Advertisement
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಚುನಾವಣೆ ಪ್ರಣಾಳಿಕೆ ಅಂಶಗಳನ್ನು ಉಲ್ಲೇಖಿಸಿ ಮಾತನಾಡಿದ ಅರುಣಸಿಂಗ್, ಬಿಜೆಪಿ ಸರ್ಕಾರ ರೂಪಿಸುವ ಎಲ್ಲ ಸೌಲಭ್ಯಗಳನ್ನು ವರ್ಗಬೇಧ ಮಾಡದೇ ಎಲ್ಲರಿಗೂ ಕಲ್ಪಿಸುತ್ತಿದೆ. ಚುನಾವಣೆ ವಿಷಯ ಬಂದಾಗ ಬಿಜೆಪಿ ಪಕ್ಷದಲ್ಲಿ ಅಲ್ಪಸಂಖ್ಯಾತ ಮುಸ್ಲೀಂ ನಾಯಕತ್ವ ಚುನಾವಣೆಗೆ ಟಿಕೆಟ್ ಪಡೆಯುವಷ್ಟು, ಗೆಲ್ಲುವಲ್ಲಿ ಬಲಿಷ್ಠವಾಗಬೇಕಿದೆ ಎಂದರು.
Related Articles
Advertisement
ಕೊಟ್ಟ ಭರವಸೆ ಈಡೇರಿಸದ ಕಾರಣಕ್ಕೆ ಉತ್ತರ ಪ್ರದೇಶ, ಗೋವಾ, ಆಸ್ಸಾಂ ಹೀಗೆ ದೇಶದ ಎಲ್ಲ ರಾಜ್ಯಗಳಲ್ಲಿ ಕಾಂಗ್ರೆಸ್ ಕಾಂಗ್ರೆಸ್ ತಿರಸ್ಕøತವಾಗಿದೆ. ಕರ್ನಾಟಕ ರಾಜ್ಯದಲ್ಲೂ ಕಾಂಗ್ರೆಸ್ ಇದೇ ಸ್ಥಿತಿ ಬರಲಿದೆ. ಸ್ಪಷ್ಟ ದೃಷ್ಟಿಕೋನವೇ ಇಲ್ಲದ ಪಕ್ಷ ಜೆಡಿಎಸ್ ಎಂದು ಟೀಕಿಸಿದರು.
ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೇ ಕಪ್ಪು ಹಣದ ವಿರುದ್ಧ ಮೊದಲ ದಿನದಿಂದಲೇ ಕಾರ್ಯಪ್ರವೃತ್ತವಾಗಿದೆ. ಅನಧಿಕೃತವಾಗಿ ವಿದೇಶದಲ್ಲಿ ಕಪ್ಪು ಹಣ ಕೂಡಿಟ್ಟವರ ಮೇಲೆ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಮೊದಲ ಸಚಿವ ಸಂಪುಟದಲ್ಲೇ ಈ ಬಗ್ಗೆ ಕಠಿಣ ನಿರ್ಧಾರ ಮಾಡಲಾಗಿದೆ. ಆದರೆ ಕಪ್ಪು ಹಣ ಹೊಂದಿದ ಅನೇಕ ಹಿರಿಯ ಕಾಂಗ್ರೆಸ್ ನಾಯಕರು ಈ ಸಮರದ ವಿರುದ್ಧ ಆಕ್ಷೇಪ ಎತ್ತುತ್ತಲೇ ಇದ್ದಾರೆ, ಆದರೂ ಸರ್ಕಾರ ತನ್ನ ಕೆಲಸ ಮಾಡುತ್ತಿದೆ ಎಂದು ಸಮಜಾಯಿಷಿ ನೀಡಿದರು.
ಸಂಸದ ರಮೇಶ ಜಿಗಜಿಣಗಿ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕುಚಬಾಳ, ಜಿಲ್ಲಾ ವಕ್ತಾರ ಡಾ.ಸುರೇಶ ಬಿರಾದಾರ, ಮಲ್ಲಿಕಾರ್ಜುನ ಜೋಗೂರ, ಸಂಜಯ ಪಾಟೀಲ ಕನಮಡಿ, ವಿವೇಕಾನಂದ ಡಬ್ಬಿ, ವಿಜಯ ಜೋಶಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನು ವಿಷಕನ್ಯೆ ಎಂದು ಹೇಳಿರುವುದು ಸರಿಯಲ್ಲ. ಇದರ ಜೊತೆಗೆ ಕಾಂಗ್ರೆಸ್ ನಾಯಕರು ಬಿಜೆಪಿ ನಾಯಕರ ಬಗ್ಗೆ ಅತ್ಯಂತ ಕೀಳುಮಟ್ಟದ ಶಬ್ದ ಪ್ರಯೋಗಿಸಿ ಪ್ರಚೋದನೆ ಮಾಡುತ್ತಿರುವ ಕ್ರಮವೂ ಸರಿಯಲ್ಲ. ಕಾಂಗ್ರೆಸ್ ನಾಯಕರು ಬಿಜೆಪಿ ನಾಯಕರ ಬಗ್ಗೆ ಕೀಳುಮಟ್ಟದ ಹೇಳಿಕೆ ನೀಡುವುದನ್ನು, ಶಬ್ದ ಪ್ರಯೋಗ ಬಿಡಬೇಕು. ಇಂಥ ವತರ್ಗನೆಗೆ ತೆರೆ ಎಳೆಯಬೇಕು.– ಅರುಣಸಿಂಗ್, ರಾಜ್ಯ ಉಸ್ತುವಾರಿ ಕರ್ನಾಟಕ-ಬಿಜೆಪಿ ಇದನ್ನೂ ಓದಿ: ವಾಡಿ: ಮಾವನ ಕೊರಳಿಗೆ ಬಿಜೆಪಿ ಶಾಲು… ಆಕ್ರೋಶ ಹೊರಹಾಕಿದ ಸೊಸೆ