Advertisement
ಜನತಂತ್ರ ವ್ಯವಸ್ಥೆಯಲ್ಲಿ ಪ್ರತೀ ಓಟಿಗೂ ಮೌಲ್ಯವಿದೆ. ಅಭ್ಯರ್ಥಿ ಗಳ ಸೋಲು-ಗೆಲುವು ನಿರ್ಧರಿಸುವುದೂ ಪ್ರತೀ ಮತಗಳು. ರಾಜಕೀಯ ಲೆಕ್ಕಾಚಾರಗಳನ್ನು ಬುಡಮೇಲು ಗೊಳಿಸಿ ಅಚ್ಚರಿ ಮತ್ತು ಆಘಾತದ ಫಲಿತಾಂಶ ನೀಡುವ ಶಕ್ತಿ ಇರುವುದೂ ಇದೇ ಮತಗಳಿಗೆ. ಈ ಬಾರಿ ಕಾರ್ಕಳ ಕ್ಷೇತ್ರದಲ್ಲಿ ಪಕ್ಷಗಳ ಮಧ್ಯೆ ತುಸು ಕಠಿನ ಸ್ಪರ್ಧೆ ಇದೆ. ಹಾಗಾಗಿ ವಿವಿಧ ಪಕ್ಷಗಳ ಮುಖಂಡರು, ಕಾರ್ಯಕರ್ತರ ಮತ ಬೇಟೆಯೂ ಅಷ್ಟೇ ಪೈಪೋಟಿಯಿಂದ ಚಾಲ್ತಿಯಲ್ಲಿದೆ.
ರುವ ಕಾರ್ಕಳದ ಮೂಲದವರಿಗೆ ನಿರಂತರ ಮೊಬೈಲ್ ಕರೆಗಳು ಹೋಗುತ್ತಿವೆ. ಈ ಮಾತು ಬರೀ ಕಾರ್ಕಳಕ್ಕಲ್ಲ, ಎಲ್ಲ ಕ್ಷೇತ್ರಗಳಲ್ಲಿಯೂ ಈ ಕಾರ್ಯಾಚರಣೆ ಆರಂಭವಾಗಿದೆ.
Related Articles
ಒಂದು ವೇಳೆ ಹೊರಗಿದ್ದು ಇದೇ ಕ್ಷೇತ್ರದ ಬೂತ್‌ನಲ್ಲಿ ಮತ ಮಾಡು ವುದಿದ್ದರೆ ಅವರನ್ನು ಮತದಾನ ದಿನ ಕರೆಯಿಸುವ ಎಲ್ಲ ಪ್ರಯತ್ನಗಳು ಬೆಂಬಲಿಗರಿಂದ ನಡೆಯುತ್ತದೆ. ಮತದಾನ ದಿನ ಕ್ಷೇತ್ರಕ್ಕೆ ಆಗಮಿಸಲು ಬಸ್, ಇನ್ನಿತರ ವಾಹನ ವ್ಯವಸ್ಥೆ ಕಲ್ಪಿಸಲೂ ಪಕ್ಷಗಳು ಏಜೆಂಟರನ್ನು ನೇಮಿಸಿಕೊಂಡಿದ್ದಾರೆ. ಆ ಏಜೆಂಟರು ಈ ಮತದಾರರ ಹೋಗುವುದು ಮತ್ತು ಬರುವುದರ ಪ್ರಯಾಣ ವ್ಯವಸ್ಥೆ ಮಾಡುತ್ತಾರೆ.
