Advertisement

ಮಾನಸಿಕ ಅಸ್ವಸ್ಥೆ ಮೇಲೆ ತುಮಕೂರು ಎಎಸ್ಐಯಿಂದಲೇ ರೇಪ್, ಅರೆಸ್ಟ್

12:23 PM Jan 16, 2017 | Team Udayavani |

ಬೆಂಗಳೂರು : ತುಮಕೂರು ಜಿಲ್ಲೆಯಲ್ಲಿ ದಿವ್ಯಾಂಗ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ 50 ವರ್ಷ ಪ್ರಾಯದ ಅಸಿಸ್ಟೆಂಟ್‌ ಸಬ್‌ ಇನ್ಸ್‌ಪೆಕ್ಟರ್‌ ಓರ್ವರನ್ನು ಇಂದು ಸೋಮವಾರ ಬಂಧಿಸಲಾಗಿದೆ.

Advertisement

ಚಿತ್ತ ವೈಕಲ್ಯ ಹೊಂದಿದ್ದ ಮಹಿಳೆಯು ನಿನ್ನೆ ಭಾನುವಾರ ತನ್ನ ಮನೆಯಿಂದ ಹೊರಗೆ ಹೋಗಿದ್ದು ಹಾದಿ ತಪ್ಪಿದ ಕಾರಣ ಮನೆಗೆ ವಾಪಸ್‌ ಬರಲು ಆಕೆಗೆ ಸಾಧ್ಯವಾಗಿರಲಿಲ್ಲ. ಆಕೆಯನ್ನು ಮನೆಗೆ ತಲುಪಿಸುವುದಾಗಿ ಹೇಳಿ ತಮ್ಮ ವಾಹನ ಹತ್ತಿಸಿಕೊಂಡಿದ್ದ ಎಎಸ್‌ಐ ರಮೇಶ್‌ ಅವರು ತಮ್ಮ ಕಾರಿನಲ್ಲೇ ಆಕೆಯ ಮೇಲೆ ಅತ್ಯಾಚಾರ ಎಸಗಿದರು ಎಂದು ಆರೋಪಿಸಲಾಗಿದೆ.

ರೇಪ್‌ ಸಂತ್ರಸ್ತೆಯು ಆರೋಪಿ ರಮೇಶ್‌ ಅವರನ್ನು ಗುರುತಿಸಿರುವ ಹಿನ್ನೆಲೆಯಲ್ಲಿ ಆತನನ್ನು ಅನಂತರ ತುಮಕೂರಿನಲ್ಲಿ ಬಂಧಿಸಲಾಯಿತು. ಆತನನ್ನು ಈಗ ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ.

ಈ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎನ್ನಲಾಗಿರುವ ಎಎಸ್‌ಐ ರಮೇಶ್‌ ಅವರ ಕಾರಿನ ಚಾಲಕನನ್ನು ಕೂಡ ಬಂಧಿಸಲಾಗಿದೆ ಎಂದು ಕರ್ನಾಟಕ ಸೆಂಟ್ರಲ್‌ ರೇಂಜ್‌ ಐಜಿಪಿ ಸೀಮಂತ ಕುಮಾರ್‌ ಸಿಂಗ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next