Advertisement

Affidavit;ಎಸ್‌. ಮಲ್ಲಿಕಾರ್ಜುನ್‌ 152 ಕೋಟಿ ಒಡೆಯ; ಸುಧಾಕರ್‌ ಕೈಯಲ್ಲಿ 10,600 ರೂ. ನಗದು

11:50 AM Apr 14, 2023 | Team Udayavani |

ದಾವಣಗೆರೆ: ದಾವಣಗೆರೆ ಉತ್ತರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ, ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ 152.72 ಕೋಟಿ ಒಡೆಯ. ಕೊಡಗು ಜಿಲ್ಲೆಯ ಭಾಗಮಂಡಲದ ಬಳಿ 216.03 ಎಕರೆ ಒಳಗೊಂಡಂತೆ ಒಟ್ಟು 226.03 ಎಕರೆ ಕೃಷಿಭೂಮಿ ಹೊಂದಿದ್ದಾರೆ.

Advertisement

ಗುರುವಾರ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಿಂದ ಸಲ್ಲಿಸಿದ ನಾಮಪತ್ರದೊಂದಿಗೆ ತಮ್ಮ ಹಾಗೂ ಪತ್ನಿ ಡಾ| ಪ್ರಭಾ ಮಲ್ಲಿಕಾರ್ಜುನ್‌ ಆಸ್ತಿ ವಿವರ ನೀಡಿದ್ದಾರೆ. 102 ಕೋಟಿ ಮೌಲ್ಯದ ಒಡೆಯರಾಗಿರುವ ಮಲ್ಲಿಕಾರ್ಜುನ್‌, 23 ಕೋಟಿ ರೂ. ಸಾಲ ಸಹ ಹೊಂದಿದ್ದಾರೆ. ಒಟ್ಟು ಅವರಲ್ಲಿ 170.80 ಕ್ಯಾರೆಟ್‌ ವಜ್ರ, 16545. 298 ಗ್ರಾಂ ಚಿನ್ನಾಭರಣ, 628407.500 ಗ್ರಾಂ ಬೆಳ್ಳಿ ಆಭರಣ, 757 ಗ್ರಾಂ ಇತರೆ ಆಭರಣ ಸೇರಿ ಒಟ್ಟು 15,13,35,646 ರೂ. ಮೌಲ್ಯದ ಆಭರಣ ಹೊಂದಿದ್ದಾರೆ.

ಮಲ್ಲಿಕಾರ್ಜುನ್‌ ಕೈಯಲ್ಲಿ 3,66,033 ರೂ. ನಗದು ಇದ್ದರೆ, ಡಾ| ಪ್ರಭಾ ಮಲ್ಲಿಕಾರ್ಜುನ್‌ ಕೈಯಲ್ಲಿ 34,407 ರೂ. ನಗದು ಇದೆ. ಮಲ್ಲಿಕಾರ್ಜುನ್‌ 23 ಎಕರೆ ಕೃಷಿಯೇತರ, 28,600 ಚದರ ಅಡಿ ವಾಸದ ಮನೆ, 451570 ಚದರ ಅಡಿ ವಾಣಿಜ್ಯ ಮಳಿಗೆ ಇವೆ. ದಾವಣಗೆರೆಯ ಎಂಎಸ್‌ಬಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ 1990ರಲ್ಲಿ ಬಿಕಾಂ ಪೂರೈಸಿರುವುದಾಗಿ ತಮ್ಮ ಶೈಕ್ಷಣಿಕ ಅರ್ಹತೆ ವಿವರ ನೀಡಿದ್ದಾರೆ.

ಸುಧಾಕರ್‌ ಕೈಯಲ್ಲಿ 10,600 ರೂ. ನಗದು
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಿಂದ ನಾಲ್ಕನೇ ಬಾರಿಗೆ ಶಾಸಕರಾಗಲು ಗುರುವಾರ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿರುವ ಸಚಿವ ಡಾ.ಕೆ.ಸುಧಾಕರ್‌, ಆಯೋಗಕ್ಕೆ ತಮ್ಮ ಆಸ್ತಿ ವಿವರ ಸಲ್ಲಿಸಿದ್ದು ಸುಧಾಕರ್‌ಗಿಂತ ಅವರ ಪತ್ನಿ ಡಾ.ಪ್ರೀತಿ ಸುಧಾಕರ್‌ ಹೆಚ್ಚು ಸಿರಿವಂತೆ ಆಗಿದ್ದಾರೆ.

