Advertisement

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಬೆಳ್ಳಿ ಮಹೋತ್ಸವ

10:44 PM May 11, 2019 | Sriram |

ಮಡಿಕೇರಿ: ಕೊಡವ ಭಾಷೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಗುರಿ ಸಾಧನೆಯ ಹಾದಿಯಲ್ಲಿರುವ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಬೆಳ್ಳಿಮಹೋತ್ಸವದ ಸಂಭ್ರಮದಲ್ಲಿದ್ದು, “”ಬೊಳ್ಳಿನಮ್ಮೆ” ಕಾರ್ಯಕ್ರಮದ ಲೋ ಗೋವನ್ನು ಅನಾವರಣಗೊಳಿಸಲಾಯಿತು.

Advertisement

ನಗರದಲ್ಲಿರುವ ಅಕಾಡೆಮಿಯ ಕಚೇರಿಯಲ್ಲಿ ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಕೆ.ಪೊನ್ನಪ್ಪ, ರಿಜಿಸ್ಟ್ರಾರ್‌ ಚಂದ್ರಹಾಸ ರೈ ಹಾಗೂ ಸರ್ವ ಸದಸ್ಯರು ಲೋಗೋವನ್ನು ಅನಾವರಣಗೊಳಿಸಿ ಜೂ.8 ಮತ್ತು 9 ರಂದು ಗೋಣಿಕೊಪ್ಪಲಿನ ಕಾವೇರಿ ಕಾಲೇಜಿನಲ್ಲಿ ನಡೆಯುವ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.

“ಬೊಳ್ಳಿನಮ್ಮೆ” ಕಾರ್ಯಕ್ರಮದ ಸಂದರ್ಭ ಗೌರವ ಪ್ರಶಸ್ತಿ ಪ್ರದಾನ ಸಮಾರಂಭವೂ ನಡೆಯಲಿದ್ದು, ಸಾಹಿತ್ಯ, ಕಲೆ, ಜಾನಪದ ಕ್ಷೇತ್ರದಲ್ಲಿ ಜೀವಮಾನದ ಸಾಧನೆಗೈದ ಹಿರಿಯ ಮೂವರು ಸಾಧಕರನ್ನು ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗುವುದು. ಆಯ್ಕೆಯಾದವರಿಗೆ ತಲಾ 50 ಸಾವಿರ ರೂ.ನಗದು ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು. ಸರಕಾರದ ಮಾರ್ಗಸೂಚಿಯಂತೆ ಗೌರವ ಪ್ರಶಸ್ತಿ ಯನ್ನು ನೀಡಲಾಗುತ್ತಿದ್ದು, ಅರ್ಹರನ್ನು ಸದ್ಯದಲ್ಲಿಯೇ ಆಯ್ಕೆ ಮಾಡಲಾಗುವುದು ಎಂದು ಪೆಮ್ಮಂಡ ಕೆ.ಪೊನ್ನಪ್ಪ ತಿಳಿಸಿದರು.

ಕಳೆದ 25 ವರ್ಷಗಳಲ್ಲಿ ಕೊಡವ ಸಾಹಿತ್ಯ ಅಕಾಡೆಮಿ ನಡೆದು ಬಂದ ಹಾದಿ ಮತ್ತು ಸಾಧನೆಯ ಅವಲೋಕನ ಬೊಳ್ಳಿನಮ್ಮೆ ಕಾರ್ಯಕ್ರಮದಲ್ಲಿ ನಡೆಯಲಿದೆ. ಕೊಡವ ಭಾಷೆ ಸಾಹಿತ್ಯ ಸಂಸ್ಕೃತಿ ಹಾಗೂ ಆಚಾರ ವಿಚಾರಗಳನ್ನೊಳಗೊಂಡಂತೆ ಅತ್ಯುತ್ತಮವಾದ ಕಾರ್ಯಕ್ರಮವನ್ನು ಸರಕಾರದಿಂದ ನೀಡಲ್ಪಟ್ಟ ಅನುದಾ ನದಿಂದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ.

