ಮಣಿಪಾಲ: ಮೂರು ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿದ್ದ 25 ಸ್ಥಾನಗಳ ವಿಧಾನ ಪರಿಷತ್ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಜಿದ್ದಾಜಿದ್ದಿನ ಫೈಟ್ ನಲ್ಲಿ ಬಿಜೆಪಿ 12, ಕಾಂಗ್ರೆಸ್ 11 ಸ್ಥಾನಗಳನ್ನು ಗೆದ್ದರೆ, ಜೆಡಿಎಸ್ ಒಂದು ಸ್ಥಾನಕ್ಕೆ ತೃಪ್ತಿಪಟ್ಟಿದೆ. ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿಯವರು ಗೆದ್ದು ಬಿಜೆಪಿಗೆ ಅಚ್ಚರಿ ಮೂಡಿಸಿದ್ದಾರೆ.
ಇಂದಿನ 12 ಸ್ಥಾನಗಳ ಗೆಲುವಿನೊಂದಿಗೆ ಬಿಜೆಪಿ ವಿಧಾನ ಪರಿಷತ್ ನಲ್ಲಿ ಬಹುಮತ ಪಡೆದಿದೆ. 75 ಸದಸ್ಯಬಲದ ಮೇಲ್ಮನೆಯಲ್ಲಿ 38 ಮ್ಯಾಜಿಕ್ ನಂಬರ್ ಆಗಿದೆ. ಇಂದಿನ ಫಲಿತಾಂಶದ ಬಳಿಕ ಬಿಜೆಪಿ ಸರಿಯಾಗಿ 38 ಸ್ಥಾನಗಳನ್ನು ಪಡೆದಿದೆ.
ಈ ಹಿಂದೆ 29 ಸ್ಥಾನಗಳನ್ನು ಹೊಂದಿದ್ದ ಕಾಂಗ್ರೆಸ್ ನಿಂದ 14 ಮಂದಿ ಸದಸ್ಯರು ಚುನಾವಣೆಯಲ್ಲಿದ್ದರು. ಇದೀಗ ಅದರಲ್ಲಿ 11 ಮಂದಿ ಗೆಲುವು ಕಂಡಿದ್ದು, ಪರಿಷತ್ ನಲ್ಲಿ ಕಾಂಗ್ರೆಸ್ ಬಲ 26ಕ್ಕೆ ಇಳಿಕೆಯಾಗಿದೆ.
12 ಸದಸ್ಯರನ್ನು ಹೊಂದಿದ್ದ ಜೆಡಿಎಸ್ ನಿಂದ ನಾಲ್ಕು ಮಂದಿ ಸದಸ್ಯರು ಚುನಾವಣಾ ಕಣದಲ್ಲಿದ್ದು, ಇದೀಗ ಒಂದು ಕ್ಷೇತ್ರದಲ್ಲಿ ಮಾತ್ರ ಗೆಲುವು ಸಾಧಿಸಿದೆ. ಹೀಗಾಗಿ ಜೆಡಿಎಸ್ ನ ಸದಸ್ಯ ಬಲ 9ಕ್ಕೆ ಬಂದು ನಿಂತಿದೆ.
ವಿಧಾನ ಪರಿಷತ್ ಬಲಾಬಲ
ಚುನಾವಣಾ ಫಲಿತಾಂಶ
ಬಿಜೆಪಿ- 12
ಬೆಂಗಳೂರು ನಗರ – ಗೋಪಿನಾಥ ರೆಡ್ಡಿ
ಮಡಿಕೇರಿ – ಸುಜಾ ಕುಶಾಲಪ್ಪ
ಶಿವಮೊಗ್ಗ – ಡಿ.ಎಸ್.ಅರುಣ್
ಚಿತ್ರದುರ್ಗ – ಕೆಎಸ್ ನವೀನ್
ಬಳ್ಳಾರಿ – ವೈಎಂ ಸತೀಶ್
ಉತ್ತರ ಕನ್ನಡ – ಗಣಪತಿ ಉಳ್ವೇಕರ್
ಚಿಕ್ಕಮಗಳೂರು – ಎಂ.ಕೆ.ಪ್ರಾಣೇಶ್
ಉಡುಪಿ-ದಕ್ಷಿಣ ಕನ್ನಡ – ಕೋಟಾ ಶ್ರೀನಿವಾಸ ಪೂಜಾರಿ
ಕಲಬುರಗಿ – ಯಾದಗಿರಿ – ಬಿ ಜಿ ಪಾಟೀಲ್
