Advertisement
ಈ ನಿಟ್ಟಿನಲ್ಲಿ ಕಾಂಗ್ರೆಸ್ ಕಾನೂನು ಸಮರಕ್ಕೆ ಭಾರೀ ಹಿನ್ನಡೆ ಉಂಟಾಗಿದ್ದು, ಕಾಂಗ್ರೆಸ್ ಪರ ವಕೀಲ ಕಪಿಲ್ ಸಿಬಲ್ ಮಂಡಿಸಿದ್ದ ವಾದಕ್ಕೆ ಸುಪ್ರೀಂ ಪೀಠ ಮನ್ನಣೆ ನೀಡದೆ, ಶುಕ್ರವಾರ ಪೀಠ ನೀಡಿದ ಮಾರ್ಗಸೂಚಿಯಂತೆ ಹಂಗಾಮಿ ಸ್ಪೀಕರ್ ಕಾರ್ಯನಿರ್ವಹಿಸಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದೆ.
Related Articles
Advertisement
ಹಿರಿತನ ಎಂದರೆ ವಯಸ್ಸಿನಲ್ಲಿ ಅಲ್ಲ, ಹೆಚ್ಚು ಬಾರಿ ಆಯ್ಕೆಯಾದವರು ಎಂದರ್ಥ ಎಂಬುದಾಗಿ ನ್ಯಾ. ಎಸ್ ಎ ಬೋಬ್ಡೆ ಅಭಿಪ್ರಾಯವ್ಯಕ್ತಪಡಿಸಿದ್ದರು. ನಂತರ ಬೋಪಯ್ಯ ನೇಮಕ ಮೊದಲು ಪರಿಶೀಲನೆ ಮಾಡಬೇಕಾದ್ರೆ ವಿಶ್ವಾಸಮತ ಯಾಚನೆ ಮುಂದೂಡಬೇಕಾಗುತ್ತದೆ. ಹಂಗಾಮಿ ಸ್ಪೀಕರ್ ಗೆ ನೋಟಿಸ್ ನೀಡಬೇಕಾಗುತ್ತದೆ ಎಂದು ತ್ರಿಸದಸ್ಯ ಪೀಠದ ಜಡ್ಜ್ ಗಳು ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಇದಕ್ಕೆ ಬಿಜೆಪಿ ಪರ ವಕೀಲ ಮುಕುಲ್ ರೋಹ್ಟಗಿ ಕೂಡಾ ಸಹಮತ ಸೂಚಿಸಿದ್ದಾರೆ.
ಸಂವಿಧಾನದ ನಿಯಮಾವಳಿ ಬದಿಗೆ ತೂರಿ ರಾಜ್ಯಪಾಲರು ಬೋಪಯ್ಯ ಅವರನ್ನು ನೇಮಕ ಮಾಡಿದ್ದಾರೆ. ಅಲ್ಲದೆ 2009ರಿಂದ 2013ರವರೆಗೆ ಸ್ಪೀಕರ್ ಆಗಿದ್ದ ಬೋಪಯ್ಯ ಕೆಲವು ವಿವಾದಾತ್ಮಕ ನಿರ್ಧಾರ ತೆಗೆದುಕೊಂಡಿದ್ದರು. ಈ ನಿರ್ಧಾರಗಳನ್ನು ಸುಪ್ರೀಂಕೋರ್ಟ್ ವಜಾ ಮಾಡಿತ್ತು.
ಹೀಗಾಗಿ ಕಳಂಕಿತ ಬೋಪಯ್ಯ ಅವರನ್ನು ಸ್ಪೀಕರ್ ಆಗಿ ಮುಂದುವರಿಸಬಾರದು. ಇದು ನಮ್ಮ ಅಳಿವು, ಉಳಿವಿನ ಪ್ರಶ್ನೆಯಾಗಿದ್ದು, ಈ ಕೂಡಲೇ ವಿಚಾರಣೆಗೆ ತೆಗೆದುಕೊಳ್ಳಬೇಕು ಎಂದು ಶುಕ್ರವಾರ ರಾತ್ರಿ 8ಗಂಟೆ ಸುಮಾರಿಗೆ ಕಾಂಗ್ರೆಸ್ ನ ಕಪಿಲ್ ಸಿಬಲ್ ಮತ್ತು ಅಭಿಷೇಕ್ ಮನು ಸಿಂಘ್ವಿ ಸುಪ್ರೀಂ ರಿಜಿಸ್ಟ್ರಾರ್ ಗೆ ಮನವಿ ಸಲ್ಲಿಸಿದ್ದರು.