Advertisement

Karnataka: ಭ್ರಷ್ಟರ ಮೇಲೆ ಲೋಕಾಯುಕ್ತ ದಾಳಿ: 48.55 ಕೋ. ರೂ. ಆಸ್ತಿ ಪತ್ತೆ

11:56 PM Dec 10, 2024 | Team Udayavani |

ಬೆಂಗಳೂರು: ಆದಾಯ ಮೀರಿ ಆಸ್ತಿ ಗಳಿಕೆ, ಭ್ರಷ್ಟಾಚಾರ ಆರೋಪ ಸಂಬಂಧ ವಿಶೇಷ ಕಾರ್ಯಾಚರಣೆ ನಡೆಸಿದ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ರಾಜ್ಯದ 10 ಮಂದಿ ಅಧಿಕಾರಿಗಳಿಗೆ ಸೇರಿದ 50ಕ್ಕೂ ಅಧಿಕ ಸ್ಥಳಗಳ ಮೇಲೆ ದಾಳಿ ನಡೆಸಿ ಪರಿಶೀಲಿಸಿದ್ದಾರೆ.

Advertisement

ಒಟ್ಟು 48.55 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಅಸಮತೋಲನ ಆಸ್ತಿ ಪತ್ತೆಯಾಗಿದ್ದು, ದಾಖಲೆಗಳನ್ನು ಜಪ್ತಿ ಮಾಡಲಾಗಿದೆ. ಮೂಲ ದಾಖಲೆ ನೀಡುವಂತೆ ನೋಟಿಸ್‌ ಜಾರಿಗೊಳಿಸಲಾಗಿದೆ.

ಬೆಂಗಳೂರು ಪೂರ್ವ ವೃತ್ತದ ಬೆಸ್ಕಾಂನ ಅಧೀಕ್ಷಕ ಎಂಜಿನಿಯರ್‌ ಎಂ. ಲೋಕೇಶ್‌ (6.70 ಕೋಟಿ ರೂ. ಮೌಲ್ಯ), ಬಿಬಿಎಂಪಿ ಬೊಮ್ಮನಹಳ್ಳಿ ವಲಯದ ಕಂದಾಯ ನಿರೀಕ್ಷಕ ಎಸ್‌.ಜಿ. ಸುರೇಶ್‌ (1.82 ಕೋಟಿ ರೂ. ಮೌಲ್ಯ), ಬಿಬಿಎಂಪಿಯ ವಿದ್ಯಾರಣ್ಯಪುರ ಉಪ ವಿಭಾಗದ ತೆರಿಗೆ ನಿರೀಕ್ಷಕ ಕೃಷ್ಣಪ್ಪ (2.21 ಕೋಟಿ ರೂ. ಮೌಲ್ಯ), ಬೆಂಗಳೂರು ಗ್ರಾಮಾಂತರ ದೇವನಹಳ್ಳಿಯ ಜಿಲ್ಲಾ ಆರೋಗ್ಯಾಧಿಕಾರಿ ಎಂ.ಸಿ. ಸುನೀಲ್‌ ಕುಮಾರ್‌ (6.63 ಕೋಟಿ ರೂ. ಮೌಲ್ಯ), ಉನ್ನತ ಶಿಕ್ಷಣ ಇಲಾಖೆಯ ಉಪ ಕಾರ್ಯದರ್ಶಿ ಕೆ. ಈಕೇಶ್‌ ಬಾಬು (7.92 ಕೋಟಿ ರೂ. ಮೌಲ್ಯ), ಚನ್ನಪಟ್ಟಣದ ಪೊಲೀಸ್‌ ತರಬೇತಿ ಶಾಲೆಯ ಸಶಸ್ತ್ರ ವಿಭಾಗದ ಡಿವೈಎಸ್ಪಿ ನಂಜುಂಡಯ್ಯ (12.53 ಕೋಟಿ ರೂ. ಮೌಲ್ಯ), ಗದಗ ಜಿಲ್ಲೆಯ ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ವಿಭಾಗದ ಎಸ್‌ಡಿಎ ಲಕ್ಷ್ಮಣ್‌ ಕೊನೆರಪ್ಪ ಕರಣಿ (2.01 ಕೋಟಿ ರೂ. ಮೌಲ್ಯ), ಕಲಬುರಗಿಯ ಪಾಲಿಕೆಯ ಅಧೀಕ್ಷಕ ಎಂಜಿನಿಯರ್‌ ರಾಮಪ್ಪ ಪಾಂಡು ಜಾಧವ್‌ (3.58 ಕೋಟಿ ರೂ. ಮೌಲ್ಯ), ಕೊಪ್ಪಳ ಜಿಲ್ಲೆಯ ಅಬಕಾರಿ ಇಲಾಖೆಯ ಅಬಕಾರಿ ನಿರೀಕ್ಷಕ ರಮೇಶ್‌ ಬಿ. ಅಗಡಿ (1.61 ಕೋಟಿ ರೂ. ಮೌಲ್ಯ), ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಉಪವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಎಸ್‌. ಸುರೇಶ್‌ (3.50 ಕೋಟಿ ರೂ. ಮೌಲ್ಯ) ಅವರಿಗೆ ಸೇರಿದ ಕಚೇರಿ, ಮನೆ, ಸಂಬಂಧಿಕರ ಮನೆಗಳು ಸೇರಿ 50 ಕಡೆ ದಾಳಿ ನಡೆಸಲಾಗಿದೆ. ಈ ಸಂಬಂಧ ಆಯಾ ವ್ಯಾಪ್ತಿಯ ಲೋಕಾಯುಕ್ತ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next