Advertisement
ಬುಧವಾರ ಬೆಳ್ಳಂಬೆಳಗ್ಗೆ ಬೆಂಗಳೂರಿನಿಂದ ತಿಂಡಿಯನ್ನೂ ಸೇವಿಸದೆ ತೆರಳಿದ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಹೊಟೇಲ್ ಪ್ರವೇಶಿಸಲು ಪೊಲೀಸರು ತಡೆ ಒಡ್ಡಿದ್ದಾರೆ. ಡಿ.ಕೆ.ಶಿವಕುಮಾರ್ ಅವರೊಂದಿಗೆ ಇದ್ದ ಸಚಿವರಾದ ಜಿ.ಟಿ.ದೇವೇಗೌಡ, ಶಾಸಕ ಶಿವಲಿಂಗೇ ಗೌಡ ಅವರಿಗೂ ಹೊಟೇಲ್ ಒಳಗೆ ಪ್ರವೇಶಿಸದಂತೆ ತಡೆದಿದ್ದಾರೆ.
ನಾನು ಅತೃಪ್ತ ಶಾಸಕರನ್ನು ಭೇಟಿಯಾಗಿಯೇ ಮರಳುವುದು ಎಂದು ಪಟ್ಟು ಹಿಡಿದು ಕುಳಿತಿರುವ ಸಚಿವ ಡಿ.ಕೆ.ಶಿವಕುಮಾರ್ ಅವರು ಬೆಳಗ್ಗೆ ಕಾಫಿಯನ್ನು ರಸ್ತೆಯಲ್ಲೇ ಕುಡಿದಿದ್ದಾರೆ. 10 ಗಂಟೆಯ ಬಳಿಕ ಹಸಿವಾಗುತ್ತಿದೆ ಎಂದು ಹೇಳಿದಾಗ ಮುಂಬಯಿ ಪೊಲೀಸರು ಇಡ್ಲಿ,ವಡೆ ಮತ್ತುಟೀ ತಂದು ಕೊಟ್ಟಿದ್ದು ಅದನ್ನೂ ಸೇವಿಸಿದ್ದಾರೆ. ಕೆಲ ಹೊತ್ತಿನ ಬಳಿಕ ಕುರ್ಚಿಗಳನ್ನು ತಂದು ಕೊಡಲಾಗಿದ್ದು ಸ್ಥಳದಿಂದ ಕದಲದೆ ಪಟ್ಟು ಹಿಡಿದು ಕುಳಿತಿದ್ದಾರೆ. ನಾನು ಯಾವುದುಕ್ಕೂ ಜಗ್ಗುವುದಿಲ್ಲ, ಶಾಸಕರು ನಮ್ಮವರು ಅವರ ಬಳಿ ಮಾತನಾಡಿಯೇ ತೆರಳುತ್ತೇನೆ. ಇಲ್ಲೆ ಬಿದ್ದು ಹೋದರು ಚಿಂತೆ ಇಲ್ಲ ಎಂದು ಹೇಳಿದ್ದಾರೆ.
Related Articles
Advertisement
ಡಿ.ಕೆ.ಶಿವಕುಮಾರ್ ಅವರು ರಿನೈಸೆನ್ಸ್ ಹೊಟೇಲ್ ಗೆ ಆನ್‌ಲೈನ್‌ನಲ್ಲಿ ಬುಕ್ ಮಾಡಿದ್ದ ರೂಂ ಅನ್ನು ಕ್ಯಾನ್ಸಲ್ ಮಾಡಲಾಗಿದ್ದು, ಈ ಬಗ್ಗೆ ತಾಳ್ಮೆಯಲ್ಮೆ ಉತ್ತರ ನೀಡಿದ್ದಾರೆ. ಅವರು ನನ್ನಂತಹ ಗ್ರಾಹಕನ ಬಗ್ಗೆ ಹೆಮ್ಮೆ ಪಡಬೇಕು. ನಾನು ಮುಂಬಯಿಯನ್ನು ಇಷ್ಟಪಡುತ್ತೇನೆ. ಈ ಹೊಟೇಲನ್ನು ಮೆಚ್ಚುತ್ತೇನೆ. ಅವರು ಕ್ಯಾನ್ಸಲ್ ಮಾಡಿರಬಹುದು. ನನಗೆ ಬೇರೆ ರೂಂಗಳಿವೆ ಎಂದಿದ್ದಾರೆ.