Advertisement
·ಎರಡನೇ ಅವಧಿಗೆ ಕೆಎಸ್‌ಎಫ್ಎ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಹೇಗನಿಸುತ್ತಿದೆ?ಇದು ನಿಜಕ್ಕೂ ಖುಷಿ ತಂದಿದೆ. ಕರ್ನಾಟಕದಲ್ಲಿ ಫುಟ್‌ಬಾಲ್ ಕ್ರೀಡೆಗೆ ಹೆಚ್ಚು ಒತ್ತು ನೀಡಿ, ಸ್ಯಾಫ್ ಕ್ರೀಡಾಕೂಟವನ್ನು ಬೆಂಗಳೂರಿನಲ್ಲಿ ಯಶಸ್ವಿಯಾಗಿ ನಡೆಸಿರುವುದನ್ನು ಗುರುತಿಸಿ, ಎರಡನೇ ಅವಧಿಗೆ ನನ್ನನ್ನು ಪುನರಾಯ್ಕೆ ಮಾಡಲಾಗಿದೆ. ಇದು ಸಂಸ ತದ ಜತಗೆ ಹೆಚ್ಚು ಜವಾಬ್ದಾರಿಯನ್ನು ನೀಡಿದೆ.
ಪ್ರತಿ ಜಿಲ್ಲೆಯಲ್ಲಿ ಫುಟ್‌ಬಾಲ್ ಸಮಿತಿ, ಕ್ಲಬ್‌ಗಳನ್ನು ಹೊಂದಲು ಒತ್ತು ನೀಡಲಾಯಿತು. ಈಗಾಗಲೇ ರಾಜ್ಯದ 28 ಜಿಲ್ಲೆಗಳಲ್ಲಿ ಜಿಲ್ಲಾ ಮಟ್ಟದ ಫುಟ್‌ಬಾಲ್ ಸಮಿತಿಗಳಿವೆ. ಹಲವು ಜಿಲ್ಲೆಗಳಲ್ಲಿ ಯಶಸ್ವಿಯಾಗಿ ಪಂದ್ಯಗಳನ್ನು ನಡೆಸಲಾಗುತ್ತಿದೆ. ಮುಖ್ಯವಾಗಿ ಬೆಂಗಳೂರಿನಲ್ಲಿ ಸ್ಯಾಫ್ ಪಂದ್ಯಗಳನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಕುವೈತ್, ಭೂತಾನ್, ಲೆಬನಾನ್, ಮಾಲ್ಡೀವ್ಸ್, ನೇಪಾಲ, ಪಾಕಿಸ್ಥಾನ, ಬಾಂಗ್ಲಾದೇಶ ತಂಡಗಳು ಇದರಲ್ಲಿ ಭಾಗವಹಿಸಿದ್ದವು. ಇನ್ನೊಂದೆಡೆ, ಕರ್ನಾಟಕ ತಂಡವು ಪ್ರತಿಷ್ಠಿತ ಸಂತೋಷ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ·ಕಂಠೀರವ ಕ್ರೀಡಾಂಗಣದಲ್ಲೇ ಹೆಚ್ಚು ಫುಟ್ ಬಾಲ್ ಪಂದ್ಯಗಳು ನಡೆಯುತ್ತವೆ. ಈ ಒತ್ತಡ ಕಡಿಮೆ ಮಾಡುವುದು ಹೇಗೆ?
ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಅನುಗುಣ ವಾಗಿ ಶೀಘ್ರದಲ್ಲೇ ಫುಟ್‌ಬಾಲ್ ಕ್ರೀಡಾಂಗಣ ತಲೆ ಎತ್ತಲಿದೆ. ಅಗತ್ಯಕ್ಕೆ ತಕ್ಕಂತೆ ನ್ಯಾಚುರಲ್ ಟಟರ್ಫ್ ಮತ್ತು ಆರ್ಟಿಫಿಶಿಯಲ್ ಟರ್ಫ್ ಗಳಲ್ಲಿ ಪಂದ್ಯಗಳನ್ನು ಆಯೋಜಿಲಾಗುವುದು.
Related Articles
ಫುಟ್‌ಬಾಲ್ ಬಡವರ ಕ್ರೀಡೆಯಾಗಿದೆ. ಕೇವಲ ಚೆಂಡು ಇದ್ದರೆ ಸಾಕು. ಹೀಗಾಗಿ ಇದು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಗರಿಷ್ಠ ಪ್ರಯತ್ನ ನಡೆಸಿದ್ದೇವೆ. ಸ್ಯಾಫ್ ಪಂದ್ಯಾವಳಿಯಲ್ಲಿ ಕಕ್ಕಿರಿದು ತುಂಬಿದ್ದ ಅಭಿಮಾನಿಗಳೇ ಸಾಕ್ಷಿ. ಈಗಾಗಲೇ ಅನೇಕ ಮಹಿಳಾ ಫುಟ್‌ಬಾಲ್ ಕ್ಲಬ್‌ಗಳು, ಅಕಾಡೆಮಿಗಳು ಕಾರ್ಯ ನಿರ್ವಹಿಸುತ್ತಿವೆ. ಪ್ರತಿ ತಾಲೂಕಿನಲ್ಲಿ ಫುಟ್‌ಬಾಲ್ ಸಮಿತಿಗಳನ್ನು ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು.
Advertisement
·ಫುಟ್‌ಬಾಲ್‌ಗೆ ಸರಕಾರ ಹೇಗೆ ಪ್ರೋತ್ಸಾಹ ನೀಡುತ್ತಿದೆ?ಬೇರೆ ರಾಜ್ಯಗಳಲ್ಲಿ ಸಂತೋಷ್ ಟ್ರೋಫಿ ಗೆದ್ದರೆ, ಕ್ರೀಡಾಪಟುಗಳಿಗೆ ನಗದು ಬಹುಮಾನ ನೀಡುತ್ತಾರೆ. ಆದರೆ ಕಳೆದ ಬಿಜೆಪಿ ಸರಕಾರದ ಅವಧಿಯಲ್ಲಿ ಯಾವುದೇ ನಗದು ಬಹುಮಾನ ನೀಡಲಿಲ್ಲ. ಇದೀಗ, ಪ್ರತಿ ಜಿಲ್ಲೆಯಲ್ಲೂ ಫುಟ್‌ಬಾಲ್ ಕ್ರೀಡಾಂಗಣ ನಿರ್ಮಿಸಲು ಜಮೀನಿಗಾಗಿ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು. · ಸಂತೋಷ್ ಪಿ.ಯು.