ಕೊಡವ ಜಾನಪದ, ಆಚಾರ-ವಿಚಾರ, ಸಾಹಿತ್ಯ, ಕೊಡವ ರಂಗಭೂಮಿ ಚಟುವಟಿಕೆ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಜಿಲ್ಲೆಯೂ ಸೇರಿದಂತೆ ಜಿಲ್ಲೆಯ ಹೊರ ಭಾಗದಲ್ಲೂ ನಡೆಸಿಕೊಂಡು ಬರುತ್ತಿದೆ. 1994ರಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯನ್ನು ಸ್ಥಾಪಿಸಿದ ಕಾರಣಕ್ಕಾಗಿ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಲಿಅವರನ್ನು ಸೇರಿದಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ‌ ಡಿ.ಕೆ.ಶಿವಕುಮಾರ್‌, ಕೊಡಗಿನ ಉಸ್ತುವಾರಿ ಸಚಿವ‌ ಸಾ.ರಾ.ಮಹೇಶ್‌ ಹಾಗೂ ಕೊಡಗಿನ ಎಲ್ಲಾ ಜನಪ್ರತಿನಿಧಿಗಳು, ಕೊಡವ ಭಾಷಿಕ ಮುಖಂಡರುಗಳು, ಭಾಷಿಕ ಜನಾಂಗದ ಬಂಧುಗಳನ್ನು ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಹ್ವಾನಿಸಲಾಗುವುದು ಎಂದು ಪಿ.ಕೆ.ಪೊನ್ನಪ್ಪ ಹಾಗೂ ಚಂದ್ರಹಾಸ ರೈ ಅವರುಗಳು ಮಾಹಿತಿ ನೀಡಿದರು.

Advertisement

ಅಕಾಡೆಮಿ ಸದಸ್ಯರುಗಳಾದ ಆಪಟೀರ ಎಸ್‌. ಟಾಟು ಮೊಣ್ಣಪ್ಪ,ಬೀಕಚಂಡ ಬೆಳ್ಯಪ್ಪ,ಸುಳ್ಳಿಮಾಡ ಭವಾನಿ ಕಾವೇರಿಯಪ್ಪ,ಅಜ್ಜಮಾಡ ಕುಶಾಲಪ್ಪ,ಅಮ್ಮಣಿಚಂಡ ಪ್ರವಿಣ್‌ ಚಂಗಪ್ಪ,ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ,ಕುಡಿಯರ ಶಾರದ, ಮನ್ನಕ್ಕಮನೆ ಬಾಲಕೃಷ್ಣ,ಹಂಚೆಟ್ಟಿರ ಮನು ಮುದ್ದಪ್ಪ, ಗಣಪತಿ ಹೆಚ್‌.ಎ,ಬೊಳ್ಳಜಿರ ಬಿ.ಅಯ್ಯಪ್ಪ, ಆಂಗೀರ ಕುಸುಂ, ಹಾಗೂ ನಾಳಿಯಮ್ಮಂಡ ಕೆ. ಉಮೇಶ್‌ ಉಪಸ್ಥಿತರಿದ್ದರು.

ಪ್ರದರ್ಶನ
ಪ್ರಸ್ತುತ ಬೊಳ್ಳಿನಮ್ಮೆ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಮೆರವಣಿಗೆ, ಕವಿಗೋಷ್ಠಿ,ವಿಚಾರಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳು, ಕೊಡವ ಸಂಸ್ಕೃತಿಯ ಛಾಯಚಿತ್ರ ಮತ್ತು ಸಾಕ್ಷ್ಯಚಿತ್ರ ಪ್ರದರ್ಶನ, ಪ್ರಾಚೀನ ವಸ್ತು ಪ್ರದರ್ಶನ, ಕೊಡವ ಸಾಂಪ್ರಾದಾಯಿಕ ತಿನಿಸುಗಳು ಹಾಗೂ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟವನ್ನು ಆಯೋಜಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next