Advertisement

ಮೇಲ್ಮನೆಗೆ ಜಟಾಪಟಿ ಆರಂಭ

10:08 AM Feb 25, 2020 | sudhir |

ಬೆಂಗಳೂರು: ಜೂನ್‌ನಲ್ಲಿ ಖಾಲಿಯಾಗುವ ವಿಧಾನ ಪರಿಷತ್‌ ಸ್ಥಾನಗಳಿಗಾಗಿ ಮೂರು ಪಕ್ಷಗಳ ಆಕಾಂಕ್ಷಿಗಳು ಈಗಿನಿಂದಲೇ ತೆರೆಮರೆಯ ಕಸರತ್ತು ಆರಂಭಿಸಿದ್ದಾರೆ. ಕಾಂಗ್ರೆಸ್‌ 10 ಸ್ಥಾನಗಳನ್ನು ಕಳೆದುಕೊಳ್ಳಲಿದ್ದು, ಬಿಜೆಪಿಗೆ 9 ಸ್ಥಾನಗಳು ಅನಾಯಾಸವಾಗಿ ಸಿಗಲಿರುವುದ ರಿಂದ ಜೂನ್‌ ಅನಂತರ ಮೇಲ್ಮನೆ ಲೆಕ್ಕಾಚಾರವೂ ಬದಲಾಗುವ ಸಾಧ್ಯತೆಯಿದೆ.

Advertisement

ಈ ವರ್ಷದ ಜೂನ್‌ ಮಾಸಾಂತ್ಯಕ್ಕೆ ವಿಧಾನ ಪರಿಷತ್‌ನಲ್ಲಿ 16 ಸ್ಥಾನಗಳು ಖಾಲಿಯಾಗಲಿವೆ. ವಿಧಾನ ಸಭೆಯಿಂದ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಯ 7 ಸ್ಥಾನಗಳು, ರಾಜ್ಯಪಾಲರಿಂದ ನಾಮನಿರ್ದೇಶನಗೊಳ್ಳುವ 5 ಸ್ಥಾನಗಳು, ಎರಡು ಪದವೀಧರ ಮತ್ತು ಎರಡು ಶಿಕ್ಷಕರ ಕ್ಷೇತ್ರಗಳು ಖಾಲಿಯಾಗಲಿದ್ದು, ಜೂನ್‌ನಲ್ಲಿ ಚುನಾವಣೆ ನಡೆಯಲಿದೆ.

ಸದ್ಯದ ವಿಧಾನಸಭೆಯಲ್ಲಿ ಪಕ್ಷಗಳ ಬಲಾಬಲದ ಆಧಾರದಲ್ಲಿ ಏಳು ಸ್ಥಾನಗಳಲ್ಲಿ ಆಡಳಿತ ಪಕ್ಷ ಬಿಜೆಪಿಗೆ 4, ಕಾಂಗ್ರೆಸ್‌ಗೆ 2 ಮತ್ತು ಜೆಡಿಎಸ್‌ಗೆ ಒಂದು ಸ್ಥಾನ ಲಭಿಸಲಿವೆ. ವಿಧಾನ ಸಭೆಯಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಗೆ ಪ್ರಮುಖವಾಗಿ ವಲಸಿಗರಾದ ಎಚ್‌. ವಿಶ್ವನಾಥ್‌, ಎಂ.ಟಿ.ಬಿ. ನಾಗರಾಜ್‌ ಮತ್ತು ಆರ್‌. ಶಂಕರ್‌ ಕಣ್ಣಿಟ್ಟಿದ್ದಾರೆ.

ನಾಮನಿರ್ದೇಶನದ ಐದೂ ಸ್ಥಾನಗಳು ಆಡಳಿತ ಪಕ್ಷ ಬಿಜೆಪಿಗೆ ಲಭಿಸುವುದರಿಂದ ಜೂನ್‌ ವೇಳೆಗೆ ಅದು ಒಂಬತ್ತು ಸದಸ್ಯರನ್ನು ಹೆಚ್ಚುವರಿಯಾಗಿ ಹೊಂದಲಿದೆ.

Advertisement

Udayavani is now on Telegram. Click here to join our channel and stay updated with the latest news.

Next