ಕಲ್ಯಾಣ್: ಕರ್ನಾಟಕ ಸಂಘ ಕಲ್ಯಾಣ್ ವತಿಯಿಂದ ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿ ಆಯೋಜನೆಯಲ್ಲಿ ಸರಣಿ ಯಕ್ಷಗಾನ ತಾಳಮದ್ದಳೆಯ ಅಂಗವಾಗಿ ಇಂದ್ರಕೀಲಕ-ಉತ್ತರನ ಗೋಗ್ರಹಣ ತಾಳಮದ್ದಳೆ ಕಾರ್ಯಕ್ರಮವು ಜು. 14ರಂದು ಅಪರಾಹ್ನ ಕಲ್ಯಾಣ್ ಪಶ್ಚಿಮದ ಬ್ರಾಹ್ಮಣ ಸೊಸೈಟಿಯ ಸಭಾಗೃಹದಲ್ಲಿ ನಡೆಯಿತು.
ಕರ್ನಾಟಕ ಸಂಘ ಕಲ್ಯಾಣ್ ಹಾಗೂ ಪರಿಸರದ ದಾನಿಗಳ ನೆರವಿನಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಂಘದ ಮಹಾಪೋಷಕರಾದ ಜಾಸ್ಮಿàನ್ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಡಾ| ಸುರೇಂದ್ರ ವಿ. ಶೆಟ್ಟಿ, ಜಗನ್ನಾಥ ಶೆಟ್ಟಿ, ರವಿರಾಜ್ ಶೆಟ್ಟಿ, ಚಿತ್ರಾ ಆರ್. ಶೆಟ್ಟಿ, ಕಲ್ಯಾಣ್ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷರಾದ ನಂದಾ ಶೆಟ್ಟಿ, ಟಿ. ಎಸ್. ಉಪಾಧ್ಯಾಯ, ಸಂಘದ ಅಧ್ಯಕ್ಷ ಗೋಪಾಲ್ ಎಸ್. ಹೆಗ್ಡೆ, ಗೌರವ ಕಾರ್ಯದರ್ಶಿ ನ್ಯಾಯವಾದಿ ನೂತನ್ ಹೆಗ್ಡೆ, ಮಹಿಳಾ ವಿಭಾಗದ ಅಧ್ಯಕ್ಷೆ ದರ್ಶನಾ ಸೋನ್ಕರ್ ಅವರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಂಘದ ಅಧ್ಯಕ್ಷ ಗೋಪಾಲ್ ಎಸ್. ಹೆಗ್ಡೆ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಸಂಘದ ಕಾರ್ಯಚಟುವಟಿಕೆಗಳನ್ನು ವಿವರಿಸಿದರು. ಅಲ್ಲದೆ ತಾಳಮದ್ದಳೆಯ ವಿಶೇಷತೆಗಳನ್ನು ವಿವರಿಸಿದರು. ಮಳೆಗಾಲದ ಕಾರ್ಯಕ್ರಮಗಳಲ್ಲಿ ಒಂದಾದ ತಾಳಮದ್ದಳೆಯು ಕಲಾಭಿಮಾನಿಗಳನ್ನು ರಂಜಿಸುವಲ್ಲಿ ಯಶಸ್ವಿಯಾಗಿದೆ. ತಾಳಮದ್ದಳೆಯ ಅರ್ಥದ ತಿರುಳು, ಕತೆಯ ಮಾಹಿತಿ, ಸಂಗೀತ, ಹಾಸ್ಯದೊಂದಿಗೆ ಸಂತೋಷವನ್ನು ಉಂಟುಮಾಡುತ್ತದೆ. ವಿಶೇಷವಾಗಿ ಗಂಡು ಕಲೆಯಾದ ಈ ಕಾರ್ಯಕ್ರಮವು ಇತ್ತೀಚೆಗೆ ಸ್ತ್ರೀಯರು ಭಾಗವತಿಕೆ, ಅರ್ಥದಾರಿಗಳಾಗಿ ಭಾಗವಹಿಸುತ್ತಿರುವುದು ಕಲೆಗೆ ಮೆರುಗನ್ನು ನೀಡುತ್ತಿದೆ. ಸಂಘದ ನಾಡು-ನುಡಿಯನ್ನು ಬಿಂಬಿಸುವ ಕಾರ್ಯಕ್ರಮಗಳಿಗೆ ಎಲ್ಲರ ಸಹಕಾರವಿರಲಿ ಎಂದು ನುಡಿದು ಕಲಾವಿದರನ್ನು ಅಭಿನಂದಿಸಿದರು.
