Advertisement

Karnataka Polls: ಏ.23 ರಂದು ಕೂಡಲಸಂಗಮಕ್ಕೆ ರಾಹುಲ್ ಗಾಂಧಿ ಭೇಟಿ

01:08 PM Apr 22, 2023 | keerthan |

ವಿಜಯಪುರ: ಏ.23 ರಂದು ಬಸವೇಶ್ವರ ಜಯಂತಿ ಅಂಗವಾಗಿ ಜನ್ಮಭೂಮಿ ಹಾಗೂ ಐಕ್ಯ ಭೂಮಿಗೆ ರಾಹುಲ್ ಗಾಂಧಿ ಅವರು ಭೇಟಿ ನೀಡಲಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಹೇಳಿದರು.

Advertisement

ಶನಿವಾರ ತುರ್ತು ಪತ್ರಿಕಾಗೋಷ್ಠಿಯಲ್ಲಿ ಬಸವ ಜಯಂತಿ ಹಾಗೂ ರಂಜಾನ್ ಹಬ್ಬದ ಶುಭಾಶಯ ಕೋರಿದ ಅವರು, ಏ.23 ರಂದು ಹೈದರಾಬಾದ್ ನಿಂದ ವಿಶೇಷ ವಿಮಾನದಲ್ಲಿ ಹುಬ್ಬಳ್ಳಿಗೆ ‌ಆಗಮಿಸಿ, ಅಲ್ಲಿಂದ ಕೂಡಲಸಂಗಮಕ್ಕೆ ಭೇಟಿ ನೀಡಲಿದ್ದಾರೆ ಎಂದರು.

ಬಸವೇಶ್ವರರು ವಿಶ್ವದ ಪ್ರಥಮ ಸಂಸತ್ ರೂಪಿಸಿದರು. ಕಾರ್ಲ್ ಮಾರ್ಕ್ಸ್ ಗಿಂತ ಮೊದಲೇ ಕಾಯಕದ ಸ್ವಾಭಿಮಾನ ಎತ್ತಿ ಹಿಡಿದು, ದಾಸೋಹ ಪರಿಕಲ್ಪನೆ ನೀಡಿದ್ದೇ ಬಸವೇಶ್ವರರು. ಹೀಗಾಗಿ ಬಸವೇಶ್ವರ ಕುರಿತು ರಾಹುಲ್ ಗಾಂಧಿ ಪ್ರಭಾವಿತರಾಗಿದ್ದಾರೆ ಎಂದರು.

ರಾಹುಲ್ ಗಾಂಧಿ ಅವರು ಭಾನುವಾರ ಕೂಡಲಸಂಗಮ ಬಸವ ಐಕ್ಯ ಮಂಟಪದಲ್ಲಿ ಬಸವೇಶ್ವರ ಐಕ್ಯಸ್ಥಳ, ಸಂಗಮೇಶ್ವರ ದರ್ಶನ‌ ಪಡೆಯಲಿದ್ದಾರೆ. ಬಳಿಕ ಸಂಜೆ 4ಕ್ಕೆ ವಿಜಯಪುರ ನಗರಕ್ಕೆ ಭೇಟಿ, ರೋಡ ಶೋ ನಡೆಸಲಿದ್ದಾರೆ ಎಂದರು.

ಇದನ್ನೂ ಓದಿ:ಹುಣಸೂರು: ಸುಡಾನ್‌ನಲ್ಲಿ ಸಿಲುಕಿರುವವರನ್ನು ಸುರಕ್ಷಿತವಾಗಿ ವಾಪಸ್ ಕರೆತರಲು ಕ್ರಮ

Advertisement

ಮಧ್ಯಾಹ್ನ 4 ಗಂಟೆಗೆ ನಗರದಲ್ಲಿ ರೋಡ ಶೋ, ಛತ್ರಪತಿ ಶಿವಾಜಿ ಮಹಾರಾಜರ, ಮಹಾತ್ಮಾ ಗಾಂಧೀಜಿ, ಬಸವೇಶ್ವರ, ಕನಕದಾಸ ವೃತ್ತದ ಮಾರ್ಗವಾಗಿ ಬಂದು, ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಬಳಿಕ ವಿಜಯಪುರ ನಗರದಲ್ಲಿ ವಾಸ್ತವ್ಯ ಮಾಡಲಿದ್ದಾರೆ ಎಂದರು.

ಕೂಡಲಸಂಗಮ ಕಾರ್ಯಕ್ರಮ ಪಕ್ಷಾತೀತವಾಗಿದ್ದು, ಗದಗ ಸಿದ್ರಾಮೇಶ್ವರ ಶ್ರೀಗಳು ಪ್ರಾಸ್ತಾವಿಕವಾಗಿ, ಇಲಕಲ್ಲ ಗುರುಮಹಾಂತ ಶ್ರೀಗಳು, ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಶ್ರೀಗಳು ಸೇರಿದಂತೆ, ಚಿತ್ರದುರ್ಗ, ಬೀದರ ಮಾತ್ರವಲ್ಲ ಇತರೆ ಸ್ವಾಮಿಗಳು ಭಾಗವಹಿಸಲಿದ್ದಾರೆ ಎಂದರು.

ವಿಜಯಪುರ ನಗರದಲ್ಲಿ ನಡೆಯು ಪಕ್ಷದ  ಕಾರ್ಯಕ್ರಮದಲ್ಲಿ‌ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪಾಲ್ಗೊಳ್ಳಲಿದ್ದಾರೆ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಜು ಆಲಗೂರ, ವಿಜಯಪುರ ನಗರ ಕ್ಷೇತ್ರದ ಅಭ್ಯರ್ಥಿ ಎ.ಎಚ್.ಮುಶ್ರೀಫ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next