Advertisement
ಹೌದು, ಪುಸ್ತಕಗಳನ್ನು ಮಕ್ಕಳೆಂದು ಭಾವಿಸಿ ಐದು ಲಕ್ಷ ಅಪರೂಪದ ಪುಸ್ತಕಗಳನ್ನು ಸಂಗ್ರಹಿಸಿ, ಸಂರಕ್ಷಿಸಿ, ಪೋಷಿಸಲು ಇಳಿ ವಯಸ್ಸಿನಲ್ಲಿಯೂ ಕುಟುಂಬದಿಂದ ದೂರವಿದ್ದು, ಸಮಸ್ಯೆಗಳ ನಡುವೆಯೇ ಹೆಣಗಾಡುತ್ತಿರುವ ಅಪ್ಪಟ ಕನ್ನಡ ಪುಸ್ತಕ ಪ್ರೇಮಿ ಹರಿಹರಪ್ರಿಯ. ಬದುಕಿನ ಸಂಧ್ಯಾಕಾಲದಲ್ಲೂ ಸುಸಜ್ಜಿತ ಪುಸ್ತಕ ಮನೆಗೆ ನೆರವು ಸಿಗುವ ಆಶಾಭಾವನೆಯಿಂದ ಹೋರಾಟ ಸಾಗಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಇಷ್ಟೊಂದು ಪುಸ್ತಕ ಇಡಲು ಬಾಡಿಗೆ ಮನೆ ಸಾಕಾಗದೆ ಕೋಲಾರದ ಮಾಲೂರಿನಲ್ಲಿ ಮನೆ ಕಟ್ಟಿ ಪುಸ್ತಕದ ಜತೆ ಬದುತ್ತಿದ್ದಾರೆ.
Related Articles
Advertisement
ಮೂಲತಃ ಕೋಲಾರ ತಾಲೂಕಿನ ಹೊಳಲಿ ಗ್ರಾಮದವರು. ತಂದೆ ಸ್ವಾತಂತ್ರ್ಯ ಹೋರಾಟಗಾರರು, ಹರಿಹರಪ್ರಿಯ ಹುಟ್ಟಿದ್ದು ಮೈಸೂರು, ಬೆಳೆದಿದ್ದು ಮಂಡ್ಯ ಜಿಲ್ಲೆಯಲ್ಲಿ. ತಂದೆ ಸಂಗ್ರಹಿಸಿದ್ದ ಪುಸ್ತಕಗಳನ್ನು ಹತ್ತರ ವಯಸ್ಸಿನಲ್ಲಿಯೇ ಓದುತ್ತಾ ಪುಸ್ತಕ ಪ್ರಿಯರಾದರು. ಶಾಲೆಗೆ ಹೋಗಿದ್ದು ಪಿಯುಸಿವರೆಗೆ ಮಾತ್ರ.
ಕುವೆಂಪು ನಿಕಟವರ್ತಿ: ಪುಸ್ತಕಗಳ ಓದಿನ ಮೂಲಕವೇ ಕುವೆಂಪು ಸಾಹಿತ್ಯವನ್ನು ಓದಿ ಅವರ ನಿಕಟವರ್ತಿಯಾಗಿದ್ದರು. 16 ವಯಸ್ಸಿಗೆ ಕವನ ಸಂಕಲನ ಹೊರತಂದಿದ್ದರು. ಸುನಂದ ಕಾವ್ಯರೊಂದಿಗೆ ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ. 1968ರಲ್ಲಿ ಬೆಂಗಳೂರಿಗೆ ಆಗಮಿಸಿ ಆರು ದಶಕಗಳ ಕಾಲ ಹೋರಾಟ, ಭಾಷಣ, ಪುಸ್ತಕಗಳ ಬರವಣಿಗೆಯಲ್ಲಿ ನಿರತರಾಗಿ 110 ಪುಸ್ತಕ ಬರೆದಿದ್ದಾರೆ.
ಪುಸ್ತಕಗಳ ಸಂಗ್ರಹ ಅಧ್ಯಯನ: ಮೈಸೂರಿನಲ್ಲಿ ತಾತಾಚಾರ್ಯ ಸಂಸ್ಥೆಗೆ ಟ್ಯೂಶನ್ಗೆ ಎಂದು ಹೋದವರು ಕುವೆಂಪು ಅವರನ್ನು 1968ರಲ್ಲಿ ಭೇಟಿಯಾಗಿದ್ದರು. ಹೀಗೆ ಕನ್ನಡ ವಿವಿಧ ಸಾಹಿತಿಗಳ ಪುಸ್ತಕ ಸಂಗ್ರಹಿಸುತ್ತಾ ಈ 6 ದಶಕಗಳಲ್ಲಿ ಕನ್ನ ಡದ 500 ಸಾಹಿತಿಗಳ ಪುಸ್ತಕ ಸಂಗ್ರಹಿಸಿದ್ದಾರೆ.