ಇದೇ ಸಂದರ್ಭದಲ್ಲಿ ಮಹಿಳಾ ಭಾಗವತೆ ಕು| ಕಾವ್ಯಶ್ರೀ ಅಜೇರು ಇವರನ್ನು ಸಂಘದ ವತಿಯಿಂದ ಗಣ್ಯರ ಉಪಸ್ಥಿತಿಯಲ್ಲಿ ಸಮ್ಮಾನಿಸಲಾಯಿತು. ಕಾರ್ಯಕ್ರಮದ ರೂವಾರಿ ಅಜೆಕಾರು ಕಲಾಭಿಮಾನಿ ಬಳಗದ ಅಧ್ಯಕ್ಷ ಅಜೆಕಾರು ಬಾಲಕೃಷ್ಣ ಶೆಟ್ಟಿ ಹಾಗೂ ತಾಳಮದ್ದಳೆಯ ಹಿಮ್ಮೇಳ ಮತ್ತು ಮುಮ್ಮೇಳ ಕಲಾವಿದರನ್ನು ಗೌರವಿಸಲಾಯಿತು.
ಪ್ರಾರಂಭದಲ್ಲಿ ಶೇಣಿ ವೇಣು ಗೋಪಾಲ್ ಭಟ್ ಅವರು ಕಲಾವಿದರ ಪರಿಚಯ ಹಾಗೂ ಕಲಾಬಳಗ ನಡೆದು ಬಂದ ದಾರಿಯನ್ನು ಸಂಕ್ಷಿಪ್ತವಾಗಿ ವಿವರಿ
ಸಿದರು. ನ್ಯಾಯವಾದಿ ನೂತನ್ ವಿ. ಹೆಗ್ಡೆ ಅವರು ಕಾರ್ಯಕ್ರಮ ನಿರ್ವಹಿಸಿದರು. ಮಹಿಳಾ ವಿಭಾಗದ ಅಧ್ಯಕ್ಷೆ ದರ್ಶನ್ ಸೋನ್ಕರ್ ವಂದಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮವಾಗಿ ಇಂದ್ರ ಕೀಲಕ-ಉತ್ತರನ ಗೋಗ್ರಹಣ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಕಾವ್ಯಶ್ರೀ ಅಜೇರು, ಶ್ರೀಪತಿ ನಾಯಕ್ ಅಜೇರು, ಪ್ರಶಾಂತ್ ಶೆಟ್ಟಿ ವಗೆನಾಡು ಅವರು ಸಹಕರಿಸಿದರು. ಅರ್ಥಗಾರಿಕೆಯಲ್ಲಿ ಪೆರ್ಮುದೆ ಜಯಪ್ರಕಾಶ್ ಶೆಟ್ಟಿ, ದಿನೇಶ್ ಶೆಟ್ಟಿ ಕಾವಳಕಟ್ಟೆ, ಹರೀಶ್ ಬೊಳಂತಿ ಮೊಗರು, ಪಕಳಕುಂಜ ಶ್ಯಾಮ್‌ಭಟ್, ಶೇಣಿ ವೇಣುಗೋಪಾಲ್ ಭಟ್ ಮೊದಲಾದವರು ಪಾಲ್ಗೊಂಡಿದ್ದರು.