Advertisement
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ಕ್ಷೇತ್ರದ ಅಂಚೆ ಮತಗಳ ಎಣಿಕೆಗೆ ಪ್ರತ್ಯೇಕ ತಲಾ 4 ಟೇಬಲ್ ಹಾಗೂ ಇವಿಎಂ ಮತ ಎಣಿಕೆಗೆ ತಲಾ 14 ಟೇಬಲ್‌ಗಳನ್ನು ಒದಗಿಸಲಾಗಿದೆ. ಬೈಂದೂರು ಕ್ಷೇತ್ರದ ಮತ ಎಣಿಕೆ 18 ಸುತ್ತಿನಲ್ಲಿ ನಡೆದರೆ, ಕುಂದಾಪುರ 16, ಉಡುಪಿ 17 ಹಾಗೂ ಕಾಪು ಮತ್ತು ಕಾರ್ಕಳ ತಲಾ 15 ಸುತ್ತಿನಲ್ಲಿ ನಡೆಯಲಿದೆ. ಇದಕ್ಕಾಗಿ 375 ಅಧಿಕಾರಿ ಹಾಗೂ ಸಿಬಂದಿ ನಿಯೋಜಿಸಲಾಗಿದೆ ಎಂದರು.
ಎಣಿಕೆ ಕೇಂದ್ರದಲ್ಲಿ ಚುನಾವಣಾ ಧಿಕಾರಿಗಳನ್ನು ಹೊರತುಪಡಿಸಿ ಬೇರೆ ಯಾರಿಗೂ ಮೊಬೈಲ್ ಸಹಿತ ಯಾವುದೇ ಎಲೆಕ್ಟ್ರಾನಿಕ್‌ಉಪಕರಣ ಬಳಕೆಗೆ ಅವಕಾಶ ಇಲ್ಲ. ಮೊಬೈಲ್‌ಗಳನ್ನು ತಪಾಸಣೆ ವೇಳೆಯೆ ನೀಡಬೇಕು. ಮತ ಎಣಿಕೆ ಪರಿಶೀಲನೆಗೆ ಪ್ರತಿಯೊಬ್ಬ ಅಭ್ಯರ್ಥಿಗಳಿಗೆ ಮೇಜಿಗೆ ತಲಾ ಒಬ್ಬರು ಏಜೆಂಟರನ್ನು ನೇಮಿಸಿ ಕೊಳ್ಳಬಹುದು. ಎಲ್ಲ ಕಡೆಗ ಳಲ್ಲೂ ಸಿಸಿಟಿವಿ ಅಳವಡಿಸಲಾಗಿದೆ ಎಂದರು. ಭದ್ರತೆ ದೃಷ್ಟಿಯಿಂದ ಪೊಲೀಸ್ ಕಂಟ್ರೋಲ್ ರೂಂ ವ್ಯವಸ್ಥೆ ಮಾಡಲಾಗಿದೆ. ಮತ ಎಣಿಕೆ ಕೇಂದ್ರಕ್ಕೆ ಚುನಾವಣಾಧಿಕಾರಿಯಿಂದ ನೀಡಲಾದ ಅಧಿಕೃತ ಗುರುತಿನ ಚೀಟಿ ಇದ್ದಲ್ಲಿ ಮಾತ್ರ ಪ್ರವೇಶ. ಮೊಬೈಲ್, ಬೀಡಿ, ಸಿಗರೇಟ್, ಬೆಂಕಿಪೊಟ್ಟಣ, ಕತ್ತರಿ, ಬ್ಲೇಡ್, ಸಿಗಾರ್‌ಲೈಟ್‌ಗಳನ್ನು ಕೊಂಡೊಯ್ಯುವಂತಿಲ್ಲ. ಎಣಿಕೆ ಕೇಂದ್ರದ 100 ಮೀಟರ್ ಸುತ್ತಲೂ ವಾಹನ ಸಂಚಾರ ರಹಿತ ಪಾದಚಾರಿಗಳ ವಲಯ ಎಂದು ಗುರುತಿಸಲಾಗಿದೆ ಎಂದರು. ಫಲಿತಾಂಶ ಘೋಷಣೆ ವ್ಯವಸ್ಥೆ
ಎಣಿಕೆ ಕೇಂದ್ರದ ಪ್ರತಿ ಕೊಠಡಿಯಲ್ಲಿ ಪ್ರತಿ ಸುತ್ತಿನ ಎಣಿಕೆ ಮುಗಿದ ಕೂಡಲೇ ಕ್ಷೇತ್ರವಾರು ಅಭ್ಯರ್ಥಿಗಳು ಗಳಿಸಿದ ಮತಗಳ ವಿವರಗಳನ್ನು ಚುನಾವಣಾಧಿಕಾರಿ ಹಾಗೂ ಚುನಾವಣ ವೀಕ್ಷಕರ ಅನುಮೋದನೆ ಯೊಂದಿಗೆ ಕೊಠಡಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗುತ್ತದೆ. ಐದು ಕ್ಷೇತ್ರದಿಂದ ಪ್ರತಿ ಸುತ್ತಿನಲ್ಲಿ ಅಭ್ಯರ್ಥಿಗಳು ಗಳಿಸಿದ ಮತಗಳ ವಿವರವನ್ನು ಧ್ವನಿವರ್ಧಕದ ಮೂಲಕ ಘೋಷಿಸಲಾಗುತ್ತದೆ ಎಂದರು.
Related Articles
Advertisement