Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂತೋಷ ತಮ್ಮ ಮಾನಸ ಪುತ್ರ ಮಹೇಶ ಟೆಂಗಿನಕಾಯಿ ಅವರಿಗೆ ಟಿಕೆಟ್ ಕೊಡಿಸಲು ಹಿರಿಯ ನಾಯಕನಾದ ನನಗೆ ಟಿಕೆಟ್ ತಪ್ಪುವಂತೆ ಮಾಡಿದರು. ರಾಜ್ಯ ಕೋರ್ ಕಮಿಟಿ, ಕೇಂದ್ರ ಸ್ಕ್ರೀನಿಂಗ್ ಕಮಿಟಿನಲ್ಲೂ ನನ್ನ ಹೆಸರೇ ಶಿಫಾರಸ್ಸು ಆಗಿತ್ತು. ಸಂಸದೀಯ ಮಂಡಳಿ ಸಭೆಯಲ್ಲಿ ನನ್ನ ಹೆಸರು ಮಾಯವಾಗಿದೆ ಎಂದರು.
Related Articles
Advertisement
ಇದನ್ನೂ ಓದಿ:ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ನಾಮಪತ್ರ ಸಲ್ಲಿಕೆ
ನನಗೆ ಟಿಕೆಟ್ ತಪ್ಪುವ ವೇಳೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಿಎಂ ಬಸವರಾಜ ಬೊಮ್ಮಾಯಿ ಗಟ್ಟಿಯಾಗಿ ಮನವರಿಕೆ ಮಾಡಿಕೊಡಬೇಕಾಗಿತ್ತು. ಜೋಶಿರವರೆ ನಾಲ್ಕು ಬಾರಿ ನಿಮ್ಮನ್ನು ಸಂಸದರಾಗಿಸಲು ನಾನು ಪಟ್ಟ ಶ್ರಮ ನಿಮಗೆ ನೆನಪಾಗಲಿಲ್ಲವೆ, ನಾನು ಸ್ಪೀಕರ್ ಆಗಿದ್ದಾಗ ನನ್ನ ಭಾವಚಿತ್ರ ಬಳಸಲು ಬರುವುದಿಲ್ಲವೆಂದು ನನ್ನ ಪತ್ನಿ ಹೆಸರನ್ನು ಶಿಲ್ಪಾ ಜಗದೀಶ ಶೆಟ್ಟರ ಎಂದು ದೊಡ್ಡ ಅಕ್ಷರದಲ್ಲಿ ಕರಪತ್ರದಲ್ಲಿ ಹಾಕಿಸಿದ್ದು, ಪ್ರಚಾರಕ್ಕೆ ಅವರನ್ನು ಕರೆದುಕೊಂಡು ಹೋಗಿದ್ದಾದರು ನೆನಪಾಗಲಿಲ್ಲವೆ. ಸದಸ ಪ್ರಧಾನಿ ಬಳಿ ಇರುವ ನೀವು ಪ್ರಧಾನಿ ಮೋದಿಯವರು, ಅಮಿತ್ ಶಾ ಅವರಿಗೆ ಮನವರಿಕೆ ಮಾಡಿಕೊಡಬೇಕಾಗಿತ್ತಲ್ಲ ಎಂದರು.
ಬಿ.ಎಲ್.ಸಂತೋಷ ಕಾರಣದಿಂದಾಗಿ ರಾಜ್ಯದೆಲ್ಲಡೆ ಬಿಜೆಪಿಯಲ್ಲಿ ಬೆಂಕಿ ಬೀಳುವಂತಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ ಕುಮಾರ ಕಟೀಲ್ ಅವರು ಸಂತೋಷ ಹೇಳಿದಷ್ಟು ಮಾತ್ರ ಮಾತನಾಡುತ್ತಾರೆ ಎಂದರು.
ತಮ್ಮ ಮೇಲೆ ಐಟಿ, ಇಡಿ ದಾಳಿ ನಡೆಯಲುಬಹುದು. ನನ್ನದೇನು ಸಾವಿರಾರು ಕೋಟಿ ಆಸ್ತಿ ಇಲ್ಲ .ಇರುವ ಆಸ್ತಿ ಕಾನೂನು ಚೌಕಟ್ಟಿನಲ್ಲಿಯೇ ಇದೆ ಎಂದರು.
ಬಿ.ಎಲ್.ಸಂತೋಷ ಇನ್ನು ಕೆಲವರು ಮಾಡಿದ ಅಪಮಾನ, ಮಾನಸಿಕ ಹಿಂಸೆಯಿಂದ ಸ್ವಾಭಿಮಾನ, ಗೌರವಕ್ಕಾಗಿ ಕಾಂಗ್ರೆಸ್ ಗೆ ಹೋಗಿದ್ದೇನೆ ಹೊರತು ಅಧಿಕಾರದ ಲಾಲಸೆಗಾಗಿ ಅಲ್ಲ ಎಂದರು.