Advertisement

PUC ಫಲಿತಾಂಶದಲ್ಲಿ ಟಾಪರ್ ಹೆಸರು ಘೋಷಣೆ ಇಲ್ಲ; ಯಾಕೆ ಗೊತ್ತಾ?

03:51 PM May 11, 2017 | Sharanya Alva |

ಬೆಂಗಳೂರು: 2016-17ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶವನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರು ಗುರುವಾರ ಪ್ರಕಟಿಸಿದ್ದಾರೆ. ಆದರೆ ಈ ಬಾರಿ ಟಾಪರ್ ವಿದ್ಯಾರ್ಥಿಗಳ ಹೆಸರು ಘೋಷಿಸಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

Advertisement

ಈ ಬಾರಿ ಟಾಪರ್ ಹೆಸರು ಪ್ರಕಟಿಸದಿರುವುದಕ್ಕೆ ಕಾರಣ ಏನೆಂದರೆ ಟಾಪರ್ ವಿದ್ಯಾರ್ಥಿಗಳ ಹೆಸರು ಬಳಸಿ ಖಾಸಗಿ ಕಾಲೇಜುಗಳು ದಂಧೆ ನಡೆಸುತ್ತವೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದರು. ರಾಜ್ಯದ 37 ಕಾಲೇಜುಗಳು ಶೇ.100ರಷ್ಟು ಫಲಿತಾಂಶ ಪಡೆದಿದ್ದು, 132 ಕಾಲೇಜುಗಳು ಶೂನ್ಯ ಫಲಿತಾಂಶ ಪಡೆದಿದೆ.

ವಿಜ್ಞಾನ ವಿಭಾಗದಲ್ಲಿ ವಿದ್ಯಾವರ್ಧಕ ಕಾಲೇಜಿನ ಸ್ವಾತಿ 579 ಅಂಕ ಗಳಿಸಿದ್ದಾಳೆ.

ವಿದ್ಯಾರ್ಥಿಗಳೇ ಧೈರ್ಯಗೆಡದಿರಿ:

ಪಿಯು ಫಲಿತಾಂಶ ಪ್ರಕಟಗೊಂಡಿದೆ, ಆದರೆ ಅನುತ್ತೀರ್ಣರಾದ ವಿದ್ಯಾರ್ಥಿಗಳು ಧೈರ್ಯಗೆಡಬಾರದು. ಹಾಗಾಗಿ ದುಡುಕಿನ ನಿರ್ಧಾರ ಕೈಗೊಳ್ಳದೆ, ಪೂರಕ ಪರೀಕ್ಷೆಗೆ ಹಾಜರಾಗಿ ನಿಮ್ಮ ಭವಿಷ್ಯ ರೂಪಿಸಿಕೊಳ್ಳಿ ಎಂದು ಸಚಿವ ಸೇಠ್ ಮನವಿ ಮಾಡಿಕೊಂಡಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next