ಬೆಂಗಳೂರು: ರಾಜ್ಯಪಾಲರ ನಿವಾಸ ರಾಜಭವನಕ್ಕೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ಕೂಡಲೇ ಎಚ್ಚೆತ್ತ ಪೊಲೀಸರು ತಪಾಸಣೆ ನಡೆಸಿದ ಘಟನೆ ಸೋಮವಾರ ರಾತ್ರಿ ನಡೆದಿದೆ.
ಸೋಮವಾರ ರಾತ್ರಿ ಕರ್ನಾಟಕ ರಾಜಭವನಕ್ಕೆ ಬಾಂಬ್ ಬೆದರಿಕೆಯ ಕುರಿತು ಬೆಂಗಳೂರು ಪೊಲೀಸರಿಗೆ ಅಪರಿಚಿತ ಕರೆ ಬಂದಿದೆ. ಪೊಲೀಸರು ತಕ್ಷಣ ಬಾಂಬ್ ಸ್ಕ್ವಾಡ್ ಅನ್ನು ಕಳುಹಿಸಿ ಆವರಣವನ್ನು ಹುಡುಕಿದ್ದಾರೆ, ಆದರೆ ಏನೂ ಪತ್ತೆಯಾಗಲಿಲ್ಲ.
ಪ್ರಕರಣ ದಾಖಲಿಸಿಕೊಂಡು ಮತ್ತೆ ಶೋಧ ನಡೆಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:Google; ವಿರಾಟ್ ಕೊಹ್ಲಿ ಗೂಗಲ್ ಇತಿಹಾಸದಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ಕ್ರಿಕೆಟಿಗ
“ಇದು ಹುಸಿ ಕರೆ. ನಾವು ಎಫ್‌ಐಆರ್ ದಾಖಲಿಸುತ್ತೇವೆ. ನಿನ್ನೆ ಮಧ್ಯರಾತ್ರಿ ಅಪರಿಚಿತ ಸಂಖ್ಯೆಯಿಂದ ನಮ್ಮ ಕಂಟ್ರೋಲ್ ರೂಂಗೆ ಅವರು ರಾಜಭವನದಲ್ಲಿ ಬಾಂಬ್ ಇರಿಸಿದ್ದಾರೆ ಎಂದು ನಮಗೆ ಕರೆ ಬಂದಿದೆ. ನಾವು ಇಂದು ಮತ್ತೊಮ್ಮೆ ಹುಡುಕಾಟ ನಡೆಸುತ್ತೇವೆ” ಎಂದು ಪೊಲೀಸರು ತಿಳಿಸಿದ್ದಾರೆ.
ಕೆಲ ದಿನಗಳ ಹಿಂದೆ ಬೆಂಗಳೂರಿನಾದ್ಯಂತ ಸುಮಾರು 44 ಶಾಲೆಗಳಿಗೆ ಅನಾಮಧೇಯ ಇಮೇಲ್ ಗಳ ಮೂಲಕ ಬಾಂಬ್ ಬೆದರಿಕೆ ಬಂದಿತ್ತು.