಕಲ್ಲು. ಈ ಪ್ರಶಸ್ತಿ ತಲಾ 1 ಸಾವಿರ ಮತ್ತು ನೆನಪಿನ ಕಾಣಿಕೆ ಹೊಂದಿದೆ. ಮಾ.9 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ರಿಜಿಸ್ಟ್ರಾರ್ ಆರ್.ಚಂದ್ರಶೇಖರ ತಿಳಿಸಿದ್ದಾರೆ.