Advertisement
ಎಂಬಿಬಿಎಸ್ ಪದವೀಧರರಾಗಿದ್ದ ಡಾ| ಪದಕಿ ಅವರು ಸರಕಾರಿ ಕೆಲಸಕ್ಕೆ ಆಸೆ ಪಡೆದೆ ಖಾಸಗಿಯಲ್ಲಿಯೇ ರೋಗಿಗಳಿಗೆ ಉಚಿತ ತಪಾಸಣೆ ಮಾಡುತ್ತಿದ್ದರು. ಮೃತರರಿಗೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಪತ್ನಿ ಇದ್ದು ಓರ್ವ ಮಗ ವಾಹನ ಅಪಘಾತದಲ್ಲಿ ನಿಧನರಾಗಿದ್ದರು. ತಮ್ಮ 90 ವಯಸ್ಸಿನವರೆಗೂ ಆರೋಗ್ಯವಂತರಾಗಿದ್ದು ಅವರುಮಗನ ಅಪಘಾತದಿಂದ ಆರೋಗ್ಯದಲ್ಲಿ ಏರುಪೇರು ಮಾಡಿಕೊಂಡಿದ್ದರು. ಅಲ್ಲದೇ ಇತ್ತಿಚಿಗೆ ಮನೆಯಲ್ಲಿ ಕಾಲು ಜಾರಿ ಬಿದ್ದ ಕಾರಣ ಕಾಲಿಗೆ ಪೆಟ್ಟಾಗಿ ಹಾಸಿಗೆ ಹಿಡಿದಿದ್ದರು.
ಬಂದ್ ಮೂಲಕ ಸಂತಾಪ: ಡಾ| ಪದಕಿ ಅವರ ನಿಧನದ ಹಿನ್ನೆಲೆ ಪಟ್ಟಣದ ಬಟ್ಟೆ, ಕಿರಾಣಿ, ಹೊಟೇಲ, ಸೇರಿದಂತೆ ಸಣ್ಣಪುಟ್ಟ ವ್ಯಾಪಾರಸ್ಥರು ತಮ್ಮ ಅಂಗಡಿಗಳನ್ನು ಬಂದ್ ಮಾಡಿ ಸಂತಾಪವನ್ನು ಸೂಚಿಸಿದರು. ಮೊದಲಿಗೆ ಸ್ಥಳೀಯ ಎಲ್ಲ ಖಾಸಗಿ ಆಸ್ಪತ್ರೆಯ ವೈದ್ಯರು ತಮ್ಮ ಆಸ್ಪತ್ರೆ ಕಾರ್ಯ ಸ್ಥಗಿತಗೊಳಿಸಿ ಸಂತಾಪ ಸೂಚಿಸಿದರು.
ಬೆಳಿಗ್ಗೆಯಿಂದಲೇ ಅವರ ದರ್ಶನಕ್ಕೆ ಅಪಾರ ಪ್ರಮಾಣದಲ್ಲಿ ಅಭಿಮಾನಿಗಳು ಆಗಮಿಸಿದ್ದರು. ಕೇವಲ ಮುದ್ದೇಬಿಹಾಳ ಪಟ್ಟಣದವಲ್ಲದೇ ತಾಲೂಕಿನ ಗ್ರಾಮೀಣ ಪ್ರದೇಶಗಳಿಂದಲೂ ಡಾ| ಪದಕಿ ಅವರ ಅಂತಿಮ ದರ್ಶನಕ್ಕೆ ಆಗಮಿಸಿ ಸಂತಾಪವನ್ನು ಸೂಚಿಸಿದರು. ಶಾಲಾ ಕಾಲೇಜಿಗೆ ರಜೆ: ಪದಕಿ ಅವರ ನಿಧನ ಹಿನ್ನೆಲೆ ಮುದ್ದೇಬಿಹಾಳ ತಾಲೂಕಿನ ಗ್ರಾಮೀಣ ಪ್ರದೇಶ ಶಾಲೆಗಳನ್ನು ಬಿಟ್ಟು ಎಲ್ಲ ಪಟ್ಟಣದ ಖಾಸಗಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಸರಕಾರಿ ಶಾಲಾ ಕಾಲೇಜುಗಳಲ್ಲಿ ಶೋಕಾಚರಣೆ ಮಾಡಿ ಎಂದಿನಂತೆ ಕಲಿಕೆಯನ್ನು ಮುಂದುವರಿಸಿದರು.
Related Articles
Advertisement