ಹೈದರಾಬಾದ್: ಕೌಟುಂಬಿಕ ಸಾಲಬಾಧೆಯಿಂದ ನರಳುತ್ತಿರುವ ರಾಜ್ಯಗಳಲ್ಲಿ ಕರ್ನಾಟಕಕ್ಕೆ ನಂ. 1 ಸ್ಥಾನದ ಕುಖ್ಯಾತಿ ಸಿಕ್ಕಿದೆ! ಎಲ್‌ಎಎಸ್‌ಐ (ಲಾಂಗಿಟ್ಯೂಡಿನಲ್ ಏಜಿಂಗ್ ಸ್ಟಡಿ ಇನ್ ಇಂಡಿಯಾ) ಸರ್ವೇ ಏಜೆನ್ಸಿಯ ಸಹಭಾಗಿತ್ವದಲ್ಲಿ ಕೇಂದ್ರ ಸರಕಾರ ನಡೆಸಿದ ಸಮೀಕ್ಷೆ ಯಲ್ಲಿ ಈ ಮಾಹಿತಿ ಬಹಿ ರಂಗ ಗೊಂಡಿದೆ. ಚೀನೀ ಕಂಪೆನಿ ಗಳ ಸಾಲದ ಆ್ಯಪ್ ಗಳ ಕಿರುಕುಳ ಪ್ರಕರಣ ಗಳು ಬೆಳಕಿಗೆ ಬಂದಿರುವ ಸಮಯ ದಲ್ಲಿಯೇ ಈ ಸಮೀಕ್ಷೆ ಮಹತ್ವ ಪಡೆದಿದೆ.
ಶೇ. 52.5 ಋಣಭಾರ! :
ಬೇರೆಲ್ಲ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಶೇ. 52.5ರಷ್ಟು ಕುಟುಂಬಗಳು ಸಾಲಭಾರದಿಂದ ನರಳುತ್ತಿವೆ. ಇದರಲ್ಲಿ ಗ್ರಾಮೀಣ ಭಾಗದ ಪಾಲು ಶೇ. 62.5, ನಗರವಾಸಿಗಳ ಪಾಲು ಶೇ. 33.1 ಎಂದು ಸಮೀಕ್ಷೆ ಹೇಳಿದೆ.
ಅನಂತರದ ಸ್ಥಾನದಲ್ಲಿ ಆಂಧ್ರಪ್ರದೇಶವಿದ್ದು, ಶೇ. 44 ಕುಟುಂಬಗಳು ಋಣಭಾರ ಹೊಂದಿವೆ. 3ನೇ ಸ್ಥಾನದಲ್ಲಿರುವ ಬಿಹಾರದ ಶೇ. 41ರಷ್ಟು ಕುಟುಂಬಗಳು ಸಾಲದಿಂದ ಸಂಕಷ್ಟಕ್ಕೆ ತಳ್ಳಲ್ಪಟ್ಟಿವೆ ಎಂದು ಸಮೀಕ್ಷೆ ತಿಳಿಸಿದೆ.
ಆತ್ಮಹತ್ಯೆಯಲ್ಲಿ ನಂ. 2! :
ಬ್ಯಾಂಕ್‌ನಿಂದ ಸಾಲ ಪಡೆದು ತೀರಿಸಲಾಗದೆ ಸಾವನ್ನಪ್ಪಿದವರ ಸಂಖ್ಯೆಯಲ್ಲಿ ಕರ್ನಾಟಕ ನಂ. 2 ಸ್ಥಾನದಲ್ಲಿದ್ದು, ನಂ. 1 ಸ್ಥಾನ ಮಹಾರಾಷ್ಟ್ರದ ಪಾಲಾಗಿದೆ. ಬ್ಯಾಂಕ್ ಸಾಲ ತೀರಿಸಲಾಗದೆ ಮಹಾರಾಷ್ಟ್ರ ದಲ್ಲಿ 1,526 ಮಂದಿ, ಕರ್ನಾಟಕದಲ್ಲಿ 1,432 ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ರಾಷ್ಟ್ರೀಯ ಅಪರಾಧ ವರದಿ ಬ್ಯೂರೋದ 2019ರ ಸರ್ವೇ ಈ ಮಾಹಿತಿ ನೀಡಿದೆ.
ಕೌಟುಂಬಿಕ ಸಾಲಬಾಧೆ :
ಕರ್ನಾಟಕ
ಶೇ. 52.5
ಆಂಧ್ರಪ್ರದೇಶ
ಶೇ. 44
ಬಿಹಾರ
ಶೇ. 41
ಸಾಲದಿಂದ ಆತ್ಮಹತ್ಯೆ :
ಮಹಾರಾಷ್ಟ್ರ
1,526
ಕರ್ನಾಟಕ
1,432
ಆಂಧ್ರಪ್ರದೇಶ
989