ಸುಧಾಕರ್‌ ಕೈಯಲ್ಲಿ ಬರೀ 10, 600 ರೂ.ನಗದು ಇದ್ದರೆ ಅವರ ಪತ್ನಿ ಕೈಯಲ್ಲಿ 5.10 ಲಕ್ಷ ರೂ. ಇದೆ. ಸುಧಾಕರ್‌ ಬ್ಯಾಂಕ್‌ ಖಾತೆಗಳಲ್ಲಿ 71.81 ಲಕ್ಷ ಇದ್ದರೆ, ಪತ್ನಿ ಪ್ರೀತಿ ಖಾತೆಯಲ್ಲಿ 10.96 ಲಕ್ಷ ರೂ.ಇದೆ. ಸುಧಾಕರ್‌ ಬಳಿ ಒಟ್ಟು 160 ಗ್ರಾಂ ಚಿನ್ನ, ಬೆಳ್ಳಿ 9 ಕೆಜಿ ಇದೆ. ಪತ್ನಿ ಬಳಿ 1 ಕೆಜಿ ಬಂಗಾರ, 4 ವಜ್ರ ಇದೆ. 21 ಕೆಜಿ ಬೆಳ್ಳಿ ಇದೆ. ಸುಧಾಕರ್‌ ಬಳಿ 2.79 ಕೋಟಿ, ಪತ್ನಿ ಬಳಿ 6.59 ಕೋಟಿ ಮೌಲ್ಯದ ಚರಾಸ್ತಿ ಇದೆ.

Advertisement

ಸುಧಾಕರ್‌ಗೆ ಪೆರೇಸಂದ್ರದಲ್ಲಿ 1.15 ಕೋಟಿ ಬೆಲೆ ಬಾಳುವ ಮನೆ ಇದೆ. ಪತ್ನಿ ಬಳಿ ಬೆಂಗಳೂರಿನ ಸದಾಶಿವನಗರದಲ್ಲಿ 14.92 ಕೋಟಿ ಮೌಲ್ಯದ ವಸತಿ ಕಟ್ಟಡ ಇದೆ. ಬೆಂಗಳೂರಿನ ಹೆಬ್ಟಾಳ ಕೆನರಾ ಬ್ಯಾಂಕ್‌ ಶಾಖೆಯಲ್ಲಿ ಸುಧಾಕರ್‌ 93.92 ಲಕ್ಷ ಸಾಲ ಮಾಡಿದ್ದಾರೆ. ಪ್ರೀತಿ ಜಿ.ಎ. ಎಂಬುವರಿಗೆ 40.33 ಲಕ್ಷ ಸಾಲ ಸೇರಿ ಒಟ್ಟು 1.61 ಕೋಟಿ ಸಾಲ ತೀರಿಸಬೇಕಿದೆ. ಶಿವನ್‌ ಎಂಬುವರಿಗೆ 10 ಕೋಟಿ ಸಾಲ ಸೇರಿ ಒಟ್ಟು 19 ಕೊಟಿ ಸಾಲ ತೀರಿಸಬೇಕೆಂದು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣದಲ್ಲಿ ತಿಳಿಸಿದ್ದಾರೆ.