Advertisement
ಮುಂಬಯಿ, ಪುಣೆ, ಬೆಂಗಳೂರು ಮುಂತಾದ ಕಡೆ ಕಾರ್ಕಳ ಕ್ಷೇತ್ರದವರು ಅತೀ ಹೆಚ್ಚು ಮಂದಿ ಉದ್ಯೋಗ, ಉದ್ದಿಮೆ ಇನ್ನಿತರ ಕ್ಷೇತ್ರಗಳಲ್ಲಿ ತೊಡಗಿದ್ದಾರೆ. ಪ್ರತೀ ಮತದಾರರನ್ನು ಕರೆಸುವ ವ್ಯವಸ್ಥೆ ಪಕ್ಷಗಳು ಸದ್ದಿಲ್ಲದೇ ಮಾಡುತ್ತಿವೆ. ಇದರಲ್ಲಿ ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷಗಳು ಮುಂದಿವೆ. ಅಚ್ಚರಿ, ಅಘಾತದ ಫಲಿತಾಂಶ
ದೇಶ ಮತ್ತು ರಾಜ್ಯದ ಚುನಾವಣ ಇತಿಹಾಸದಲ್ಲಿ ಓಟುಗಳು ಅಚ್ಚರಿ ಮತ್ತು ಆಘಾತದ ಫಲಿತಾಂಶ ಕೊಟ್ಟ ಅನೇಕ ಉದಾಹರಣೆ ಗಳಿವೆ. ಕೇವಲ ಒಂದು ಮತದಿಂದ ಸೋತವರು, ಅತೀ ಕಡಿಮೆ ಅಂತರದಿಂದ ಗೆದ್ದವರ ಕಥೆ ಮತ್ತು ವ್ಯಥೆಗೆ ಸುದೀರ್ಘ ಇತಿಹಾಸವಿದೆ. ಹೀಗಾಗಿ ಈ ವಿಧಾನ ಸಭಾ ಚುನಾವಣೆಯಲ್ಲೂ ಪ್ರತೀ ಮತಕ್ಕೂ ಸಾಕಷ್ಟು ಬೆಲೆ ಬರುತ್ತಿದೆ. ಒಂದು ಮತದ ಕಥೆ
2004ರಲ್ಲಿಚಾಮರಾಜನಗರ ಜಿಲ್ಲೆಯ ಸಂತೆಮರಹಳ್ಳಿ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಕೇವಲ ಒಂದು ಮತದಿಂದ ಸೋತ ಎ.ಆರ್. ಕೃಷ್ಣಮೂರ್ತಿ ಇತಿಹಾಸ ಬರೆದು ಬಿಟ್ಟರು. ಕಾಂಗ್ರೆಸ್‌ನಿಂದ ಗೆದ್ದ ಆರ್.ಧ್ರುವನಾರಾಯಣ 40,752 ಮತಗಳನ್ನು ಪಡೆದಿದ್ದರೆ, ಕೃಷ್ಣಮೂರ್ತಿ 40,751 ಓಟುಗಳನ್ನು ಪಡೆದು ಕೇವಲ ಒಂದು ಓಟಿನ ಅಂತರದಿಂದ ಸೋತಿದ್ದರು. ವಿಪರ್ಯಾಸವೆಂದರೆ ಆ ದಿನ ಅವರ ವಾಹನ ಚಾಲಕ ಮತ ಚಲಾವಣೆ ಮಾಡಿರಲಿಲ್ಲ. 2008ರಲ್ಲಿ ರಾಜಸ್ಥಾನ ವಿಧಾನಸಭಾ ಚುನಾವಣೆ ಯಲ್ಲಿ ಸಿ.ಪಿ.ಜೋಶಿಯವರು ಮುಖ್ಯಮಂತ್ರಿ ಸ್ಥಾನದ ಪ್ರಬಲ ಅಭ್ಯರ್ಥಿಯಾಗಿದ್ದರು. ಜೋಶಿಯವರು ಕೇವಲ ಒಂದು ಓಟಿನಿಂದ ಬಿಜೆಪಿ ಅಭ್ಯರ್ಥಿ ಕಲ್ಯಾಣ್ ಸಿಂಗ್ ಚೌಹಾಣ್ ವಿರುದ್ಧ ಸೋತಿದ್ದರು. ಜೋಶಿಯವರ ಪತ್ನಿ, ಮಗಳು ಹಾಗೂ ವಾಹನ ಚಾಲಕ ದೇವಸ್ಥಾನಕ್ಕೆ ಹೋಗಿದ್ದರು. ಮತ ಚಲಾಯಿಸಿರಲಿಲ್ಲ. ಹೀಗೆ ಒಂದು ಮತದ ಅಂತರದಿಂದ ಸೋತ ಅನೇಕ ದೃಷ್ಟಾಂತಗಳು ಹಿಂದಿನ ಎಲ್ಲ ವಿಧಾನಸಭಾ, ಲೋಕಸಭಾ ಚುನಾವಣೆಗಳಲ್ಲಿ ನಮಗೆ ಕಾಣಸಿಗುತ್ತವೆ. ಇದೇ ಕಾರಣಕ್ಕೆ ಒಂದು ಮತ ಎಂದು ನಿರ್ಲಕ್ಷ ವಹಿಸುವಂತಿಲ್ಲ. ಇದು ಎಲ್ಲ ಅಭ್ಯರ್ಥಿಗಳ ಮನಸ್ಸಿನಲ್ಲಿ ಇರುವುದರಿಂದ ಒಂದು ಮತಕ್ಕೂ ಈಗ ಮೌಲ್ಯ ಇದೆ ಎನ್ನುವ ಅರಿವು ಅಭ್ಯರ್ಥಿಗಳಿಗೆ ತಿಳಿದಿದೆ. ಅದಕ್ಕೇ ಎಲ್ಲರನ್ನೂ ಕರೆತರುವ ಕಸರತ್ತು ಚಾಲ್ತಿಯಲ್ಲಿದೆ. – ಬಾಲಕೃಷ್ಣ ಭೀಮಗುಳಿ