Advertisement

ಆವಿಷ್ಕಾರದಲ್ಲಿ ಕರ್ನಾಟಕವೇ ಬೆಸ್ಟ್‌!

11:05 PM Jul 21, 2022 | Team Udayavani |

ಹೊಸದಿಲ್ಲಿ: ನೀತಿ ಆಯೋಗದ ನೂತನ ಆವಿಷ್ಕಾರಗಳ ರ್‍ಯಾಂಕಿಂಗ್‌ ಪಟ್ಟಿ ಗುರು­ವಾರ ಬಿಡುಗಡೆಯಾ­ಗಿದ್ದು, ಅದರಲ್ಲಿ ಕರ್ನಾ­ಟಕವು ಮೊದಲನೇ ಸ್ಥಾನ ಪಡೆದುಕೊಂಡಿದೆ.

Advertisement

ನಾವಿನ್ಯತೆ ಸಾಮರ್ಥ್ಯ ಮತ್ತು ಪರಿಸರ ಪರಿಸ್ಥಿತಿಯನ್ನು ಆಧರಿಸಿ ತಯಾರಿಸಲಾಗಿರುವ ಸೂಚ್ಯಂಕದಲ್ಲಿ ಕರ್ನಾಟಕದ ನಂತರದ ಸ್ಥಾನಗ­ಳನ್ನು ತೆಲಂಗಾಣ ಮತ್ತು ಹರ್ಯಾಣ ಪಡೆದಿವೆ.

17 ಪ್ರಮುಖ ರಾಜ್ಯಗಳು, 10 ಈಶಾನ್ಯ ಮತ್ತು ಗುಡ್ಡಗಾಡು ರಾಜ್ಯಗಳು ಹಾಗೂ 9 ಕೇಂದ್ರಾಡಳಿತ ಪ್ರದೇಶಗಳಿಗೆ ಪ್ರತ್ಯೇಕವಾಗಿ ಸೂಚ್ಯಂಕ ತಯಾರಿಸಲಾಗಿದೆ. ಈಶಾನ್ಯ ಮತ್ತು ಗುಡ್ಡಗಾಡು ರಾಜ್ಯಗಳ ವಿಭಾಗದಲ್ಲಿ ಮಣಿಪುರ ಮೊದಲ ಸ್ಥಾನ ಗಳಿಸಿದೆ. ಹಾಗೆಯೇ ಕೇಂದ್ರಾಡಳಿತ ಪ್ರದೇಶಗಳ ವಿಭಾಗದಲ್ಲಿ ಚಂಡೀಗಢ ಮೊದಲ ಸ್ಥಾನದಲ್ಲಿದ್ದರೆ ದೆಹಲಿ ಎರಡನೇ ಸ್ಥಾನದಲ್ಲಿದೆ. ರಾಜ್ಯಗಳ ಪಟ್ಟಿಯಲ್ಲಿ ಛತ್ತೀಸ್‌ಗಢ, ಒಡಿಶಾ ಮತ್ತು ಬಿಹಾರವು ಕೊನೆಯ ಮೂರು ಸ್ಥಾನಗಳಲ್ಲಿ ಕಾಣಿಸಿಕೊಂಡಿವೆ.

ಮೂರನೇ ಬಾರಿಗೆ ಅಗ್ರಸ್ಥಾನ:  ನೀತಿ ಆಯೋಗವು 2019 ಮತ್ತು 2020ರಲ್ಲಿಯೂ ಸೂಚ್ಯಂಕ ಬಿಡುಗಡೆ ಮಾಡಿತ್ತು. ಅವೆರಡೂ ಸೂಚ್ಯಂಕದಲ್ಲಿಯೂ ಕರ್ನಾ­ಟಕ ಅಗ್ರಸ್ಥಾನವನ್ನೇ ಪಡೆದುಕೊಂಡಿತ್ತು. ಈ ವರ್ಷವೂ ಕರ್ನಾಟಕ ಸ್ಥಾನ ಕಾಪಾಡಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next