ಸಿದ್ದು ಸವದಿ, ಪತ್ನಿ, ಮಕ್ಕಳೆಲ್ಲರೂ ಕೋಟ್ಯಧೀಶರು
ರಬಕವಿ-ಬನಹಟ್ಟಿ: ತೇರದಾಳ ಶಾಸಕ ಸಿದ್ದು ಸವದಿ 1,73,06,180 ಮೌಲ್ಯದ ಚರಾಸ್ತಿ ಮತ್ತು 2,57,11,850 ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಪತ್ನಿ ಮೀನಾಕ್ಷಿ 28,67,515 ರೂ. ಚರಾಸ್ತಿ, 1.6 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಪುತ್ರರಾದ ವಿಶ್ವನಾಥ 1,04,82,132 ಮೌಲ್ಯದ ಚರಾಸ್ತಿ, 3,70,00,901 ಮೌಲ್ಯದ ಸ್ಥಿರಾಸ್ತಿ ಹೊಂದಿದ್ದರೆ, ವಿದ್ಯಾಧರ 63,67,295 ಮೌಲ್ಯದ ಚರಾಸ್ತಿ ಹಾಗೂ 1,86,40,940 ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಸಿದ್ದು ಸವದಿ 99,47,889 ರೂ. ಸಾಲ ಹೊಂದಿದ್ದರೆ, ಪತ್ನಿ ಮೀನಾಕ್ಷಿ 99,85,139 ರೂ., ವಿಶ್ವನಾಥ 2,45,61,048, 1,23,20,520 ರೂ. ಸಾಲ ಹೊಂದಿದ್ದಾರೆ ಎಂದು ಪ್ರಮಾಣ ಪತ್ರದಲ್ಲಿ ತಿಳಿಸಿದ್ದಾರೆ.

ನಿರಾಣಿಗಿಂತ ಪತ್ನಿ ಕಮಲಾ ಶ್ರೀಮಂತೆ
ಬಾಗಲಕೋಟೆ: ಜಿಲ್ಲೆಯ ಬೀಳಗಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಸಚಿವ ಮುರುಗೇಶ ನಿರಾಣಿ ಅವರಿಗಿಂತ ಪತ್ನಿ ಕಮಲಾ ನಿರಾಣಿ ಆಸ್ತಿ ಹಾಗೂ ಸಾಲ ಹೆಚ್ಚಿದೆ. ಮುರುಗೇಶ ನಿರಾಣಿ 35.82 ಕೋಟಿ ರೂ. (ಚರ 27.22 ಕೋಟಿ, ಸ್ಥಿರ 8.60 ಕೋಟಿ) ಆಸ್ತಿ ಹೊಂದಿದ್ದಾರೆ. 2018ರಲ್ಲಿ 20.58 ಕೋಟಿ ರೂ.ಆಸ್ತಿ ಹೊಂದಿದ್ದು, ಈಗ ಶೇ.74ರಷ್ಟು ಹೆಚ್ಚಳವಾಗಿದೆ. ಈಗ 22.62 ಕೋಟಿ ರೂ. ಸಾಲ ಹೊಂದಿದ್ದು, 2018ರಲ್ಲಿ 8.60 ಕೋಟಿ ರೂ. ಸಾಲ ಹೊಂದಿದ್ದರು. ಸಾಲದ ಪ್ರಮಾಣದಲ್ಲಿ ಶೇ.163ರಷ್ಟು ಹೆಚ್ಚಾಗಿದೆ. ಇನ್ನು ನಿರಾಣಿ ಅವರ ಪತ್ನಿ ಕಮಲಾ ನಿರಾಣಿ 62.2 ಕೋಟಿ ರೂ. ಆಸ್ತಿ (ಚರ 38.35 ಕೋಟಿ, ಸ್ಥಿರ 23.85 ಕೋಟಿ) ಆಸ್ತಿ ಹೊಂದಿದ್ದಾರೆ. 47.56 ಕೋಟಿ ರೂ. ಸಾಲವಿದೆ. ಚರ ಆಸ್ತಿ ಲೆಕ್ಕದಲ್ಲಿಯೇ ನಿರಾಣಿ 350 ಗ್ರಾಂ ಹಾಗೂ ಕಮಲ ನಿರಾಣಿ 1150 ಗ್ರಾಂ ಚಿನ್ನಾಭರಣ ಹೊಂದಿದ್ದಾರೆ. ನಿರಾಣಿ ಹೆಸರಿನಲ್ಲಿ ಎರಡು ವಾಹನಗಳಿದ್ದರೆ, ಅವರ ಪತ್ನಿ ಹೆಸರಿನಲ್ಲಿ ಒಂದು ವಾಹನವಿದೆ.

Advertisement

Udayavani is now on Telegram. Click here to join our channel and stay updated with the latest news.

Next