ಹುಬ್ಬಳ್ಳಿ – ಧಾರವಾಡ – ಪ್ರದೀಪ್ ಶೆಟ್ಟರ್
ವಿಜಯಪುರ-ಬಾಗಲಕೋಟೆ – ಪಿ ಎಚ್ ಪೂಜಾರ್
ಮೈಸೂರು-ಚಾಮರಾಜನಗರ – ರಘು ಕೌಟಿಲ್ಯ
ಇದನ್ನೂ ಓದಿ:ನಾಮಿನೇಷನ್ ದಿನ ಆಡಿ ಕಾರಿನಲ್ಲಿ ಇಳಿದ KGF ಬಾಬು, ಚುನಾವಣಾ ಫಲಿತಾಂಶ ದಿನ ರಿಕ್ಷಾ ಹತ್ತಿದರು
ಕಾಂಗ್ರೆಸ್ – 11
ಬೀದರ್ – ಭೀಮರಾವ್ ಬಿ ಪಾಟೀಲ್
ತುಮಕೂರು – ರಾಜೇಂದ್ರ
ಕೋಲಾರ – ಎಂ.ಎಲ್. ಅನಿಲ್ ಕುಮಾರ್
ವಿಜಯಪುರ-ಬಾಗಲಕೋಟೆ – ಸುನೀಲ್ ಗೌಡ ಪಾಟೀಲ್
ಹುಬ್ಬಳ್ಳಿ – ಧಾರವಾಡ – ಸಲೀಂ ಅಹ್ಮದ್
ರಾಯಚೂರು-ಕೊಪ್ಪಳ – ಶರಣಗೌಡ ಪಾಟೀಲ್ ಬಯ್ಯಾಪುರ
ಮಂಡ್ಯ – ದಿನೇಶ್ ಗೂಳಿಗೌಡ
ಮೈಸೂರು – ಚಾಮರಾಜನಗರ – ಡಿ. ತಿಮ್ಮಯ್ಯ
ಉಡುಪಿ-ದಕ್ಷಿಣ ಕನ್ನಡ – ಮಂಜುನಾಥ್ ಭಂಡಾರಿ
ಬೆಳಗಾವಿ-ಚಿಕ್ಕೋಡಿ ಚನ್ನರಾಜು
ಬೆಂಗಳೂರು ಗ್ರಾಮಾಂತರ – ಎಸ್.ರವಿ
ಇದನ್ನೂ ಓದಿ:ಬಿಜೆಪಿಗೆ ಧಮ್ ಇಲ್ಲ, ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆಯಿದೆ: ಸಿದ್ದರಾಮಯ್ಯ
ಜೆಡಿಎಸ್ – 1
ಹಾಸನ – ಸೂರಜ್ ರೇವಣ್ಣ
ಪಕ್ಷೇತರ – 1
ಬೆಳಗಾವಿ-ಚಿಕ್ಕೋಡಿ – ಲಖನ್ ಜಾರಕಿಹೊಳಿ
ದ್ವಿಸದಸ್ಯತ್ವ
ಉಡುಪಿ-ದಕ್ಷಿಣ ಕನ್ನಡ – ಕೋಟಾ ಶ್ರೀನಿವಾಸ ಪೂಜಾರಿ (ಬಿಜೆಪಿ)
ಉಡುಪಿ-ದಕ್ಷಿಣ ಕನ್ನಡ – ಮಂಜುನಾಥ್ ಭಂಡಾರಿ (ಕಾಂಗ್ರೆಸ್)
ಮೈಸೂರು – ಚಾಮರಾಜನಗರ – ಡಿ. ತಿಮ್ಮಯ್ಯ (ಕಾಂಗ್ರೆಸ್)
ಮೈಸೂರು – ಚಾಮರಾಜನಗರ – ರಘು ಕೌಟಿಲ್ಯ (ಬಿಜೆಪಿ)
ವಿಜಯಪುರ-ಬಾಗಲಕೋಟೆ – ಸುನೀಲ್ ಗೌಡ ಪಾಟೀಲ್ (ಕಾಂಗ್ರೆಸ್)
ವಿಜಯಪುರ-ಬಾಗಲಕೋಟೆ – ಪಿ ಎಚ್ ಪೂಜಾರ್ (ಬಿಜೆಪಿ)
ಹುಬ್ಬಳ್ಳಿ – ಧಾರವಾಡ – ಸಲೀಂ ಅಹ್ಮದ್ (ಕಾಂಗ್ರೆಸ್)
ಹುಬ್ಬಳ್ಳಿ – ಧಾರವಾಡ – ಪ್ರದೀಪ್ ಶೆಟ್ಟರ್ (ಬಿಜೆಪಿ)
ಬೆಳಗಾವಿ-ಚಿಕ್ಕೋಡಿ ಚನ್ನರಾಜು (ಕಾಂಗ್ರೆಸ್)
ಬೆಳಗಾವಿ-ಚಿಕ್ಕೋಡಿ ಲಖನ್ ಜಾರಕಿಹೊಳಿ (ಪಕ್ಷೇತರ)