Advertisement

ಕರ್ನಾಟಕ ಸಂಘ ಕಲಾವೇದಿಕೆ ಸಂಗೀತ ಕಾರ್ಯಕ್ರಮ

02:15 PM Nov 21, 2017 | |

ಮುಂಬಯಿ: ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕರ್ನಾಟಕ ಸಂಘ ಮುಂಬಯಿ ಇದರ ಕಲಾವೇದಿಕೆ ಕಲಾಭಾರತಿ ಆಶ್ರಯದಲ್ಲಿ ವೈವಿಧ್ಯಮಯ  ಸಂಗೀತ ಕಾರ್ಯಕ್ರಮಗಳನ್ನು  ಮಾಟುಂಗ ಪಶ್ಚಿಮದ ಕರ್ನಾಟಕ ಸಂಘದ ಸಮರಸ ಭವನದಲ್ಲಿ ಆಯೋಜಿಸಲಾಗಿತ್ತು.

Advertisement

ನ. 5ರಂದು ಪೂರ್ವಾಹ್ನ 10ರಿಂದ   ಶುಭಮ್‌ ಮ್ಯೂಸಿಕ್‌ ಅಕಾಡೆಮಿ  ಇವರ ಪ್ರಾಯೋಜಕತ್ವದಲ್ಲಿ ಶಾಸ್ತ್ರೀಯ ಸಂಗೀತ ಮೈಫಲ್‌ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭದಲ್ಲಿ ಪದ್ಮವಿಭೂಷಣ ಡಾ| ಗಂಗೂಬಾಯಿ ಹಾನಗಲ್‌ ಅವರ ಶಿಷ್ಯ  ಅಶೋಕ ನಾಡಗೀರ್‌ ಅವರಿಂದ ಹಿಂದುಸ್ತಾನಿ ಶಾಸ್ತ್ರೀಯ ಗಾಯನ ನೆರವೇರಿತು. ಪಕ್ಕವಾದಕರಾಗಿ ಪುಷ್ಕರ ಜೋಶಿ ಅವರು ತಬಲಾದಲ್ಲಿ, ಸಂವಾದಿನಿಯಲ್ಲಿ  ಸುಪ್ರಿಯಾ ಜೋಶಿ   ಅವರು ಸಹಕರಿಸಿದರು.

ಅದೇ ರೀತಿ ನ. 12ರಂದುಪೂರ್ವಾಹ್ನ 10ರಿಂದ ಖಯಾಲ್‌ ಟ್ರಸ್ಟ್‌  ಅವರ ಪ್ರಾಯೋಜಕತ್ವದಲ್ಲಿ ಉಸ್ತಾದ್‌ ನಿಜಾಮುದ್ದೀನ್‌ ಖಾನ್‌ಸ್ಮರಣಾರ್ಥ ಶಾಸ್ತ್ರೀಯಸಂಗೀತಸ್ಮೃತಿಕಾರ್ಯಕ್ರಮವನುಆಯೋಜಿಸಲಾಗಿತ್ತು.ಪ್ರಸಿದ್ಧ ಕಲಾವಿದೆಅಪರ್ಣಾಪಣಶೀಕರ ಅವರಿಂದಶಾಸ್ತ್ರೀಯ ಗಾಯನ, ವಿಂದೋಳ್‌ ಮುಜುಮ್‌ದಾರ್‌  ಅವರಿಂದ ಏಕ ವ್ಯಕ್ತಿ ತಬಲಾ ವಾದನವು ನೆರೆದ ಸಂಗೀತ ರಸಿಕರನ್ನು ರಂಜಿಸಿತು.ಪಕ್ಕವಾದಕರಾಗಿ   ಅಜಯ್‌ ಜೋಗಳೇಕರ್‌ ಮತ್ತು  ಜ್ಞಾನೇಶ್ವರ್‌ ಸೋನಾವಣೆ ಹಾರ್ಮೋನಿಯಂನಲ್ಲಿ ಹಾಗೂ  ತಬಲಾದಲ್ಲಿ ಭೂಷಣ್‌ ಪರಚುರೆ  ಅವರು ಸಹಕರಿಸಿದರು.

 ಕಾರ್ಯಕ್ರಮದಲ್ಲಿ ಕಲಾರಸಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸಂಘದ ವತಿಯಿಂದ ಕಲಾವಿದರುಗಳನ್ನು ಗೌರವಿಸಲಾಯಿತು. ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ವಿವಿಧ ವಿಭಾಗಗಳ ಪದಾಧಿಕಾರಿಗಳು, ಸದಸ್ಯರು, ಸಂಗೀತ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next