Advertisement
ಸೆ. 3ರಂದು ಡೊಂಬಿವಲಿ ಪೂರ್ವದ ಠಾಕೂರ್ ಸಭಾಗೃಹದಲ್ಲಿ ನಡೆದ ಕರ್ನಾಟಕ ಸಂಘ ಡೊಂಬಿವಲಿ ಸುವರ್ಣ ಮಹೋತ್ಸವ ಸರಣಿ ಕಾರ್ಯಕ್ರಮ-10ರ ಕಲಾ ಸಂಗಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ಮಹಾರಾಷ್ಟ್ರ ವಿಶೇಷವಾಗಿ ಮುಂಬಯಿಯಲ್ಲಿ ಸಾಕಷ್ಟು ಪ್ರತಿಭೆಗಳಿದ್ದರೂ ಇತ್ತೀಚೆಗೆ ಕರ್ನಾಟಕ ಸರಕಾರ 9 ಹೊಸ ಅಕಾಡೆಮಿಗಳನ್ನು ಸ್ಥಾಪಿಸಿ ಅವುಗಳಲ್ಲಿ ಮುಂಬಯಿಯ ಯಾರಿಗೂ ಕೂಡಾ ಸ್ಥಾನವನ್ನು ನೀಡದೆ ಇದ್ದದ್ದು ವಿಪರ್ಯಾಸದ ಸಂಗತಿ ಯಾಗಿದೆ. ಮುಂಬಯಿಗೆ ಬಂದು ಇಲ್ಲಿಯ ಕನ್ನಡಿಗರ ಆದರಾತಿಥ್ಯ ಪಡೆದುಹೋಗುವ ಕರ್ನಾಟಕದ ಮಹಾನುಭಾವರು ಕಲ್ಯಾಣ್ ರೈಲ್ವೇ ನಿಲ್ದಾಣವನ್ನು ದಾಟಿದ ಕೂಡಲೇ ಮರೆತು ಬಿಡುತ್ತಾರೆ. ಸುವರ್ಣ ಮಹೋತ್ಸವ ಸಂಭ್ರಮದಲ್ಲಿರುವ ಡೊಂಬಿವಲಿ ಕರ್ನಾಟಕ ಸಂಘದ ಕಾರ್ಯವನ್ನು ಶ್ಲಾ ಸಿ, ಹೊರನಾಡಿನಲ್ಲಿ ಒಂದು ಸಂಸ್ಥೆ ಹೇಗೆ ಕಾರ್ಯ ನಿರ್ವಹಿಸಬಹುದು ಎಂಬುದಕ್ಕೆ ಡೊಂಬಿವಲಿ ಕರ್ನಾಟಕ ಸಂಘ ಒಂದು ನಿದರ್ಶನವಾಗಿದೆ. ಸಂಘವು ಇನ್ನಷ್ಟು ಅಭಿವೃದ್ಧಿ ಪಥದತ್ತ ಸಾಗಲಿ ಎಂದು ಶುಭ ಹಾರೈಸಿದರು.
Related Articles
Advertisement
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಡೊಂಬಿವಲಿ ಕರ್ನಾಟಕ ಸಂಘದ ಕಾರ್ಯಾಧ್ಯಕ್ಷ ಇಂದ್ರಾಳಿ ದಿವಾಕರ ಶೆಟ್ಟಿ ಅವರು ಮಾತನಾಡಿ, ಸುವರ್ಣ ಮಹೋತ್ಸವದ ಸಂಭ್ರಮದಲ್ಲಿರುವ ಡೊಂಬಿವಲಿ ಕರ್ನಾಟಕ ಸಂಘ ಹೊರನಾಡಿನಲ್ಲಿಯೇ ಒಂದು ಮಾದರಿ ಸಂಸ್ಥೆಯಾಗಿದ್ದು, ಕನ್ನಡ ಭಾಷೆ, ಸಂಸ್ಕೃತಿ ಹಾಗೂ ಕಲೆಯ ಅಭಿವೃದ್ಧಿಯ ಜೊತೆಗೆ ಶಿಕ್ಷಣಕ್ಕಾಗಿ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ತಮ್ಮೆಲ್ಲರ ಸಹೃದಯಗಳ ಸಹಕಾರ ಸದಾಯಿರಲಿ ಎಂದರು.
ಸಮಾರಂಭದಲ್ಲಿ ಗಣ್ಯರನ್ನು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಿ ಗೌರವಿಸಲಾಯಿತು. ಇತ್ತೀಚೆಗೆ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಸ್ಪರ್ಧಿಗಳನ್ನು ಗೌರವಿಸಲಾಯಿತು. ವೇದಿಕೆ ಯಲ್ಲಿ ಸಂಘದ ಅಧ್ಯಕ್ಷ ವಿಟuಲ್ ಶೆಟ್ಟಿ, ಇತರ ಪದಾಧಿಕಾರಿಗಲಾದ ಡಾ| ದಿಲೀಪ್ ಕೋಪರ್ಡೆ, ದೇವದಾಸ್ ಕುಲಾಲ್, ಸತೀಶ್ ಆಲಗೂರ, ಸನತ್ ಕುಮಾರ್ ಜೈನ್, ವಿಮಲಾ ಶೆಟ್ಟಿ ಉಪಸ್ಥಿತರಿದ್ದರು.
ವಸಂತ ಸುವರ್ಣ ಕಾರ್ಯಕ್ರಮ ನಿರ್ವಹಿಸಿದರು. ದೇವದಾಸ್ ಕುಲಾಲ್ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಕಲಾವಿದೆ ರಶ್ಮೀ ಕಾಖಂಡಕಿ ತಂಡದವರಿಂದ ಜಾನಪದ ವೈವಿಧ್ಯ ಹಾಗೂ ಇನ್ನಿತರ ನೃತ್ಯ ಸಂಭ್ರಮ ನಡೆಯಿತು. ತುಳು-ಕನ್ನಡಿಗರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.