Advertisement
ಎಲ್ಲ ನಾಗರಿಕ ಸೇವೆಗಳನ್ನು ಒಂದೇ ಸೂರಿನಡಿ ನೀಡುವ ಉದ್ದೇಶದಿಂದ ರಾಜ್ಯ ಕರ್ನಾಟಕ ಒನ್ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ಈ ಕೇಂದ್ರದಲ್ಲಿ ವಿವಿಧ ಸರ್ಕಾರಿ ಮತ್ತು ಖಾಸಗಿ ಸೇವೆಗಳನ್ನು ಒಂದೇ ಸೂರಿನಡಿ ಪಡೆಯಬಹುದಾಗಿದೆ ಎಂದು ಮೇಯರ್ ಸಂಗೀತಾ ಹೇಳಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜಿಲ್ಲಾಧಿಕಾರಿ ಶಿವಕುಮಾರ ಮಾಹಿತಿ ನೀಡಿದರು. ಕರ್ನಾಟಕ ಒನ್ ಕೇಂದ್ರಗಳಲ್ಲಿ ವಿದ್ಯುತ್ ಬಿಲ್‌ಗಳ ಪಾವತಿ, ಹೆಚ್ಚುವರಿ ಭದ್ರತಾ ಠೇವಣಿ ಪಾವತಿ, ನೀರಿನ ಬಿಲ್ ಪಾವತಿ,
ಆಸ್ತಿ ತೆರಿಗೆ ಪಾವತಿ, ಸ್ವಯಂ ಆಸ್ತಿ ತೆರಿಗೆ ಪೂರ್ವ ಭರ್ತಿ ಮಾಡಿದ ಅರ್ಜಿಗಳನ್ನು ಮುದ್ರಿಸುವುದು, ಬಿಎಸ್‌ಎನ್‌ಎಲ್ ಲ್ಯಾಂಡ್ ಲೈನ್ ಬಿಲ್ ಪಾವತಿ, ಮೊಬೈಲ್ ಬಿಲ್ ಪಾವತಿ, ಪೊಲೀಸ್ ವೇರಿಫಿಕೇಶನ್/ಕ್ಲೀಯರೆನ್ಸ್, ಪ್ರಮಾಣ ಪತ್ರಕ್ಕಾಗಿ ಶುಲ್ಕ ಪಾವತಿ, ಧ್ವನಿವರ್ಧಕ ವ್ಯವಸ್ಥೆ ಅಳವಡಿಕೆ ಶುಲ್ಕ ಪಾವತಿ, ವಾಹನಗಳ ವಿಚಾರಣಾ ವರದಿಗಾಗಿ ಶುಲ್ಕ ಪಾವತಿ, ಪಿಯುಸಿ ಉತ್ತರ ಪತ್ರಿಕೆ ಫೋಟೋಕಾಫಿ ಪ್ರತಿ, ಮರು ಎಣಿಕೆ ಅರ್ಜಿ, ಮರು ಮೌಲ್ಯಮಾಪನಕ್ಕಾಗಿ ಅರ್ಜಿ, ಪಿಯುಸಿ ಫಲಿತಾಂಶ, ಆಧಾರ್, ಪಡಿತರ ಚೀಟಿ, ಎಸ್ಸೆಸ್ಸೆಲ್ಸಿ ಉತ್ತರ ಪತ್ರಿಕೆ ನಕಲಿಗಾಗಿ ಅರ್ಜಿ, ಮರು ಎಣಿಕೆ, ಮೌಲ್ಯಮಾಪನ ಅರ್ಜಿ ಸೇರಿದಂತೆ ಇತರೆ ಸರ್ಕಾರಿ ಸೇವೆಗಳನ್ನು ಈ ಕೇಂದ್ರದಿಂದ ಪಡೆಯಬಹುದು ಎಂದು ಪಾಲಿಕೆ ಆಯುಕ್ತ ಹರ್ಷ ಶೆಟ್ಟಿ ವಿವರಿಸಿದರು.
Related Articles
ಟೆಲ್, ವೋಡಾಫೋನ್ ಮೊಬೈಲ್ ಬಿಲ್, ಎಕ್ಸೈಡ್ ಲೈಫ್ ಇನ್ಸೂರೆನ್ಸ್, ಜೀವ ವಿಮಾ ಕಂತು ಪಾವತಿ, ನಮಸ್ತೆ ಮೇಡಿಯಾ ಸರ್ಕಾರಿ ಉದ್ಯೋಗಗಳ ಮಾಹಿತಿಗಾಗಿ ನೋಂದಣಿ, ಐಡಿಯಾ ಮೊಬೈಲ್ ಬಿಲ್ಲ ಪಾವತಿ ಸಹ ಇದರಲ್ಲಿ ಲಭ್ಯವಾಗಲಿದೆ ಎಂದು ಕೇಂದ್ರ ಅಧಿಕಾರಿಗಳು ಮಾಹಿತಿ ನೀಡಿದರು.
Advertisement
ಪ್ರಸಕ್ತ ಆರ್ಥಿಕ ಸಾಲಿನಲ್ಲಿ ವಿಜಯಪುರ ಸೇರಿದಂತೆ ರಾಜ್ಯದ 18 ಜಿಲ್ಲಾ ಕೇಂದ್ರ ಸ್ಥಾನಗಳಲ್ಲಿ ಈ ಸೇವಾ ಕೇಂದ್ರ ತೆರೆಯಲಾಗಿದೆ. ವಿಜಯಪುರದ ಜನಲಗರದಲ್ಲಿರುವ ಮಹಾನಗರ ಪಾಲಿಕೆ ಕಟ್ಟಡದಲ್ಲಿ ಈ ಕೇಂದ್ರ ತೆರೆಯಲಾಗಿದೆ. ಸರ್ಕಾರಿ-ಖಾಸಗಿ ಸಹಭಾಗಿತ್ವದಲ್ಲಿ ಈ ಯೋಜನೆ ಅನುಷ್ಠಾನಕ್ಕೆ ತರಲಾಗುತ್ತಿದೆ. ಉಪ ಮೇಯರ್ ರಾಜೇಶ ದೇವಗಿರಿ, ಸದಸ್ಯರಾದ ಪ್ರೇಮಾನಂದ ಬಿರಾದಾರ, ಅಬ್ದುಲ್‌ರಜಾಕ್ ಹೊರ್ತಿ, ಸಜ್ಜಾದೆ ಪೀರಾ ಮುಶ್ರೀಫ್ ಸೇರಿದಂತೆ ಪಾಲಿಕೆ ಇತರೆ ಸದಸ್ಯರು ಇದ್ದರು.