ಮುಂಬಯಿ: ಕರ್ನಾಟಕ ಸಂಘ ಮುಂಬಯಿ ಇದರ 84ನೇ ವಾರ್ಷಿಕ ಮಹಾಸಭೆಯು ಜೂ. 24 ರಂದು ಅಪರಾಹ್ನ ಮಾಟುಂಗ ಪಶ್ಚಿಮದ ಸಂಘದ ಸಮರಸ ಭವನದಲ್ಲಿ ನಡೆಯಿತು.
ಕರ್ನಾಟಕ ಸಂಘ ಮುಂಬಯಿ ಅಧ್ಯಕ್ಷ ಮನೋಹರ್ ಎಂ. ಕೋರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ಸಂಘದ ಉಪಾಧ್ಯಕ್ಷ ಡಾ| ಈಶ್ವರ ಅಲೆವೂರು, ಗೌರವ ಪ್ರಧಾನ ಕಾರ್ಯದರ್ಶಿ ಡಾ| ಭರತ್‌ಕುಮಾರ್ ಪೊಲಿಪು, ಗೌರವ ಕೋಶಾಧಿಕಾರಿ ನ್ಯಾಯವಾದಿ ಎಂ. ಡಿ. ರಾವ್, ಜೊತೆ ಕಾರ್ಯದರ್ಶಿ ಅಮರೇಶ್ ಸಿ. ಪಾಟೀಲ್, ಗೌರವ ಜೊತೆ ಕೋಶಾಧಿಕಾರಿ ದಿನೇಶ್ ಎ. ಕಾಮತ್, ಕಲಾಭಾರತಿ ಸಂಚಾಲಕ ಡಾ| ಎಸ್. ಕೆ. ಭವಾನಿ, ಸಂಬಂಧ ಮಾಸಿಕದ ಸಂಪಾದಕ ಶ್ರೀನಿವಾಸ ಜೋಕಟ್ಟೆ, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಬಿ. ಜಿ. ನಾಯಕ್, ಡಾ| ಜಿ. ಪಿ. ಕುಸುಮಾ, ಎನ್. ಎಂ. ಗುಡಿ, ಲಲಿತಾ ಪಿ. ಅಂಗಡಿ, ಸುಧಾಕರ ಪಾಲನ್, ಡಾ| ಮಮತಾ ಟಿ. ರಾವ್, ದುರ್ಗಪ್ಪ ಎ. ಕೋಟಿಯವರ್, ಸುಶೀಲಾ ಎಸ್. ದೇವಾಡಿಗ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗೌರವ ಕೋಶಾಧಿಕಾರಿ ನ್ಯಾಯವಾದಿ ಎಂ. ಡಿ. ರಾವ್ ವಾರ್ಷಿಕ ಲೆಕ್ಕಪತ್ರಗಳನ್ನು ಮಂಡಿಸಿದರು. 2018-2021ರ ಸಾಲಿನ ಕಾರ್ಯಕಾರಿ ಸಮಿತಿಗೆ ಇತ್ತೀಚೆಗೆ ನಡೆಸಲ್ಪಟ್ಟ ಮತದಾನ ಮೂಲಕ ಚುನಾಯಿಸಲ್ಪಟ್ಟ ಡಾ| ಭರತ್‌ಕುಮಾರ್ ಪೊಲಿಪು, ಓಂದಾಸ್ ಕಣ್ಣಂಗಾರ್, ರಾಜೀವ ನಾೖಕ್, ದುರ್ಗಪ್ಪ ಎ. ಕೋಟಿಯವರ್ ಇವರ ಯಾದಿಯನ್ನು ಚುನಾವಣಾಧಿಕಾರಿ ಆಗಿದ್ದ ಜಿ. ಟಿ. ಆಚಾರ್ಯ ಪ್ರಕಟಿಸಿದರು. ಮುಂದಿನ ಚುನಾವಣಾಧಿಕಾರಿಗಳನ್ನಾಗಿ ಎಸ್. ಆರ್. ರಾಮಣ್ಣ, ಸದಾನಂದ ಅಮೀನ್ ಹಾಗೂ ಸುಧಾಕರ್ ಮೈಂದನ್ ಇವರನ್ನು ಮಹಾಸಭೆಯು ಆಯ್ಕೆಗೊಳಿಸಿತು.
ಡಾ| ಬಿ. ಆರ್. ಮಂಜುನಾಥ್, ಎಚ್. ಬಿ. ಎಲ್. ರಾವ್, ಸುರೇಂದ್ರಕುಮಾರ್ ಹೆಗ್ಡೆ, ನ್ಯಾಯವಾದಿ ವಸಂತ ಕಲಕೋಟಿ, ಕೆ. ಮಂಜುನಾಥಯ್ಯ, ಶೇಖರ್ ಅಮೀನ್, ಸಾ.ದಯಾ, ಮೋಹನ್ ಮಾರ್ನಾಡ್, ಜಯಶೀಲ್ ಸುವರ್ಣ ಸಭಿಕರ ಪರವಾಗಿ ಮಾತನಾಡಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಗತ ಸಾಲಿನಲ್ಲಿ ಸ್ವರ್ಗಸ್ಥರಾದ ಸಂಘದ ಸದಸ್ಯರು, ಹಿತೈಷಿಗಳು, ಸಾಹಿತಿಗಳಿಗೆ ಸಭೆಯ ಆದಿಯಲ್ಲಿ ಮೌನ ಪ್ರಾರ್ಥನೆಯೊಂದಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮಾಜಿ ಗೌರವ ಪ್ರಧಾನ ಕಾರ್ಯದರ್ಶಿ ಓಂದಾಸ್ ಕಣ್ಣಾಂಗಾರ್ ಸಂಘದ ಅಭಿವೃದ್ಧಿ, ಸಾಧನೆಗಳ ಬಗ್ಗೆ ಸ್ಥೂಲವಾದ ಮಾಹಿತಿಯನ್ನಿತ್ತರು.
ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಡಾ| ಭರತ್‌ಕುಮಾರ್ ಪೊಲಿಪು ಸ್ವಾಗತಿಸಿ ಸಂಘದ ಗತ ವಾರ್ಷಿಕ ಚಟುವಟಿಕೆಗಳ ಹಾಗೂ ಗತ ಮಹಾಸಭೆಯ ವರದಿ ಸಭೆ ಮುಂದಿಟ್ಟು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
ಚಿತ್ರ -ವರದಿ:ರೋನ್ಸ್ ಬಂಟ್ವಾಳ್