Advertisement

ಮೈತ್ರಿ ಸರ್ಕಾರ ಪತನವಾದರೆ ನಾವು ಜವಾಬ್ದಾರರಲ್ಲ: ಸತೀಶ

06:00 AM Sep 17, 2018 | |

ಬೆಳಗಾವಿ: ಕಾಂಗ್ರೆಸ್‌ನ ಬೇರೆ ಶಾಸಕರಿಂದ ಸಮ್ಮಿಶ್ರ ಸರ್ಕಾರ ಪತನವಾದರೆ ನಾವು ಜವಾಬ್ದಾರರಲ್ಲ. ಅದಕ್ಕೆ ನಾವೇನೂ ಮಾಡಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್‌ ಮುಖಂಡ ಸತೀಶ ಜಾರಕಿಹೊಳಿ ಮೈತ್ರಿ ಸರ್ಕಾರ ಅಪಾಯದಲ್ಲಿದೆ ಎಂಬ ಸುಳಿವು ನೀಡಿದ್ದಾರೆ.

Advertisement

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾವು ಕಾಂಗ್ರೆಸ್‌ ಬಿಟ್ಟು ಹೋಗುವುದಿಲ್ಲ. ನಮ್ಮಿಂದ ಸರ್ಕಾರಕ್ಕೆ ಅಪಾಯವೂ ಇಲ್ಲ. ಇನ್ನೂ 24 ಗಂಟೆಗಳು ಬಾಕಿಯಿವೆ. ಆಗ ಏನು ಬೇಕಾದರೂ ಆಗಬಹುದು. ಬಿಜೆಪಿಯವರು ಆಪರೇಷನ್‌ ಕಮಲ ನಡೆಸಿರಬಹುದು. ಕೆಲವು ಶಾಸಕರು ಕಾಂಗ್ರೆಸ್‌ನಿಂದ ಆ ಪಕ್ಷಕ್ಕೆ ಹೋಗುತ್ತಿರಬಹುದು. ಹಣ ಕೊಟ್ಟು ಶಾಸಕರನ್ನು ಖರೀದಿಸುತ್ತಿದ್ದಾರೆಂಬ ಆರೋಪಗಳೂ ಕೇಳಿ ಬಂದಿವೆ. ಆದರೆ ಇದರ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಕಾಂಗ್ರೆಸ್‌ ತೊರೆದು ಬಿಜೆಪಿಗೆ ಕೆಲ ಶಾಸಕರು ಹೋಗುವ ನಿರ್ಧಾರ ಮಾಡಿದ್ದರೆ ನಾವು ಏನೂ ಮಾಡಲು ಆಗುವುದಿಲ್ಲ. ಅದು ಅವರ ವೈಯಕ್ತಿಕ ವಿಷಯ. ಹೀಗಾಗಿ ಪಕ್ಷ ಬಿಟ್ಟು ಹೋಗುವವರ ಬಗ್ಗೆ ನಮಗೆ ಹೇಳಲಿಕ್ಕೆ ಆಗುವುದಿಲ್ಲ. ಈ ಎಲ್ಲ ಬೆಳವಣಿಗೆಯ ನಡುವೆಯೂ ಸರ್ಕಾರ ಸುಭದ್ರವಾಗಿರಲಿದೆ ಎಂಬ ವಿಶ್ವಾಸವಿದೆ ಎಂದರು.

ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಬಳಿ ಚರ್ಚಿಸಲು ಯಾವುದೇ ವಿಷಯವಿಲ್ಲ. ಸೋಮವಾರ ಬೆಂಗಳೂರಿಗೆ ಹೋಗುತ್ತಿದ್ದೇನೆ. ಒಂದು ವೇಳೆ ಅವರು ಮಾತುಕತೆಗೆ ಕರೆದರೆ ಹೋಗುತ್ತೇನೆ ಎಂದರು.

ಸಚಿವ ರಮೇಶ ಜಾರಕಿಹೊಳಿ ಎಲ್ಲಿಯೂ ಹೋಗಿಲ್ಲ, ಗೋಕಾಕದಲ್ಲಿದ್ದಾರೆ. ನಾನೂ ಸಹ ಸಚಿವನಾಗಿದ್ದಾಗ ಖಾಸಗಿ ಕಾರನ್ನೇ ಬಳಸುತ್ತಿದ್ದೆ. ಅವರೂ ಸಹ ಈಗ ಖಾಸಗಿ ಕಾರನ್ನು ಬಳಕೆ ಮಾಡುತ್ತಿದ್ದಾರೆ. ಅದರಲ್ಲೇನೂ ವಿಶೇಷವಿಲ್ಲ. ನಮ್ಮಿಂದ ಸರ್ಕಾರಕ್ಕೆ ಯಾವುದೇ ಅಪಾಯ ಇಲ್ಲ. ಸಿದ್ದರಾಮಯ್ಯ ಅವರ ಮನೆಗೆ ಕಾಂಗ್ರೆಸ್‌ ನಾಯಕರು ಭೇಟಿ ಮಾಡಿ ಸಭೆ ನಡೆಸಿರುವುದು ರಾಜಕೀಯದಲ್ಲಿ ಸಹಜ. ಸಿದ್ದರಾಮಯ್ಯ ಒಬ್ಬ ಉಸ್ತುವಾರಿ. ಹೀಗಾಗಿ ಸಿಎಂ ಸೇರಿದಂತೆ ಪ್ರತಿಯೊಬ್ಬರೂ ಅವರ ಜತೆ ಚರ್ಚೆ ಮಾಡಲೇಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next