Advertisement
ಕಾಡಾನೆ ನಿಯಂತ್ರಣಕ್ಕೆ ಲಕ್ಷಾಂತರ ರೂ. ಖರ್ಚು ಮಾಡಿ ನಿರ್ಮಿಸಿದ ರಕ್ಷಣ ಬೇಲಿಗಳನ್ನೇ ಹಿಂಡಾನೆಗಳು ದಾಟಿಕೊಂಡೇ ಕೃಷಿ ತೋಟಕ್ಕೆ ನುಗ್ಗುತ್ತಿವೆ.
ಕೇರಳ-ಕರ್ನಾಟಕ ಗಡಿಭಾಗದಲ್ಲಿರುವ 9 ಗ್ರಾಮಗಳ 63 ಪ್ರದೇಶಗಳು ಕಾಡಾನೆ ಹಾವಳಿಗೆ ನಲುಗಿವೆ. ಹತ್ತಾರು ವರ್ಷಗಳಿಂದ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ. ಕಳೆದ 7 ವರ್ಷಗಳಲ್ಲಿ 9 ಗ್ರಾಮಗಳಲ್ಲಿ ಕೃಷಿ ತೋಟಕ್ಕೆ ಆನೆ ದಾಳಿಯಿಟ್ಟ ಬಗ್ಗೆ ಬೆಳೆಗಾರರು ಅರಣ್ಯ ಇಲಾಖೆಯಲ್ಲಿ ದಾಖಲಿಸಿದ ಪ್ರಕರಣಗಳ ಸಂಖ್ಯೆ 259. ದೂರು ನೀಡದಿರುವ ಹಲವು ಪ್ರಕರಣಗಳು ಇವೆ. ಇಲ್ಲಿ ಆನೆ ತೋಟಕ್ಕೆ ನುಗ್ಗುವುದು ನಿರಂತರ.
Related Articles
ಆನೆ ಬಾಧಿತ ಪ್ರದೇಶದಲ್ಲಿ ಹಲವೆಡೆ ಆನೆ ಅಗರ್ (ಕಂದಕ), ರೈಲ್ವೇ ಹಳಿ ನಿರ್ಮಾಣ, ಸುರಕ್ಷಾ ಬೇಲಿ ಮೊದಲಾದ ನಿಯಂತ್ರಕ ಸಾಧನ ಅನುಷ್ಠಾನಿಸಲಾಗಿದ್ದು, ಅದರಿಂದ ಶಾಶ್ವತ ಪರಿಹಾರ ಸಿಕ್ಕಿಲ್ಲ. ಆನೆ ದಾಳಿ ಇಡುವ ಪ್ರಕ್ರಿಯೆ ನಿರಂತರವಾಗಿ ಮುಂದುವರಿದಿದೆ. ರಕ್ಷಣ ಬೇಲಿ ಸನಿಹದಲ್ಲೇ ದಾರಿ ಮಾಡಿಕೊಂಡು ಕೃಷಿ ತೋಟಕ್ಕೆ ನುಸುಳುತ್ತಿರುವುದಕ್ಕೆ ಹಲವು ಸಾಕ್ಷಿಗಳು ಕಂಡು ಬರುತ್ತಿವೆ.
Advertisement
ಬೇಲಿ ದುಬಾರಿ!ಸಬ್ಸಿಡಿ ದರದಲ್ಲಿ ಕೃಷಿಕರು ಸ್ವತಃ ತಮ್ಮ ಜಮೀನು ಸುತ್ತ ಸೋಲಾರ್ ಬೇಲಿ ಅಳವಡಿಸುವ ಯೋಜನೆ ಸರಕಾರದ ಮೂಲಕ ಇದೆಯಾದರೂ ಅದರ ವೆಚ್ಚವೇ ದುಬಾರಿ. ಸಬ್ಸಿಡಿ ಹಣ ಸಿಕ್ಕಿದರೂ 1 ಕಿ.ಮೀ. ದೂರಕ್ಕೆ 1.15 ಲಕ್ಷ ರೂ. ವೆಚ್ಚವನ್ನು ಫಲಾನುಭವಿಯೇ ಭರಿಸಬೇಕು. ಇದು ಸಣ್ಣ ಪುಟ್ಟ ಕೃಷಿಕರಿಂದ ಅಸಾಧ್ಯ. ಕಡತ ಪರಿಶೀಲನೆ
ಆನೆ ದಾಳಿಯಿಂದ ನಷ್ಟ ಪರಿಹಾರ ಮೊತ್ತ ವನ್ನು ಫಲಾನುಭವಿಗಳಿಗೆ ಅರಣ್ಯ ಇಲಾಖೆ ಪಾವತಿಸುತ್ತಲಿದೆ. 30 ಫಲಾನುಭವಿಗಳಿಗೆ 5.95 ಲ.ರೂ.ಪಾವತಿಸಲು ಬಾಕಿ ಇದೆ. 2019-20ನೇ ಸಾಲಿನಲ್ಲಿ ಜೂ. 18ರ ತನಕ 5 ಹಾನಿ ಪ್ರಕರಣ ದಾಖಲಾಗಿದ್ದು, ಉಪ ವಲಯ ಅರಣ್ಯಧಿಕಾರಿಗಳ ಕಚೇರಿಯಲ್ಲಿ ಕಡತ ಪರಿಶೀಲನೆ ಪ್ರಗತಿಯಲ್ಲಿದೆ. ದಾಳಿ ನಿರಂತರ
ಕಾಡಾನೆ ಕೃಷಿ ತೋಟಕ್ಕೆ ನಿರಂತರವಾಗಿ ದಾಳಿಯಿಡುತ್ತಿದೆ. ಅರಣ್ಯ ಭಾಗದಲ್ಲಿ ಇಲಾಖೆ ಅಳವಡಿಸಿರುವ ಸುರಕ್ಷಾ ಬೇಲಿ ದಾಟಿಕೊಂಡೇ ಕೃಷಿ ತೋಟಕ್ಕೆ ನುಗ್ಗುತ್ತಿದೆ. ಇಲ್ಲಿ ನಿಯಂತ್ರಣಕ್ಕೆ ತಾತ್ಕಾಲಿಕ ಪರಿಹಾರದ ಬದಲು ಶಾಶ್ವತ ಪರಿಹಾರ ಅತ್ಯಗತ್ಯ.
– ಶ್ರೀಶ ಶರ್ಮ, ಬೋಳುಗಲ್ಲು, ಕೃಷಿಕ ಸ್ಥಳಾಂತರಕ್ಕೆ ಮಾಹಿತಿ
ಹಲವು ನಿಯಂತ್ರಣ ಕ್ರಮ ಕೈಗೊಂಡಿದೆ. ನಷ್ಟಕ್ಕೆ ಪರಿಹಾರ ವಿತರಿಸಲಾ ಗುತ್ತಿದೆ. ಹಿಂಡಾನೆ ಗುಂಪೊಂದು ಪದೇ ಪದೇ ದಾಳಿ ಮಾಡುತ್ತಿದ್ದು, ಆನೆ ಸ್ಥಳಾಂತರಕ್ಕೆ ಸಂಬಂಧಿಸಿ ಜಿಲ್ಲಾ ಮಟ್ಟದ ಸಭೆಯಲ್ಲಿ ಮಾಹಿತಿ ನೀಡಲಾಗಿದೆ.
– ಮಂಜುನಾಥ ಎನ್.
ವಲಯ ಅರಣ್ಯಾಧಿಕಾರಿ, ಸುಳ್ಯ ವಲಯ
-ಶಿವಪ್ರಸಾದ್ ಮಣಿಯೂರು